💼 ಉದ್ಯೋಗ ಸುದ್ದಿಗಳು 🏏 ಕ್ರೀಡಾ ಸುದ್ದಿ ✨ ದಿನಭವಿಷ್ಯ 🇮🇳 ರಾಷ್ಟ್ರೀಯ ಸುದ್ದಿ

ಸ್ವಿಗ್ಗಿ, ಜೊಮ್ಯಾಟೊಗೆ ಶಾಕ್ ಕೊಟ್ಟ ರ್‍ಯಾಪಿಡೋ ‘ಓನ್ಲಿ’ (Ownly)! ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಶುರುವಾಯ್ತು ಹೊಸ ಕದನ

1000084589

ಬೆಂಗಳೂರು: ಆನ್ ಲೈನ್ ಮೂಲಕ ತಾವು ಇರುವಲ್ಲಿಗೆ(online food delivery) ತಮ್ಮ ಇಷ್ಟದ ಹೋಟೆಲ್ ಗಳಿಂದ ಆಹಾರ ತರಿಸಿಕೊಂಡು ತಿನ್ನುವುದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಮಾನ್ಯವಾಗಿದೆ ,ಕೆಲವರಿಗಂತೂ ಇದು ಒಂದು‌ ದೈನಂದಿನ‌ ಅಭ್ಯಾಸವಾಗಿ ಹೋಗಿದೆ!

    ಸ್ವಿಗ್ಗಿ(Swiggy) , ಜೊಮ್ಯಾಟೊ(zomato)ಕಂಪನಿಗಳು ಹಲವು ವರ್ಷಗಳಿಂದ  ಇಂತಹ ಸೇವೆಯನ್ನು (home food delivey)ಒದಸುತ್ತಾ ಬಂದಿವೆ ಹಾಗೂ ತನ್ನದೇ ದೊಡ್ಡ ಗ್ರಾಹಕ ಬಳಗವನ್ನು ಕೂಡ ಸೃಷ್ಟಿಸಿಕೊಂಡಿವೆ,ಇವುಗಳ ಮಧ್ಯೆ ಕೆಲವು ಕಂಪನಿಗಳು ಪ್ರತಿಸ್ಪರ್ಧಿಗಳಾಗಿ (ಉದಾ: Amazon foods,magic pin,ola foods)ಬಂದರು , ಗ್ರ್ರಾಹಕರನ್ನು ಸೆಳೆದು ಮಾರುಕಟ್ಟೆ ವಿಸ್ತರಿಸಿಕೊಂಡು ನೆಲೆನಿಲ್ಲಲು ಸೋತಿವೆ.

ಆದರೆ ಈಗ ರ್‍ಯಾಪಿಡೋದ ‘ಓನ್ಲಿ’(Ownly) ಫುಡ್ ಡಿಲಿವರಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಹೋಟೆಲ್ ಮತ್ತು ಗ್ರಾಹಕರಿಗೆ ಉತ್ತಮ ಆಫರ್ಸ್ ನೀಡುವ ಮೂಲಕ ನಿಧಾನವಾಗಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ತೋರಿಸುತ್ತಿದೆ.

  • ಬೈಕ್ ಟ್ಯಾಕ್ಸಿ ಬಳಿಕ ಫುಡ್ ಡೆಲಿವರಿ ವಲಯಕ್ಕೆ ರ್‍ಯಾಪಿಡೋ ಎಂಟ್ರಿ.
  • ‘Ownly’ ಆ್ಯಪ್ ಮೂಲಕ ಸ್ವಿಗ್ಗಿ, ಜೊಮ್ಯಾಟೊಗೆ ನೇರ ಪೈಪೋಟಿ.
  • ಗ್ರಾಹಕರಿಗೆ ಕಡಿಮೆ ಬೆಲೆ, ಹೋಟೆಲ್ ಮಾಲೀಕರಿಗೆ ಜಿರೋ ಕಮಿಷನ್ ಮಾಡೆಲ್.

  

ಏನಿದು ‘Ownly’? ಇದರ ವಿಶೇಷತೆಯೇನು?

