ಟೆಲಿಕಾಂ ಮಾರುಕಟ್ಟೆಯಲ್ಲಿ ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತಾ ಮುನ್ನಡೆದಿರುವ ಜಿಯೋ ಸಂಸ್ಥೆ ಲೀಡಿಂಗ್ನಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಅಗ್ಗದ ಬೆಲೆಯಲ್ಲಿ ಪ್ರೀಪೇಯ್ಡ್ ಡೇಟಾ ಆಫರ್ ನೀಡಿದ್ದ ಜಿಯೋ ಸಂಸ್ಥೆ, ಈಗ ಪೋಸ್ಟ್ಪೇಯ್ಡ್ ಚಂದಾದಾರರನ್ನು ಸೆಳೆಯಲು ಭರ್ಜರಿ ಆಫರ್ವೊಂದನ್ನು ಘೋಷಿಸಿದೆ.
ಹೌದು, ರಿಲಯನ್ಸ್ ಜಿಯೋ ಕಂಪನಿ ಇದೀಗ ಹೊಸ ಜಿಯೋ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಉಚಿತ ಪ್ರಾಯೋಗಿಕ ಆಫರ್ ಅನ್ನು ಪರಿಚಯಿಸಿದೆ. ಈ ಕೊಡುಗೆ ನೂತನ ಜಿಯೋ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದೆ. ಈ ಕೊಡುಗೆಯಲ್ಲಿನ ಪೋಸ್ಟ್ಪೇಯ್ಡ್ ವೈಯಕ್ತಿಕ ಹಾಗೂ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳು ಸೇರಿವೆ.
ಸಂಸ್ಥೆಯ ಅಧಿಕೃತ ವೆಬ್ಸೈಟ್ನ ಪ್ರಕಾರ, ಮೂರು ಪೋಸ್ಟ್ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಕೊಡುಗೆಯನ್ನು ನೀಡುತ್ತಿದೆ. ಅವುಗಳು ಕ್ರಮವಾಗಿ ಜಿಯೋ 399 ರೂ ಮತ್ತು ಜಿಯೋ 699 ರೂ ಆಗಿವೆ. ಈ ಎರಡು ಪೋಸ್ಟ್ಪೇಯ್ಡ್ ಫ್ಯಾಮಿಲಿ ಯೋಜನೆಗಳು ಹಾಗೂ ಜಿಯೋ 599 ರೂ ವೈಯಕ್ತಿಕ ಯೋಜನೆಯಾಗಿದೆ. ಇನ್ನುಳಿದಂತೆ, ಜಿಯೋ ಪೋಸ್ಟ್ಪೇಯ್ಡ್ ಟ್ರಯಲ್ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದುವರಿಸುವ ಯೋಜನೆ ಇದೆ.
ಜಿಯೋ ತನ್ನ ಮೂರು ಜನಪ್ರಿಯ ಪೋಸ್ಟ್ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಪ್ರಯೋಗವನ್ನು ಘೋಷಿಸಿದೆ. ಜಿಯೋ ನೆಟ್ವರ್ಕ್ ಬಯಸುವ ನೂತನ ಗ್ರಾಹಕರು ಈ ಕೊಡುಗೆಯನ್ನು ಪ್ರಯತ್ನಿಸಬಹುದು. ಗ್ರಾಹಕರು ಜಿಯೋ 399 ರೂ, ಜಿಯೋ 599 ರೂ ಮತ್ತು ಜಿಯೋ 699 ರೂ ಈ ಪ್ರೀಪೇಯ್ಡ್ ಯೋಜನೆಗಳಲ್ಲಿ ಒಂದನ್ನು 30 ದಿನಗಳವರೆಗೆ ಉಚಿತವಾಗಿ ಬಳಕೆ ಮಾಡಬಹುದಾಗಿದೆ.
ಆಫರ್ ನೀಡಿರುವ ಮೂರು ಪೋಸ್ಟ್ಪೇಯ್ಡ್ ಪ್ಲ್ಯಾನ್ಗಳಲ್ಲಿ ಎರಡು ಫ್ಯಾಮಿಲಿ ಯೋಜನೆಗಳು ಇವೆ. ಇವುಗಳಲ್ಲಿ ಗ್ರಾಹಕರು ತಮ್ಮ ಪ್ಲ್ಯಾನ್ನಲ್ಲಿ ಕುಟುಂಬ ಸದಸ್ಯರನ್ನು ಸೇರಿಸಬಹುದು. ಇನ್ನು ಆಫರ್ನಡಿ ಗ್ರಾಹಕರು, ಉಚಿತ ಒಂದು ತಿಂಗಳು ಕಳೆದ ನಂತರ, ಅವರು ಜಿಯೋ ಟೆಲಿಕಾಂ ನೆಟ್ವರ್ಕ್ನಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದು.
ಇತರೆ ವಿಷಯಗಳು:
ಗೃಹಜ್ಯೋತಿ ಬಿಲ್ ನೋಡಿ ಕಂಗಾಲಾದ ಜನ; ಫ್ರೀ ಕರೆಂಟ್ ಸಿಗುತ್ತೆ ಅಂತ ಕಾಯ್ತಿದ್ದೋರ್ಗೆ ಕಾದಿತ್ತು ಬಿಗ್ ಶಾಕ್..!
ರೇಷನ್ ಪಡೆಯುವವರಿಗೆ ಬಂತು ಕುತ್ತು.!! ಈ ಕಾರ್ಡ್ ಇಲ್ಲ ಅಂದ್ರೆ ನಿಮಗಿಲ್ಲ ಉಚಿತ ಪಡಿತರ, ಇಂದೇ ಅರ್ಜಿ ಸಲ್ಲಿಸಿ
Comments are closed, but trackbacks and pingbacks are open.