ವೆಸ್ಟ್ ಇಂಡೀಸ್ ಸರಣಿಗೆ ಭಾರತ ಏಕದಿನ ಮತ್ತು ಟಿ20 ತಂಡ ಪ್ರಕಟ: ಋತುರಾಜ್,ಜುರೇಲ್‌ಗೆ ಜಾಕ್ ಪಾಟ್,ನಿತೀಶ್ ಕುಮಾರ್ ರೆಡ್ಡಿ ಕಂಬ್ಯಾಕ್!

BCCI announces India squad for West Indies ODI and T20I series 2026

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಹುನಿರೀಕ್ಷಿತ ವೈಟ್-ಬಾಲ್ ಸರಣಿಗೆ ಬಿಸಿಸಿಐ (BCCI) ಅಧಿಕೃತವಾಗಿ ಭಾರತ ತಂಡವನ್ನು ಪ್ರಕಟಿಸಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ 3 ಏಕದಿನ (ODI) ಹಾಗೂ 5 ಟಿ20 (T20I) ಪಂದ್ಯಗಳು ನಡೆಯಲಿದ್ದು,ಏಕದಿನ‌ ಪಂದ್ಯಾವಳಿಗಳು ನಡೆಯುವ ಸಮಯದಲ್ಲೇ ‌ಜಪಾನ್ ನಲ್ಲಿ ಏಷ್ಯನ್ ಗೇಮ್ಸ್ ನಡೆಯುವುದರಿಂದ ಏಕದಿನ ತಂಡದಲ್ಲಿದ್ದ ಶ್ರೇಯಸ್ಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಜಾಗದಲ್ಲಿ ಋತುರಾಜ್ ಗಾಯಕ್ವಾಡ್ ಮತ್ತು ದ್ರುವ್ ಜುರೇಲ್ಗೆ ಅವಕಾಶ ಕಲ್ಪಿಸಲಾಗಿದೆ.

ಶುಭಮನ್ ಗಿಲ್ ನಾಯಕ:ಕೆ ಎಲ್ ರಾಹುಲ್ ಉಪನಾಯಕ!

ಏಕದಿನ ಸರಣಿಗೆ ಯುವ ತಾರೆ ಶುಭಮನ್ ಗಿಲ್  ನಾಯಕತ್ವದ ತಂಡಕ್ಕೆ‌ ಈ ಬಾರಿ ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕರಾಗಿ ಸಾಥ್ ನೀಡಲಿದ್ದಾರೆ. ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಅನುಭವದ ಬಲ ತುಂಬಲಿದ್ದಾರೆ. ಏಕದಿನ ಹಾಗೂ ಏಷ್ಯನ್ ಗೇಮ್ಸ್ ವೇಳಾಪಟ್ಟಿ ಹತ್ತಿರದಲ್ಲೇ ಇರುವುದರಿಂದ ಟಿ20 ತಂಡದ ಆಟಗಾರರಿಗೆ ಬದಲಿಯಾಗಿ ಇಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಟಿ20 ನಾಯಕತ್ವದ ಕಡೆಗೆ ಗಮನಹರಿಸಿರುವುದರಿಂದ ಏಕದಿನ ತಂಡದಲ್ಲಿ ಅವರ ಜಾಗಕ್ಕೆ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ರಿಷಭ್ ಪಂತ್ ಆಯ್ಕೆ ಯಾಗುವ ನಿರೀಕ್ಷೆ ಇತ್ತು ಆದರೆ  ಇಶಾನ್ ಕಿಶನ್ ಬದಲಿಗೆ ಯುವ ಪ್ರತಿಭೆ ಧ್ರುವ್ ಜುರೆಲ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಬಲವಾದ ಕಂಬ್ಯಾಕ್ ಮಾಡಿದ್ದಾರೆ.

ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್:

ಚುಟುಕು ಮಾದರಿಯ 5 ಪಂದ್ಯಗಳ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದ್ದು, ತಿಲಕ್ ವರ್ಮಾ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಯುವ ಆಟಗಾರರಾದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಮಾಯಾಂಕ್ ಯಾದವ್ ತಂಡದಲ್ಲಿದ್ದಾರೆ.

​ಒಟ್ಟಾರೆಯಾಗಿ, ಅನುಭವಿ ಹಾಗೂ ಯುವ ಆಟಗಾರರ ಸಮತೋಲನದೊಂದಿಗೆ ವೆಸ್ಟ್ ಇಂಡೀಸ್ ಪಡೆಯನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಸಜ್ಜಾಗಿದೆ.

Leave a Comment

Your email address will not be published. Required fields are marked *