ಕೇವಲ 30 ಎಸೆತದಲ್ಲೇ ಶತಕ ಸಿಡಿಸಿ ಅಭಿಷೇಕ್ ಶರ್ಮಾ ವಿಶ್ವ ದಾಖಲೆ: ಅಫ್ಘಾನ್ ವಿರುದ್ಧ ಭಾರತಕ್ಕೆ ಭಾರೀ ಜಯ, ಸರಣಿ ಕ್ಲೀನ್‌ಸ್ವೀಪ್!

ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 127 ರನ್‌ಗಳ ಬೃಹತ್ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಅಭಿಷೇಕ್ ಶರ್ಮಾ ದಾಖಲೆಯ ಶತಕದ ಅಬ್ಬರ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎಡಗೈ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 108 ರನ್ (ಸ್ಟ್ರೈಕ್ ರೇಟ್ 317.65) ಚಚ್ಚಿ ದಾಖಲೆ ಬರೆದರು. ಇವರಿಗೆ ಉತ್ತಮ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 50 ರನ್ (2 ಬೌಂಡರಿ, 4 ಸಿಕ್ಸರ್) ಗಳಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ 29 ರನ್ ಗಳಿಸಿದ ಪರಿಣಾಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್‌ಗಳ  ಮೊತ್ತ ಪೇರಿಸಿತು.

Abhishek sharma century moment

ಒಂದು ಹಂತದಲ್ಲಿ ಅಭಿಷೇಕ್ ಬ್ಯಾಟ್ ಬೀಸುವಾಗ ಇಂದು ಭಾರತ ಮೊತ್ತ 300 ಗಡಿ ದಾಟುತ್ತೆನೋ ಅನಿಸುತ್ತಿತ್ತು,ಆದರೆ‌ ಶತಕ ಸಿಡಿಸಿ‌ ಸಂಭ್ರಮಿಸಿದ  ನಂತರ ಅಭಿಷೇಕ್ ವಿಕೆಟ್ ಒಪ್ಪಿಸಿದರು ,ನಂತರ‌ ಸತತ‌ 2 ವಿಕೆಟ್ ಬಿದ್ದ ಪರಿಣಾಮ ರನ್ ಗತಿ ನಿಧಾನವಾಯಿತು.

94 ರನ್‌ಗಳಿಗೆ ಅಫ್ಘಾನಿಸ್ತಾನ ತತ್ತರ:

222 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡವು ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ನಲುಗಿ ಹೋಯಿತು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನ್ ಪಡೆ, ಕೇವಲ 14.1 ಓವರ್‌ಗಳಲ್ಲಿ 94 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಇಬ್ರಾಹಿಂ ಜದ್ರಾನ್ (25) ಮತ್ತು ಅಜ್ಮತುಲ್ಲಾ ಒಮರ್‌ಜಾಯ್ (17) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್‌ಗಳೂ ಪ್ರತಿರೋಧ ತೋರಲಿಲ್ಲ.

ಭಾರತದ ಬೌಲಿಂಗ್ ಮಿಂಚು:

ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ ಕೇವಲ 25 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರೆ, ಸ್ಪಿನ್ನರ್ ರವಿ ಬಿಷ್ಣೋಯ್ 3.1 ಓವರ್‌ಗಳಲ್ಲಿ 26 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ 2 ವಿಕೆಟ್ ಉರುಳಿಸಿ ಎದುರಾಳಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು

ಸರಣಿ ಕ್ಲೀನ್ ಸ್ವೀಪ್:

ಈ ಗೆವುವಿನೊಂದಿಗೆ‌ ಭಾರತ ಸರಣಿಯನ್ನ ೩-೦ ಅಂತರದಿಂದ ವಶಪಡಿಸಿಕೊಂಡಿತು ,ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Comment

Your email address will not be published. Required fields are marked *