ಮಾರ್ಕೆಟ್ನಲ್ಲಿ ಬಿಳಿ ಸುಂದರಿ ಹವಾ ಶುರು.! ರೇಸ್ನಲ್ಲಿ ಟೊಮೊಟೋ ಹಿಂದಿಕ್ಕಿ ಮುಂದೆ ಸಾಗಿದ ಬೆಳ್ಳುಳ್ಳಿ-ಈರುಳ್ಳಿ; ಬೆಲೆ ಕೇಳಿದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ
ಹಲೋ ಸ್ನೇಹಿತರೇ, ನಾವಿಂದು ಲೇಖನದಲ್ಲಿ ಬಿಳಿ ಸುಂದರಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬೆಲೆ ಏರಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇದೀಗ ಮತ್ತೊಂದು ತರಕಾರಿಯ ಬೆಲೆ ಏರಿಕೆಯನ್ನು ಕಂಡಿದೆ, ಹಾಗಾದ್ರೆ ಎಷ್ಟು ಏರಿಕೆಯನ್ನು ಕಂಡಿದೆ? ಇದರ ಬೆಲೆ ಕಡಿಮೆ ಅಗೋದು ಯಾವಾಗ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಮೊನ್ನೆ ಮೊನ್ನೆಯಷ್ಟೆ ಟೊಮೊಟೋ ಬೆಲೆ ಗನನಮುಖಿಯಾಗಿತ್ತು ಅಂದ್ರೆ ಸರಿ ಸುಮಾರು 250 ರೂಪಾಯಿಯವರೆಗೆ ಏರಿಕೆಯನ್ನು ಕಂಡಿತ್ತು. ಇದಕ್ಕಾಗಿಯೇ ಜನರು ಟೊಮೊಟೋವನನ್ನು ಅಡುಗೆ ಮನೆಯ ರಾಣಿ ಎಂದು ಕರೆದಿದ್ದರು ಇದರಿಂದ ಇದನ್ನು ಖರೀದಿ ಮಾಡುವವರ ಸಂಖ್ಯೆಯು ಇಳಿಮುಖವಾಗಿತ್ತು, ಕೇವಲ ಟೊಮೊಟೋ ಮಾತ್ರವಲ್ಲದೆ ಅಡುಗೆ ಮನೆಯ ಎಲ್ಲಾ ತರಹದ ತರಕಾರಿಗಳು ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳಲಾಗಿತ್ತು ಅಂತಹದೆ ಸರದಿಯಲ್ಲಿ ಇದೀಗ ಬಿಳಿ ಸುಂದರಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ನಾವೇನು ಕಮ್ಮಿ ಇಲ್ಲ ಎಂದು ಮುನ್ನೆಲೆಗೆ ಬಂದೆ ಬಿಟ್ಟಿದೆ.
ಇದರೊಂದಿಗೆ ರೇಸ್ ಗೆ ಬಾಳೆ ಹಣ್ಣು ಸಹ ಬಂದಿದೆ, ಈಗ ಈ ತರಕಾರಿ, ಸೊಪ್ಪುಗಳನ್ನು ಖರೀದಿ ಮಾಡುವುದೇ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಗೃಹಿಣಿಯರು ಪಾಪ ಈ ಬೆಲೆ ಏರಿಕೆ ಇಂದ ಫುಲ್ ಟೆನ್ಷನ್ ಗೆ ಒಳಗಾಗಿದ್ದಾರೆ. ಯಾವಾಗ ಎಲ್ಲಾ ತರಕಾರಿ, ಅಡುಗೆ ಸಾಮಾಗ್ರಿಗಳ ಬೆಲೆ ಇಳಿಕೆಯಾಗಲಿದೆ ಎಂದು ಯೋಚನೆ ಮಾಡುತ್ತಿದ್ದಾರೆ. ಇದೀಗ ಬಾಳೆ ಹಣ್ಣನ್ನು ಸೇರಿ ಬೆಳ್ಳುಳ್ಳಿಯನ್ನು ಮುಟ್ಟಲು ಹೊದವರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇದೀಗ ಬಿಳಿ ಸುಂದರಿ ಬೆಳ್ಳುಳ್ಳಿ ಬೆಲೆ 200ರ ಗಡಿದಾಟಿ ಮುಂದಕ್ಕೆ ಸಾಗುತ್ತಿದೆ, ಇದಕ್ಕೂ ಮೊದಲು 100 ರೂಪಾಯಿ ಹಿಡಿದು ಸಂತೆ ಮಾರುಕಟ್ಟೆಗಳಿಗೆ ಬಂದಿದ್ರೆ ತಂದ ಚೀಲ ಫುಲ್ ಅಗುವಷ್ಟು ತರಕಾರಿಗಳನ್ನು ಮನೆಗೆ ತೆಗೆದುಕೊಂಡು ಹೋಗ ಬಹುದಿತ್ತು ಅದ್ರೆ ಈಗ ಕಾಲ ಬದಲಾಗಿದೆ ಎಲ್ಲಾವು ದುಬಾರಿ ಎಂದು ಮನೆಯ ಯಜಮಾನಿಯರು ಹೇಳಿದ್ದರೆ. ಮಳೆಯಿಂದಾಗಿ ಬೆಳ್ಳುಳ್ಳಿ ಹಾಗೂ ನೀರುಳ್ಳಿ ಬೆಲೆಗಳು ತುಂಬಾ ದುಬಾರಿಯಾಗಿದೆ. ಬೆಳ್ಳುಳ್ಳಿ ಇದೀಗ ಕರ್ನಾಟಕದಲ್ಲಿ 200 ರಿಂದ 300 ರೂಪಾಯಿ ಯಂತೆ ಬೆಲೆಯನ್ನು ಏರಿಸಿಕೊಂಡಿದೆ. 10 ರೂಪಾಯಿ ಇದ್ದ ಈರುಳ್ಳಿ ಇದೀಗ 40 ರಿಂದ 50 ರೂಪಾಯಿ ಆಗಿದೆ ಇದರಿಂದ ತರಕಾರಿ ಪ್ರಿಯರ ಜೇಬು ಸುಡುವ ಸ್ಥಿತಿ ಉಂಟಾಗಿದೆ.
ಇತರೆ ವಿಷಯಗಳು:
ಶ್ರಮಿಕ್ ನಿವಾಸ್ ವಸತಿ ಯೋಜನೆ, ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತ ಮನೆ ಯೋಜನೆ, ಇಂದೇ ಈ ಕಚೇರಿಗೆ ಭೇಟಿ ನೀಡಿ.
Comments are closed, but trackbacks and pingbacks are open.