ಬಿಗ್‌ಬಾಸ್ ವೇದಿಕೇಲಿ ಶರ್ಟ್ ಬಿಚ್ಚಿ ಬಾಡಿ ತೋರಿಸಿದ ಸಲ್ಮಾನ್ ಖಾನ್: ಕತ್ರಿನಾ ಕೈಫ್‌ ಪರ ನಿಂತು ಟ್ರೋಲಿಗರಿಗೆ ಬೆಂಡೆತ್ತಿದ ಭಾಯ್‌ಜಾನ್!

Salman Khan showing his six-pack abs on the Bigg Boss stage alongside an image of Katrina Kaif.

ಹಿಂದಿ  ಬಿಗ್‌ಬಾಸ್ ಸೀಸನ್ 20 ‘ವೀಕೆಂಡ್ ಕಾ ವಾರ್’ ಎಪಿಸೋಡ್‌ನಲ್ಲಿ ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ಫುಲ್ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಮ್ಮನೆ ಕುಳಿತು ನಟ-ನಟಿಯರ ರೂಪ, ತೂಕದ ಬಗ್ಗೆ ಗೇಲಿ ಮಾಡೋ ಟ್ರೋಲಿಗರಿಗೆ ವೇದಿಕೆ ಮೇಲಿಂದಲೇ ಖಡಕ್ ಕ್ಲಾಸ್ ತಗೊಂಡಿದ್ದಾರೆ.

ಕತ್ರಿನಾ ಕೈಫ್ ಪರ ಸಲ್ಮಾನ್ ಬ್ಯಾಟಿಂಗ್!

ಕೆಲವು ದಿನಗಳಿಂದ ನಟಿ ಕತ್ರಿನಾ ಕೈಫ್ ಅವರ ತೂಕ ಹೆಚ್ಚಾಗಿದೆ, ಮೊದಲಿನ ತರ ಕಾಣ್ತಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿತ್ತು. ಇದರಿಂದ ಕೆಂಡಾಮಂಡಲವಾದ ಸಲ್ಮಾನ್ ಖಾನ್, “ಇನ್ನೊಬ್ಬರ ರೂಪ, ತೂಕದ ಬಗ್ಗೆ ಹೀಯಾಳಿಸೋಕೆ ಮುಂಚೆ ನಿಮ್ಮ ಮುಖ, ನಿಮ್ಮ ಮನೆಯವರ ಆರೋಗ್ಯ ಹೇಗಿದೆ ಅಂತ ನೋಡಿಕೊಳ್ಳಿ” ಅಂತ ನೇರವಾಗಿ ಜಾಡಿಸಿದ್ದಾರೆ.

ಲೈವ್‌ನಲ್ಲೇ ಶರ್ಟ್ ಬಿಚ್ಚಿ ಸಿಕ್ಸ್‌ಪ್ಯಾಕ್ ತೋರಿಸಿದ ಭಾಯ್!

ತಮ್ಮನ್ನು ಕೂಡ ‘ದಪ್ಪ ಆಗಿದ್ದಾರೆ, ಫಿಟ್‌ನೆಸ್ ಕಳ್ಕೊಂಡಿದ್ದಾರೆ’ ಅಂತ ಆಡಿಕೊಳ್ಳುತ್ತಿದ್ದವರಿಗೆ ಸಲ್ಮಾನ್ ಖಾನ್ ಲೈವ್ ವೇದಿಕೆಯಲ್ಲೇ ತಮ್ಮ ಕೋಟ್ ಮತ್ತು ಟಿ-ಶರ್ಟ್ ಕಳಚಿ ಖಡಕ್ ಉತ್ತರ ಕೊಟ್ಟಿದ್ದಾರೆ. 58 ವರ್ಷ ವಯಸ್ಸಿನಲ್ಲೂ ಸಲ್ಮಾನ್ ಅವರ ಕಟ್ಟುಮಸ್ತಾದ ಸಿಕ್ಸ್‌ಪ್ಯಾಕ್ ಆ್ಯಬ್ಸ್ ನೋಡಿ ಬಿಗ್‌ಬಾಸ್ ಮನೆ ಮಂದಿ ಮತ್ತು ವೀಕ್ಷಕರು ಶಾಕ್ ಆಗಿ ಚಪ್ಪಾಳೆ ತಟ್ಟಿದ್ದಾರೆ.

