ಕೈ ಕೊಡ್ತಾ ಗೃಹಲಕ್ಷ್ಮಿ ಯೋಜನೆ ಆರಂಭಕ್ಕೆ ರೂಪಿಸಿದ್ದ ಕಾನ್ಸೆಪ್ಟ್? ಮನೆ ಯಜಮಾನಿಯರು ಕೆಂಡಾಮಂಡಲ..!
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಯಡಿ ಮನೆಯೊಡತಿಯ ಖಾತೆಗೆ ಹಣ ಬರುವುದು ಯಾವಾಗ? ಇನ್ನು ಕೂಡ ಈ ಹಣ ಬರದೆ ಇರಲು ಕಾರಣ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಪೂರ್ತಿಯಾಗಿ ಓದಿ.
ಗೃಹಲಕ್ಷ್ಮಿ ಯೋಜನೆ ಆರಂಭಕ್ಕೆ ರೂಪಿಸಿದ್ದಂತಹ ಕಾನ್ಸೆಪ್ಟ್ ಏನಾದ್ರೂ ಕೈ ಕೊಟ್ಟಿದೆಯೇ ಎನ್ನುವ ಪ್ರಶ್ನೆ ಇದೀಗ ಜನರಲ್ಲಿ ಮನೆ ಮಾಡಿದೆ. ಗ್ಯಾರಂಟಿ ನಂಬರ್ 4 ನ್ನು ಜಾರಿಗೆ ತರಲು ಸರ್ಕಾರ ಅನೇಕ ಕಾನ್ಸೆಪ್ಟ್ ಅನ್ನು ಹಾಕಿಕೊಂಡಿತ್ತು ಆದರೆ ಇದು ವರ್ಕ್ ಅಗುತ್ತಾ ಎನ್ನುವುದು ಜನರ ದೊಡ್ಡ ತಲೆನೋವಿನ ಸಂಗತಿ, ಪ್ರಜಾ ಪ್ರತಿನಿಧಿಗಳ ಆಯ್ಕೆ ಮಾಡಿದ ಕಾಂಗ್ರೆಸ್ ಸರ್ಕಾರ ಈ ಆಯ್ಕೆಯಿಂದ ಕೈ ಪಡೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ಅದುವೇ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆಯುವ ಕೆಲಸಕ್ಕೆ ಸರ್ಕಾರ ಕೈ ಹಾಕಿತ್ತು.
ಅದರಲ್ಲಿ ಒಂದು ಮನೆಮನೆಗೆ ಗ್ಯಾರಂಟಿಯನ್ನು ತಲುಪಿಸುವ ಗುರಿ ಮತ್ತು ಇದರ ಜೊತೆಗೆ ಪ್ರಜಾಪ್ರತಿನಿಧಿಗಳ ಹೆಸರಿನಲ್ಲಿ ಕಾರ್ಯಕರ್ತರ ಒಳಗೊಳ್ಳುವಿಕೆಯ ಗುರಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇಟ್ಟುಕೊಂಡಿತ್ತು ಅದ್ರೆ ಇದೀಗ ಎಲ್ಲಾ ಗುರಿಗಳು ಏರು ಪೇರಾಗುವ ಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ. ಇದರೊಂದಿಗೆ ಪ್ರತಿ ಬೂತ್ ಮಟ್ಟದಲ್ಲಿ ಮತದಾರರ ಸಂಪರ್ಕದ ಲೆಕ್ಕಾಚಾರ ಈ ಎಲ್ಲಾವು ಇಡೇರಿಲ್ಲ ಎನ್ನುವ ಹಾಗೇ ಕಾಣುತ್ತಿದೆ ಇದಕ್ಕೆ ಪುಷ್ಠಿ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುದ್ದಿಗೊಷ್ಠಿಯನ್ನು ಮಾತನ್ನು ಆಡಿದ್ದಾರೆ.
ಇದಕ್ಕಾಗಿಯೇ ನಿಮಗೆ ಪ್ರಜಾಪ್ರತಿನಿಧಿಗಳ ಬೆಲೆ ಗೊತ್ತಾಗುತ್ತಿಲ್ವ ಎಂದು ಕೇಳಿದ್ದಾರೆ, ಜನರೇ ಗೃಹಲಕ್ಷ್ಮಿ ಯೋಜನೆಗೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದಾರೆ ನಿಮಗಿನ್ನು ಗಮನಕ್ಕೆ ಬಂದಿಲ್ಲ ಎಂದು ಗರಂ ಆಗಿದ್ದಾರೆ. ಈ ಎಲ್ಲಾ ವಿಷಯಗಳ ನಡುವೆ ಮನೆಯ ಒಡತಿಗೆ 2000 ಯಾವಾಗ ಖಾತೆಗೆ ಬರಲಿದೆ ಎನ್ನುವುದೇ ದೊಡ್ಡ ತೊಂದರೆ ಆಗಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಮಾತನಾಡಿ ಇದೇ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ತಿಳಿಸಿದ್ದಾರೆ.
Comments are closed, but trackbacks and pingbacks are open.