ತಿರುಪತಿ ಬೆಟ್ಟ ಹತ್ತಲು ಹೊಸ ರೂಲ್ಸ್, ತಿರುಪತಿ ತಿರುಮಲ ಬೆಟ್ಟದಲ್ಲಿ ಕಾಡು ಪ್ರಾಣಿಗಳ ಸಂಚಾರ ಹೆಚ್ಚಳ, ತಿರುಮಲ ಬೆಟ್ಟ ಹತ್ತುವವರೆ ನೀವು ತಿಳೀಯಲೇಬೇಕಾದ ಮಾಹಿತಿ.

ಬೆಟ್ಟದಲ್ಲಿ ಚಿರತೆ ದಾಳಿಗೆ 6 ವರ್ಷದ ಬಾಲಕಿ ಬಲಿಯಾದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನ ಎಚ್ಚೆತ್ತುಕೊಂಡಿದ್ದು ಬೆಟ್ಟ ಹತ್ತುವವರಿಗೆ ಹೊಸ ನಿಯಮವನು ತಂದಿದೆ. ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಬೆಟ್ಟ ಹತ್ತುವ ಪ್ರತಿಯೊಬ್ಬ ಯಾತ್ರಾರ್ಥಿಗಳಿಗೆ ರಕ್ಷಣೆಗಾಗಿ ಸಿಬ್ಬಂದಿಯನ್ನು ಒದಗಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇನ್ಮುಂದೆ ಬೆಟ್ಟ ಹತ್ತುವವರಿಗೆ ಹೊಸ ನಿಯಮ ಇಲ್ಲಿದೆ ನೋಡಿ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿ ಬೆಳಗ್ಗೆ 5 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬೆಟ್ಟ ಹತ್ತಲು ತಿಳಿಸಿದ್ದಾರೆ ಮತ್ತು 15ವರ್ಷದ ಮಕ್ಕಳ ಜೊತೆ ಪೋಷಕರು ಬೆಟ್ಟ ಹತ್ತಬಹುದಾಗಿದೆ ಎಂದು ಹೇಳಲಾಗಿದೆ. ಅಲಿಪಿರಿ ಮಾರ್ಗಮಧ್ಯೆ ಏಳನೇ ಮೈಲಿ ಬಳಿ ಬೆಟ್ಟ ಹತ್ತುವ ಮುನ್ನ ಮಕ್ಕಳಿಗೆ ಟ್ಯಾಗ್ ಹಾಕಲಾಗುತ್ತದೆ. ಆ ಟ್ಯಾಗ್ ನಲ್ಲಿ ಬೆಟ್ಟ ಹತ್ತುವ ಮಕ್ಕಳ ಹೆಸರು, ಪೋಷಕರ ವಿವರ, ಫೋನ್ ನಂಬರ್, ಪೊಲೀಸ್ ಟೋಲ್ ಫ್ರೀ ನಂಬರ್ ಇರಲಿದೆ ಎಂದು ತಿಳಿದುಬಂದಿದೆ.

ಹಿರಿಯರು ರಾತ್ರಿ 10 ಗಂಟೆಯವರೆಗೆ ಬೆಟ್ಟ ಹತ್ತಲು ನಿಗದಿಪಡಿಸಿದ. ಮತ್ತೆ ಘಾಟ್ ರಸ್ತೆಯಲ್ಲಿ ಸಂಜೆ 6 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಮುಖ್ಯವಾಗಿ ತಿಳಿಸಿದ್ದಾರೆ. ಬೆಟ್ಟ ಹತ್ತುವ ಯಾತ್ರಾರ್ಥಿಗಳನ್ನು ಗುಂಪುಗಳಲ್ಲಿ ಕಳುಹಿಸಲು ನಿರ್ಧರಿಸಲಾಗಿದೆ.

ಶ್ರಮಿಕ್‌ ನಿವಾಸ್‌ ವಸತಿ ಯೋಜನೆ, ಕಾರ್ಮಿಕ ಕಾರ್ಡ್‌ ಇದ್ದವರಿಗೆ ಉಚಿತ ಮನೆ ಯೋಜನೆ, ಇಂದೇ ಈ ಕಚೇರಿಗೆ ಭೇಟಿ ನೀಡಿ.

ಬೆಟ್ಟ ಹತುತ್ತಿದ ಮಗುವನ್ನು ಚಿರತೆ ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು, ಪೊಲೀಸ್‌ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ನಡೆದ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಈ ಯಲ್ಲ ಹೊಸ ನಿಯಮಗಳನ್ನು ತಿಳಿಸಿದ್ದಾರೆ,

ಈ ಘಟನೆಯ ನಂತರ ತಿರುಪತಿ ಮತ್ತು ತಿರುಮಲ ನಡುವೆ 500 ಕ್ಯಾಮೆರಾ ಸ್ಥಾಪಿಸಲಾಗುವುದು ಮತ್ತು ಅಗತ್ಯವಿದ್ದರೆ ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದರು. ಮಗುವನ್ನು ಕೊಂದ ನರಭಕ್ಷಕ ಚಿರತೆಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರೂ ತಿರುಮಲದಲ್ಲಿ ಇನ್ನೂ ಐದು ಚಿರತೆಗಳು ಇವೆ ಎನ್ನಲಾಗಿದೆ ಎಂದು ಹೇಳಿದ್ದಾರೆ. ಈ ಆತಂಕದ ಮಧ್ಯೆ 2000 ಮೆಟ್ಟಿಲ ಬಳಿ ಕರಡಿ ಕೂಡ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಧನ್ಯವಾದಗಳು…

ಇತರೆ ವಿಷಯಗಳು:

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ರಕ್ಷಣೆ, ಈ ಕಾರ್ಡ್ ಪಡೆಯುವುದು ಹೇಗೆ ಇಲ್ಲಿದೆ ನೋಡಿ.

ದಿನದಲ್ಲಿ ಇನ್ನು ಮುಂದೆ 4 ಗಂಟೆ ಕರೆಂಟ್‌ ಕಟ್‌.! ಈಗ್ಲೇ ಹಿಂಗೆ ಮುಂದೇನ್‌ ಗತಿ? ರಾಜ್ಯಕ್ಕೆ ಹೊಸ ಸಂಕಷ್ಟ; ಯಾವಾಗಿಂದ ಗೊತ್ತಾ?

Comments are closed, but trackbacks and pingbacks are open.