💼 ಉದ್ಯೋಗ ಸುದ್ದಿಗಳು 🏏 ಕ್ರೀಡಾ ಸುದ್ದಿ ✨ ದಿನಭವಿಷ್ಯ 🇮🇳 ರಾಷ್ಟ್ರೀಯ ಸುದ್ದಿ

‘ರಾಮಾಯಣ’ ಚಿತ್ರದ ರಾವಣ ತಾಂಡವಂ ಸಾಂಗ್ ರಿಲೀಸ್: ರಾಕಿಂಗ್ ಸ್ಟಾರ್ ಯಶ್ ಮಾಸ್ ನೃತ್ಯಕ್ಕೆ ಎ.ಆರ್. ರೆಹಮಾನ್ – ರವಿ ಬಸ್ರೂರ್ ಜುಗಲ್ಬಂದಿ!

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ಆಧಾರಿತ ಸಿನಿಮಾ ‘ರಾಮಾಯಣ’ ಬಿಡುಗಡೆಗೂ ಮುನ್ನವೇ ಭಾರಿ ಸಂಚಲನ ಸೃಷ್ಟಿಸುತ್ತಿದೆ. ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಮೆಗಾ ಬಜೆಟ್ ಚಿತ್ರದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಸಾಥ್ ನೀಡಿದ್ದು, ಬಹುತಾರಾಗಣದ ಈ ಸಿನಿಮಾ ಪ್ರೇಕ್ಷಕರಲ್ಲಿ ಗಗನಮುಖಿ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜಂಟಿಯಾಗಿ ಬಂಡವಾಳ ಹೂಡಿವೆ.

ಈಗಾಗಲೇ ಚಿತ್ರದ ‘ಸೀತಾರಾಮ’ ಹಾಡು ಬಿಡುಗಡೆಯಾಗಿ ಭಕ್ತಿಪೂರ್ವಕವಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ ಜಗತ್ತಿನಾದ್ಯಂತ ಇರುವ ಯಶ್ ಅಭಿಮಾನಿಗಳು ರಾವಣನ ಎಂಟ್ರಿ ಅಥವಾ ಇಂಟ್ರೊಡಕ್ಷನ್ ಹಾಡಿಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದರು. ರಾವಣನ ಪಾತ್ರಕ್ಕೆ ಯಾವುದೇ ವಿಶೇಷ ಹಾಡು ಇರಲಿದೆಯೇ ಎಂಬ ಕುತೂಹಲಕ್ಕೆ ಚಿತ್ರತಂಡ ಇದೀಗ ಬ್ರೇಕ್ ಹಾಕಿದೆ. ರಾವಣನಿಗಾಗಿ ವಿಶೇಷವಾಗಿ ರೂಪಿಸಲಾದ ಭರ್ಜರಿ ‘ರಾವಣ ತಾಂಡವಂ’ ಹಾಡನ್ನು ಬಿಡುಗಡೆ ಮಾಡುವ ಮೂಲಕ ಇಂಟರ್ನೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ರೆಹಮಾನ್ ಮ್ಯೂಸಿಕ್, ರವಿ ಬಸ್ರೂರ್ ಕಂಠಸಿರಿ!
ಈ ಅದ್ಭುತ ಹಾಡಿಗೆ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಕಾರ್ತಿಕ್ ಸರಗೂರು ಅವರು ರಚಿಸಿದ್ದು, ರಾವಣನ ಗತ್ತು ಮತ್ತು ಭಕ್ತಿಯನ್ನು ಅದ್ಭುತವಾಗಿ ಪದಗಳಲ್ಲಿ ಸೆರೆಹಿಡಿದಿದ್ದಾರೆ. ಅತ್ಯಂತ ವಿಶೇಷವೆಂದರೆ, ಈ ರಾವಣ ತಾಂಡವ ಹಾಡಿಗೆ ಧ್ವನಿಯಾಗಿರುವುದು ಸ್ಯಾಂಡಲ್‌ವುಡ್‌ನ ಹೆಮ್ಮೆಯ ಸಂಗೀತ ನಿರ್ದೇಶಕ ರವಿ ಬಸ್ರೂರ್!

‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ  ‘ಟಾಕ್ಸಿಕ್’ ಸಿನಿಮಾಗಳ ಮೂಲಕ ಯಶ್ ಮತ್ತು ರವಿ ಬಸ್ರೂರ್ ನಡುವೆ ಗಟ್ಟಿಯಾದ ಸ್ನೇಹದ ಬಾಂಧವ್ಯ ಬೆಳೆದಿದೆ. ಈಗ ‘ರಾಮಾಯಣ’ದಲ್ಲೂ ಈ ಜೋಡಿ ಮುಂದುವರಿದಿದ್ದು, ರವಿ ಬಸ್ರೂರ್ ಅವರ ಕಂಚಿನ ಕಂಠದ ಗಾಯನ ಹಾಡಿಗೆ ದೈತ್ಯ ಶಕ್ತಿ ಮತ್ತು ಹೊಸ ಗತ್ತು ತಂದುಕೊಟ್ಟಿದೆ. ರೆಹಮಾನ್ ಸಂಗೀತ ಮತ್ತು ರವಿ ಬಸ್ರೂರ್ ಧ್ವನಿಯ ಸಂಗಮ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ಯಶ್ ರೌದ್ರ ನೃತ್ಯಕ್ಕೆ ಅಭಿಮಾನಿಗಳು ಫಿದಾ!
ಹಾಡಿನಲ್ಲಿ ರಾವಣನ ಪಾತ್ರಕ್ಕೆ ತಕ್ಕಂತೆ ರಾಕಿಂಗ್ ಸ್ಟಾರ್ ಯಶ್ ಅವರ ಮ್ಯಾನರಿಸಂ, ತೇಜಸ್ಸು ಮತ್ತು ರುದ್ರತಾಂಡವ ನೃತ್ಯ ಮೈನವಿರೇಳಿಸುವಂತಿದೆ. ಇಡೀ ನೃತ್ಯದಲ್ಲಿ ಅವರು ಕ್ಯಾರಿ ಮಾಡಿರುವ ರಾವಣನ ರಾಜಗಾಂಭೀರ್ಯ ಪ್ರತಿಯೊಬ್ಬರ ಕಣ್ಣು ಕುಕ್ಕುವಂತಿದೆ. ಯಶ್ ಅವರ ಡಿಫರೆಂಟ್ ಡ್ಯಾನ್ಸ್ ಮೂವ್ಸ್ ಹಾಗೂ ಎಕ್ಸ್‌ಪ್ರೆಶನ್‌ಗಳ ವೀಡಿಯೊ ತುಣುಕುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಯಶ್ ಅವರ ಡ್ಯಾನ್ಸ್ ಅನ್ನು ಈ ಮಟ್ಟದಲ್ಲಿ ನೋಡಿ ಬಹಳ ದಿನಗಳೇ ಆಗಿತ್ತು ಎಂದು ಸಿನಿಪ್ರೇಮಿಗಳು ಕಮೆಂಟ್ ಮಾಡುತ್ತಿದ್ದಾರೆ.

ಮುಂಗಡ ಬುಕಿಂಗ್‌ ಆರಂಭ:
ಇತ್ತ ಹಾಡು ರಿಲೀಸ್ ಆದ ಬೆನ್ನಲ್ಲೇ ‘ರಾಮಾಯಣ’ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಓಡುತ್ತಿದೆ. ಚಿತ್ರದ ಕ್ರೇಜ್ ಎಷ್ಟರಮಟ್ಟಿಗಿದೆ ಎಂದರೆ ಗಂಟೆಗೆ 2,000ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗುತ್ತಿವೆ ಎಂದು ವರದಿಯಾಗಿದೆ. ಯಶ್ ಅವರು ಇತ್ತೀಚಿನ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಹಂಚಿಕೊಂಡಿದ್ದ ಮಾತುಗಳು ಕೂಡ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದು, ಬಾಕ್ಸಾಫೀಸ್‌ನಲ್ಲಿ ರಾಮಾಯಣ ಮತ್ತೊಂದು ಐತಿಹಾಸಿಕ ದಾಖಲೆ ಬರೆಯುವುದು ಪಕ್ಕಾ ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *

Download App