ರ್‍ಯಾಪಿಡೋ ಪರಿಚಯಿಸಿರುವ ‘Ownly’ ಕೇವಲ ಆಹಾರ ವಿತರಣೆಗಷ್ಟೇ ಸೀಮಿತವಾಗಿರುವ ಆ್ಯಪ್ ಆಗಿದೆ. ಈಗಾಗಲೇ ಬೈಕ್ ಟ್ಯಾಕ್ಸಿ ಮೂಲಕ ದೇಶಾದ್ಯಂತ ಲಕ್ಷಾಂತರ ರೈಡರ್‌ಗಳ ಬಲ ಹೊಂದಿರುವ ರ್‍ಯಾಪಿಡೋ, ಅದೇ ನೆಟ್‌ವರ್ಕ್ ಬಳಸಿಕೊಂಡು ತ್ವರಿತವಾಗಿ ಆಹಾರ ತಲುಪಿಸುವ ಯೋಜನೆ ರೂಪಿಸಿ ಕಾರ್ಯನಿರ್ವಹಿಸುತ್ತಿದೆ.

ಹೋಟೆಲ್ ಮಾಲೀಕರಿಗೆ ಮತ್ತು ಗ್ರಾಹಕರಿಗೆ ಲಾಭವೇನು?

  • ಶೂನ್ಯ ಕಮಿಷನ್ (Zero Commission): ಸ್ವಿಗ್ಗಿ ಮತ್ತು ಜೊಮ್ಯಾಟೊಗಳು ಹೋಟೆಲ್‌ಗಳಿಂದ ಶೇ. 20 ರಿಂದ 30 ರಷ್ಟು ಕಮಿಷನ್ ಪಡೆಯುತ್ತವೆ ಎಂಬ ದೂರು ವ್ಯಾಪಕವಾಗಿದೆ. ಆದರೆ ‘Ownly’ ಸದ್ಯಕ್ಕೆ ಯಾವುದೇ ಕಮಿಷನ್ ಪಡೆಯದೆ ಹೋಟೆಲ್ ಮಾಲೀಕರಿಗೆ ಪೂರ್ತಿ ಹಣವನ್ನು ನೀಡುತ್ತಿದೆ ಇದರಿಂದ ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಲಾಭವಾಗಲಿದೆ.
  • ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಊಟ: ಹೋಟೆಲ್‌ಗಳ ಮೇಲಿನ ಕಮಿಷನ್ ಶೂನ್ಯವಿರುವುದರಿಂದ‌ ಹೋಟೆಗಳ‌ ಮೆನುವಿನಲ್ಲಿರು ದರಕ್ಕೆ  ಗ್ರಾಹಕರಿಗೆ ನೇರವಾಗಿ ಕಡಿಮೆ ದರದಲ್ಲಿ ಹಾಗೂ ಉಚಿತ ಡೆಲಿವರಿ ಶುಲ್ಕದಲ್ಲಿ ಆಹಾರ ಪೂರೈಸುತ್ತಿದೆ
  • ​ವೇಗದ ಡೆಲಿವರಿ: ನಗರ ಪ್ರದೇಶಗಳಲ್ಲಿ ರ್‍ಯಾಪಿಡೋ ಕ್ಯಾಪ್ಟನ್‌ಗಳು (ರೈಡರ್‌ಗಳು) ಈಗಾಗಲೇ ಹೆಚ್ಚು ಸಕ್ರಿಯವಾಗಿರುವುದರಿಂದ ಡೆಲಿವರಿ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.

​ಮುಂದಿನ ಸವಾಲುಗಳು:

ಸ್ವಿಗ್ಗಿ (swiggy)ಮತ್ತು ಜೊಮ್ಯಾಟೊ(zomato) ಈಗಾಗಲೇ ಕೋಟ್ಯಂತರ ನಿಷ್ಠಾವಂತ ಗ್ರಾಹಕರನ್ನು ಹೊಂದಿದ್ದು, ತ್ವರಿತ ಡೆಲಿವರಿ ಹಾಗೂ ಆಫರ್‌ಗಳ ಮೂಲಕ ಮಾರುಕಟ್ಟೆಯನ್ನು ಆಳುತ್ತಿವೆ. ಇಂತಹ ಸಮಯದಲ್ಲಿ ರ್‍ಯಾಪಿಡೋದ ‘Ownly’ ಗುಣಮಟ್ಟದ ಸೇವೆ ನೀಡಿ ಗ್ರಾಹಕರ ವಿಶ್ವಾಸ ಗಳಿಸುವುದು ಅಷ್ಟೇ ಮುಖ್ಯವಾಗುತ್ತದೆ.

ಮುಂದೆ ಯಾವ ರೀತಿ ತನ್ನ ನೆಲೆಯನ್ನು ಭದ್ರಪಡಿಸಿಕೊಂಡು ದೇಶದಾದ್ಯಂತ ವ್ಯವಹಾರವನ್ನು ವಿಸ್ತರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *