ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13(bigboss Kannada session 13) ಸೆಪ್ಟೆಂಬರ್ 6 ,2026 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ.
ಈ ಕುರಿತು ನಡೆದ ಪತ್ರಿಕಾ ಸಭೆಯಲ್ಲಿ ಕಿಚ್ಚ ಸುದೀಪ್ ಗೆ ಬಿಗ್ ಬಾಸ್ ಕನ್ನಡದಲ್ಲಿ(bigg boss Kannada) ನಟ ದರ್ಶನ್ ಚಿತ್ರಗಳ ಹಾಡುಗಳನ್ನು ಬಳಸದಿರುವುದರ ಬಗ್ಗೆ ಪ್ರಶ್ನೆಯೊಂದು ಎದುರಾಯಿತು.
ಸಿನಿಮಾ ಪತ್ರಕರ್ತರೊಬ್ಬರು ಕೇಳಿದ ಈ ಪ್ರಶ್ನೆಗೆ ,ಟಾಕ್ಸಿಕ್ question ಪ್ರತಿಕ್ರಿಯಿಸಲ್ಲ ಅನ್ನುತ್ತಲೆ
- ತಾಂತ್ರಿಕ ಮತ್ತು ವಾಹಿನಿಯ ತೀರ್ಮಾನ: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವ ಹಾಡುಗಳನ್ನು ಬಳಸಬೇಕು ಎಂಬುದು ಸಂಪೂರ್ಣವಾಗಿ ವಾಹಿನಿಯ ಕ್ರಿಯೇಟಿವ್ ತಂಡ, ನಿರ್ಮಾಣ ಸಂಸ್ಥೆ ಮತ್ತು ಸಂಗೀತದ ಹಕ್ಕುಗಳಿಗೆ (Music Audio Rights) ಸಂಬಂಧಪಟ್ಟ ವಿಷಯ.
- ನಿರೂಪಕನ ವ್ಯಾಪ್ತಿ: “ನನ್ನ ಕೆಲಸ ವಾರಾಂತ್ಯದಲ್ಲಿ ಬಂದು ಸ್ಪರ್ಧಿಗಳ ಜೊತೆ ಸಂವಾದ ನಡೆಸುವುದು ಮತ್ತು ಕಾರ್ಯಕ್ರಮವನ್ನು ನಡೆಸಿ ಕೊಡುವುದು ಮಾತ್ರ. ಮನೆಯೊಳಗೆ ಯಾವ ದಿನ ಯಾವ ಹಾಡು ಹಾಕಬೇಕು, ಯಾರ ಹಾಡು ಪ್ರಸಾರವಾಗಬೇಕು ಎಂಬುದನ್ನು ನಾನು ನಿರ್ಧರಿಸುವುದಿಲ್ಲ. ಅದರಲ್ಲಿ ನನ್ನ ಯಾವುದೇ ಹಸ್ತಕ್ಷೇಪ ಇರುವುದಿಲ್ಲ,” ಎಂದು ಸುದೀಪ್ ಸ್ಪಷ್ಟಪಡಿಸಿದರು.
- ಕಲಾವಿದರ ಮೇಲಿನ ಗೌರವ: ಚಿತ್ರರಂಗದ ಯಾವುದೇ ಕಲಾವಿದರ ಹಾಡುಗಳು ಅಥವಾ ಕೆಲಸದ ಬಗ್ಗೆ ತಮಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಕನ್ನಡ ಚಿತ್ರರಂಗದ ಎಲ್ಲ ನಟ-ನಟಿಯರ ಹಾಡುಗಳು, ಪ್ರತಿಭೆಗಳು ಎಲ್ಲರಿಗೂ ಸಲ್ಲಬೇಕು ಎಂಬುದೇ ತಮ್ಮ ನಿಲುವು ಎಂದು ತಿಳಿಸಿದರು.
“ಹಾಗೇ ನೀವು ಎದುರಿರುವವರ ಬಗ್ಗೆ ಯೂ ಯೋಚಿಸ ಬೇಕು,ಅವರು ಕೂಡ ಹಾಡುಗಳನ್ನು ಪ್ರಸಾರ ಮಾಡದಂತೆ ತಡೆದಿರಬಹುದಲ್ಲವೇ ” ಎಂದು ಮರು ಪ್ರಶ್ನೆ ಹಾಕಿದರು..
ಸುದೀಪ್ ರವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಗೊಂದಲ ಮೂಡಿದ್ದು ನಾನಾ ರೀತಿಯಲ್ಲಿ ಅರ್ಥೈಸಿ ಪೋಸ್ಟ್ ಮಾಡುತ್ತಿದ್ದಾರೆ!
ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ(biggboss Kannada)ಸಾಕಷ್ಟು ಜನಪ್ರಿಯ ರಿಯಾಲಿಟಿ ಶೋ ಆಗಿದ್ದು ,ಮನೆಯ ಒಳಗಡೆ ನಟ ದರ್ಶನ್ ರವರ ಹಾಡುಗಳನ್ನ ಬೇಕಂತಲೇ ಹಾಕುವುದಿಲ್ಲ,ಹಾಕಿದರು ಎಡಿಟ್ಮಾಡಿ ಪ್ರಸಾರ ಮಾಡಲಾಗಿತ್ತದೆ ಎನ್ನುವ ಚರ್ಚೆ ಆಗ್ಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುತ್ತದೆ ,ಇದನ್ನೆ ಪತ್ರಕರ್ತೆಯೊಬ್ಬರು ಕೇಳಿದ್ದರು.







