ರಾಜ್ಯದ ಪಡಿತರ ಚೀಟಿ (Ration Card) ಫಲಾನುಭವಿಗಳಿಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮತ್ತೊಂದು ಮಹತ್ವದ ಅವಕಾಶ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಇದೀಗ ಅಕ್ಟೋಬರ್ 20 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಲವು ಪಡಿತರ ಚೀಟಿದಾರರು ನಿಗದಿತ ಸಮಯದೊಳಗೆ ತಾಂತ್ರಿಕ ಕಾರಣಗಳಿಂದ ಅಥವಾ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಬಡ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಪಡಿತರ ಧಾನ್ಯ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಗಡುವನ್ನು ವಿಸ್ತರಿಸಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಯಿಂದ ಗಂಟೆಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾದರು ಪ್ರಕ್ರಿಯೆ ಪೂರ್ಣಗೊಳಿಸಲಾಗದೆ ಜನ ಹೈರಾಣಾಗಿ ಬೇಸತ್ತು ಹಿಂದಿರುಗುತ್ತಿದ್ದರು ,ಅಲ್ಲದೇ ಹಿಂದಿನ ಗಡುವು ಇದೇ ತಿಂಗಳ 30 ಕ್ಕೆ ಇದ್ದಿದ್ದರಿಂದ ಸಾಕಷ್ಟು ಜನರರಲ್ಲಿ ಅತಂಕ ಇತ್ತು ,ಹಲವು ಕಡೆ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತ ವಾಗಿತ್ತು ಇದರಿಂದ ಮೊನ್ನೆ ತುರ್ತಾಗಿ ಸಭೆ ನಡೆಸಿದ್ದ ಆಹಾರ ಸಚಿವ ರಿಜ್ವಾನ್ ಆರ್ಷದ್ ಸಮಸ್ಯೆ ಯನ್ನು ಪರಿಹಿಸುವ ಭರವಸೆ ನೀಡಿದ್ದರು ಅದರಂತೆ ಇಂದುಅಂತಿಮ ದಿನಾಂಕವನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸಿ ಪ್ರಕಟಣೆ ಹೊರಡಿಸಲಾಗಿದೆ.
ಯಾರೆಲ್ಲಾ ಇ-ಕೆವೈಸಿ ಮಾಡಿಸಬೇಕು!
- ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಇ-ಕೆವೈಸಿ ಮಾಡಿಸುವುದು ಕಡ್ಡಾಯ.
- 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ತಮ್ಮ ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್) ಅಪ್ಡೇಟ್ ಮಾಡಬೇಕು.
- ಈಗಾಗಲೇ ಇ-ಕೆವೈಸಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿರುವವರು ಮತ್ತೊಮ್ಮೆ ಮಾಡಿಸುವ ಅಗತ್ಯವಿಲ್ಲ.
ಇ-ಕೆವೈಸಿ ಮಾಡಿಸುವುದು ಎಲ್ಲಿ!
ಫಲಾನುಭವಿಗಳು ಈ ಕೆಳಗಿನ ಕೇಂದ್ರಗಳಿಗೆ ತೆರಳಿ ಉಚಿತವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು:
- ನಿಮ್ಮ ಗ್ರಾಮ ಅಥವಾ ಬಡಾವಣೆಯ ನ್ಯಾಯಬೆಲೆ ಅಂಗಡಿಗಳು (Fair Price Shops – PDS)
- ಗ್ರಾಮ ಒನ್ (Grama One) ಕೇಂದ್ರಗಳು
- ಕರ್ನಾಟಕ ಒನ್ (Karnataka One) ಅಥವಾ ಬೆಂಗಳೂರು ಒನ್ ಕೇಂದ್ರಗಳು
ಬೇಕಾಗುವ ಅಗತ್ಯ ದಾಖಲೆಗಳು:
- ಪ್ರಸ್ತುತ ಚಾಲ್ತಿಯಲ್ಲಿರುವ ಪಡಿತರ ಚೀಟಿ (Ration Card)
- ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ (Aadhaar Card)
- ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಅಗತ್ಯವಿದ್ದಲ್ಲಿ OTP ಗಾಗಿ)
- ಗ್ಯಾಸ್(cylinder) ಹೊಂದಿದ್ದರೆ ಗ್ಯಾಸ್ ಖಾತೆ ಬುಕ್
ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ!
ಅಕ್ಟೋಬರ್ 20ರ ಒಳಗಾಗಿ ಇ-ಕೆವೈಸಿ ಪೂರ್ಣಗೊಳಿಸದ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ರದ್ದುಪಡಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಮಾಸಿಕ ಪಡಿತರ ಪ್ರಮಾಣ ಕಡಿಮೆಯಾಗುವುದಲ್ಲದೆ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ನಗದು ವರ್ಗಾವಣೆಯಂತಹ ಸರ್ಕಾರದ ನೇರ ಸೌಲಭ್ಯಗಳಿಗೆ ಅಡಚಣೆಯಾಗಬಹುದು. ಆದ್ದರಿಂದ ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಸಮೀಪದ ಕೇಂದ್ರಕ್ಕೆ ಭೇಟಿ ನೀಡಿ ಪ್ರಕ್ರಿಯೆ ಮುಗಿಸಿಕೊಳ್ಳಿ.













