ಗಣೇಶ ಚತುರ್ಥಿ 2026: ಸೆಪ್ಟೆಂಬರ್ 14 ರಿಂದ‌ ದೇಶದಾದ್ಯಂತ ಗಲ್ಲಿ‌‌-ಗಲ್ಲಿಗಳಲ್ಲೂ ಮೂಷಿಕ ವಾಹನ ಸಂಚಾರ!

ganesh chathurthi 2026

     ಭಾರತದಲ್ಲಿ ಅತೀ‌ ಸಂಭ್ರಮದಿಂದ ಸಣ್ಣ ಹುಡುಗರಿಂದ‌ ಹಿಡಿದು ಮುಪ್ಪಿನ ಮೊಬ್ಬಿನಲ್ಲಿರುವವರ ತನಕ ಆಚರಿಸಲು ಕಾಯುವ ಹಬ್ಬವೆಂದರೆ ಅದು ಗಣೇಶ ಚತುರ್ಥಿ ,ಹಬ್ಬ ತಿಂಗಳು ಇರುವಾಗಲೆ ಹುಡುಗರು ಯಾವ ರೀತಿ ಗಣೇಶ ಬೇಕು ,ಎಲ್ಲಿ ಪೆಂಡಾಲ್‌ ಹಾಕಬೇಕು ,ಕಲೆಕ್ಷನ್ ಮಾಡಲು ಯಾವಾಗಿನಿಂದ ಶುರು ಹಚ್ಚಬೇಕು ಎನ್ನುವ ಚರ್ಚೆಯಲ್ಲಿ ಬ್ಯುಸಿ ಇರುವ ಸಮಯ ಇದು. ಇಂತಹ ದೊಡ್ಡ ಸಡಗರವು ಇನ್ನೇನು ಸನಿಹದಲ್ಲಿದೆ.

ಗಣೇಶ ಚತುರ್ಥಿಯ ದಿನಾಂಕ ಮತ್ತು ಮುಹೂರ್ತ

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.

  • ಹಬ್ಬದ ದಿನಾಂಕ: ಸೆಪ್ಟೆಂಬರ್ 14, 2026 (ಸೋಮವಾರ)
  • ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 14 ರ ಮುಂಜಾನೆ
  • ಪೂಜೆಗೆ ಶುಭ ಮುಹೂರ್ತ: ಬೆಳಗ್ಗೆ 11:00 ರಿಂದ ಮಧ್ಯಾಹ್ನ 01:30 ರವರೆಗೆ ಗಣೇಶನ ಪ್ರತಿಷ್ಠಾಪನೆ ಮತ್ತು ಪೂಜೆಗೆ ಅತ್ಯಂತ ಪ್ರಶಸ್ತ ಸಮಯ
Ganesh Chathurthi 20263117431092976607272
ಗಣೇಶಚತುರ್ಥಿ2026,ಸೆಪ್ಟೆಂಬರ್14

ಗಣೇಶ ಚತುರ್ಥಿಯ ಮಹತ್ವ

ಪಾರ್ವತಿ ದೇವಿಯು ತನ್ನ ಮೈಯ ಮಣ್ಣಿನಿಂದ ಗಣೇಶನನ್ನು ಸೃಷ್ಟಿಸಿ, ಜೀವ ತುಂಬಿದ ಪವಿತ್ರ ದಿನವೇ ಗಣೇಶ ಚತುರ್ಥಿ ಎಂಬ ನಂಬಿಕೆಯಿದೆ. ಗಣೇಶನಿಗೆ ‘ವಿಘ್ನರಾಜ’ ಎಂಬ ಹೆಸರಿದ್ದು, ಭಕ್ತಿಯಿಂದ ಪೂಜಿಸುವ ಭಕ್ತರ ಜೀವನದಲ್ಲಿ ಎದುರಾಗುವ ಸಕಲ ಅಡೆತಡೆಗಳನ್ನು ನಿವಾರಿಸುತ್ತಾನೆ

ಚಂದ್ರ ದರ್ಶನ ನಿಷೇಧ

ಗಣೇಶ ಚತುರ್ಥಿಯ ದಿನದಂದು ರಾತ್ರಿ ಚಂದ್ರನನ್ನು ನೋಡಬಾರದು ಎಂಬ ನಿಯಮವಿದೆ. ಪುರಾಣದ ಪ್ರಕಾರ, ಈ ದಿನ ಚಂದ್ರನನ್ನು ನೋಡಿದರೆ ಸುಳ್ಳು ಅಪವಾದಗಳು (ಮಿಥ್ಯಾ ದೋಷ) ಸುತ್ತಿಕೊಳ್ಳುತ್ತವೆ ಎಂಬ ನಂಬಿಕೆ ಇರುವುದರಿಂದ ಚಂದ್ರ ದರ್ಶನವನ್ನು ತಪ್ಪಿಸಲಾಗುತ್ತದೆ.

ಸಕಲ ಸಂಕಷ್ಟಗಳನ್ನು ಕಳೆಯುವ ಗಣಪತಿಯ ಕೃಪೆ ಎಲ್ಲರ ಮೇಲಿರಲಿ. ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಮುಂಗಡ ಶುಭಾಶಯಗಳು!

Leave a Comment

Your email address will not be published. Required fields are marked *