ಸುಳ್ಳು ವದಂತಿಗಳು ಹಾಗೂ ಪಾಪರಾಜಿಗಳಿಗೂ ಕ್ಲಾಸ್!

​ಇಷ್ಟೇ ಅಲ್ಲದೆ, “ನಾನು ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಂಡೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ರು. ಆದರೆ ನನ್ನ ಸ್ನೇಹಿತನ ತಂದೆ ತೀರಿಕೊಂಡಿದ್ದಕ್ಕೆ ನಾನು ತಲೆ ಬೋಳಿಸಿಕೊಂಡಿದ್ದೆ” ಅಂತ ಸ್ಪಷ್ಟನೆ ನೀಡಿದ್ದಾರೆ. ನಟಿಯರ ಹಿಂದಿನಿಂದ ಅನುಚಿತವಾಗಿ ಫೋಟೋ-ವಿಡಿಯೋ ತೆಗೆದು ಅಸಭ್ಯವಾಗಿ ಪೋಸ್ಟ್ ಮಾಡುವ ಪಾಪರಾಜಿಗಳ ಮೇಲೂ ಸಿಟ್ಟಿಗೆದ್ದ ಸಲ್ಮಾನ್, “ಇಂಥವರಿಗೆ ಸರಿಯಾಗಿ ಕಪಾಳಮೋಕ್ಷ ಮಾಡಬೇಕು” ಅಂತ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಸಲ್ಮಾನ್ ಖಾನ್ ಅವರ ಈ ‘ಖಡಕ್’ ಅವತಾರ ನೋಡಿ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. 

ಅಲ್ಲದೇ ನಾಳೆಯ ಪ್ರೋಮೋದಲ್ಲಿ ಎದೆಯಿಡಿದು ನರಳುವ ಕ್ಲಿಪ್ ಒಂದನ್ನು ಬಿಡುಗಡೆ ಮಾಡಲಾಗಿದ್ದು,ಅಭಿಮಾನಿಗಳು ಮತ್ತು ಪ್ರೇಕ್ಷಕರ ಲ್ಲಿ ಗಾಬರಿ‌ ಹುಟ್ಟಿಸಿದೆ.

ಒಟ್ಟು ಬಿಗ್ಬಾಸ್ ಹಿಂದಿ ವೇದಿಕೆ ಸೀಸನ್ 20 ಸಾಕಷ್ಟು ನಾಟಕೀಯ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ.


ಬಾಡಿ ಶೇಮಿಂಗ್ ಬಗ್ಗೆ ರಮ್ಯಾ ಕಿಡಿ:

ನೆನ್ನೆಯಷ್ಟೆ ಕನ್ನಡದ ಮೋಹಕತಾರೆ ರಮ್ಯಾ ಕತ್ರಿನಾ ಕೈಫ್ ದಪ್ಪ ಆಗಿರು ಬಗ್ಗೆ ಸೋಶಿಲ್ ಮೀಡಿಯಾಗಳಲ್ಲಿ ಮಾಡಲಾದ ಅಪಹಾಸ್ಯದ ಕುರಿತು ಕಿಡಿಕಾರಿದ್ದರು  ಇಂದು ಸಲ್ಮಾನ್ ಸ್ವತಹಃ ತಮಗೇ ಆಗುತ್ತಿರುವ ಬಾಡಿಶೇಮಿಂಗ್ ಕುರಿತು ಬಿಗ್ಬಾಸ್‌ ವೇದಿಕೆ ಮೇಲೆ ಶರ್ಟ್ ತೆಗೆದು ತಮ್ಮ ದೇಹ ಪ್ರದರ್ಶಿಸುವ ಮೂಲಕ‌ ಟ್ರೋಲರ್ಸ್ಗಳಿಗೆ ತಿರುಗೇಟು ನೀಡಿದ್ದಾರೆ.

Leave a Comment

Your email address will not be published. Required fields are marked *