ದುಲೀಪ್ ಟ್ರೋಫಿ 2026:  ವೈಭವ್ ಸೂರ್ಯವಂಶಿ ಅಬ್ಬರ, 57 ವರ್ಷಗಳ ಐತಿಹಾಸಿಕ ದಾಖಲೆ ಧೂಳಿಪಟ,ಕೇವಲ 8 ರನ್ನುಗಳಿಂದ ಶತಕ‌ ಮಿಸ್!

ಬೆಂಗಳೂರು:  ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ (COE) ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯದ (East Zone) ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಕೇಂದ್ರ ವಲಯ (Central Zone) ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಕೇವಲ 81 ಎಸೆತಗಳಲ್ಲಿ 92 ರನ್‌ ಚಚ್ಚಿ ಶತಕದ ಅಂಚಿನಲ್ಲಿ ಎಡವಿದರೂ, ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Vaibhav sooryavamshi

​ಪಂದ್ಯದ ಸಂಕ್ಷಿಪ್ತ ವಿವರ ಮತ್ತು ವೈಭವ್ ಅಬ್ಬರ

  • ಚಂಡಮಾರುತದ ಬ್ಯಾಟಿಂಗ್: ವೈಭವ್ ಸೂರ್ಯವಂಶಿ ಕೇವಲ 42 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು. ಒಟ್ಟು 81 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 92 ರನ್ ಗಳಿಸಿದರು. ಕೇವಲ 8 ರನ್‌ಗಳಿಂದ ಪ್ರಥಮ ದರ್ಜೆ ಶತಕ ಕೈತಪ್ಪಿತು.
  • 57 ವರ್ಷಗಳ ಹಳೆಯ ದಾಖಲೆ ಪತನ: ಕೇವಲ 15 ವರ್ಷ 175 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾದರು. ಈ ಮೂಲಕ 1969ರಲ್ಲಿ ಲಕ್ಷ್ಮಣ್ ಸಿಂಗ್ (16 ವರ್ಷ 23 ದಿನ) ನಿರ್ಮಿಸಿದ್ದ 57 ವರ್ಷಗಳ ಸುದೀರ್ಘ ದಾಖಲೆಯನ್ನು ಅವರು ಮುರಿದರು.
  • ನಾಯಕತ್ವದ ಅಚ್ಚರಿ: ಪಂದ್ಯದ ಮೊದಲ ದಿನದಂದು ಪೂರ್ವ ವಲಯ ತಂಡದ ಖಾಯಂ ನಾಯಕ ಇಶಾನ್ ಕಿಶನ್ ಗಾಯಗೊಂಡು ಮೈದಾನ ತೊರೆದಾಗ, ವೈಭವ್ ಕೆಲಕಾಲ ತಂಡದ ಹಂಗಾಮಿ ನಾಯಕತ್ವ ವಹಿಸಿಕೊಂಡು ಡಿಆರ್‌ಎಸ್ (DRS) ನಿರ್ಧಾರದಲ್ಲೂ ಯಶಸ್ಸು ಕಂಡಿದ್ದರು.

ಇನ್ನೂ  ಕೇಂದ್ರವಲಯ(centra zone) ಮತ್ತು ಪೂರ್ವವಲಯ(East zone)ಗಳ ನಡುವೆ ಬೆಂಗಳೂರಿನ ಬಿಸಿಸಿಐ(BCCI)ನ ಸೆಂಟರ್ ಆಫ್ ಎಕ್ಸಲೆನ್ಸ್‌ (COE) ಮೈದಾನದಲ್ಲಿ ದುಲೀಪ್ ಟ್ರೋಪಿ 2026ರ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ,

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪೂರ್ವ ವಲಯ, ಮುಕೇಶ್ ಕುಮಾರ್ ಮತ್ತು ಅಭಿಜಿತ್ ಸರ್ಕಾರ್ ಅವರ ಶಿಸ್ತುಬದ್ಧ ದಾಳಿಯ ನೆರವಿನಿಂದ ಕೇಂದ್ರ ವಲಯವನ್ನು 266 ರನ್‌ಗಳಿಗೆ ಕಟ್ಟಿಹಾಕಿತು. ಕೇಂದ್ರ ವಲಯ ಪರ ರಿಂಕು ಸಿಂಗ್ ಹೋರಾಟದ 60 ರನ್ ಗಳಿಸಿದರು.

​ಬಳಿಕ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಪೂರ್ವ ವಲಯಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಟಿ20 ಶೈಲಿಯ ಸ್ಫೋಟಕ ಆರಂಭ ಒದಗಿಸಿ, ತಂಡವು ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಲು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *