ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ಉದ್ಯೋಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪದವಿ ಹಾಗೂ ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಟ್ಟು 4,744 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ಬೃಹತ್ ನೇಮಕಾತಿಗೆ ಸಿದ್ಧತೆ ನಡೆಸಿದ್ದು, ಈ ತಿಂಗಳಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಹುದ್ದೆಗಳ ಸಂಕ್ಷಿಪ್ತ ವಿವರ:
- ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: 2,421
- ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: 2,062
- ತಾಂತ್ರಿಕ ಹುದ್ದೆಗಳು: 261
- ಒಟ್ಟು ಹುದ್ದೆಗಳ ಸಂಖ್ಯೆ: 4,744
ಮುಂದಿನ ದಿನಗಳಲ್ಲಿ ಈ ಪಟ್ಟಿಗೆ ಇನ್ನೂ ಹೆಚ್ಚಿನ ಇಲಾಖೆಗಳು ಮತ್ತು ಹೊಸ ಹುದ್ದೆಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.
ವಿದ್ಯಾರ್ಹತೆ & ಪರೀಕ್ಷಾ ವಿವರ:
- ವಿದ್ಯಾರ್ಹತೆ: ಪಿಯುಸಿ (PUC) / ತತ್ಸಮಾನ ಹಾಗೂ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರು.
- ಲಿಖಿತ ಪರೀಕ್ಷೆ: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಸುಮಾರು 3-4 ವರ್ಷಗಳಿಂದ ಯಾವುದೇ ನೇಮಕಾತಿ ಇಲ್ಲದೇ ಹಲವು ಅಭ್ಯರ್ಥಿಗಳು ನಿರಾಸೆ ಅನುಭವಿಸಿದ್ದರು ,ಆದರೆ ಈಗ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ,ಕೃಷಿ,ಕಾರ್ಮಿಕ,ಗೃಹ,ಪಂಚಾಯಿತಿ ಅಭಿವೃದ್ಧಿ ಇಲಾಖೆಗಳನ್ನು ಒಳಗೊಂಡಂತೆ ಬಹುತೇಕ ಎಲ್ಲಾ ಇಲಾಖೆಯಲ್ಲೂ ಖಾಲಿಇರುವ ಪಂಚಾಯಿತಿ ಕಾರ್ಯದರ್ಶಿ,ವಾರ್ಡನ್,FDA,SDA,ಜೂನಿಯರ್ ಇಂಜಿನಿಯರ್ ಸೇರಿದಂತೆ ಇನ್ನು ಆನೇಕ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿದೆ.
ಪೂರ್ತಿಯಾಗಿ ಹುದ್ದೆಗಳ ಇಲಾಖಾವಾರು ಪಟ್ಟಿಯನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://cetonline.karnataka.gov.in/keawebentry456/vdptrecnhk2025/VER_REC_NOTE_31082026kannada.pdf
FDA & SDA ಪರೀಕ್ಷಾ ಪದ್ಧತಿ ಮತ್ತು ಸಾಮಾನ್ಯ ಪಠ್ಯಕ್ರಮ (Exam Pattern & Syllabus):
KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 2 ಪತ್ರಿಕೆಗಳನ್ನು (Paper 1 & Paper 2) ಒಳಗೊಂಡಿರುತ್ತದೆ:
ಪತ್ರಿಕೆ – 1: ಸಾಮಾನ್ಯ ಜ್ಞಾನ (General Knowledge – 100 ಅಂಕಗಳು)
- ಭಾರತ ಮತ್ತು ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ
- ಭಾರತ ಮತ್ತು ಕರ್ನಾಟಕದ ಭೂಗೋಳಶಾಸ್ತ್ರ
- ಭಾರತದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ
- ಪ್ರಚಲಿತ ಘಟನೆಗಳು (ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ)
- ಸಾಮಾನ್ಯ ವಿಜ್ಞಾನ, ಪರಿಸರ ಮತ್ತು ದೈನಂದಿನ ತಂತ್ರಜ್ಞಾನ
- ಭಾರತೀಯ ಆರ್ಥಿಕತೆ ಮತ್ತು ಪ್ರಮುಖ ಸರ್ಕಾರಿ ಯೋಜನೆಗಳು
- ಮೂಲಭೂತ ಮಾನಸಿಕ ಸಾಮರ್ಥ್ಯ (Mental Ability & Reasoning)
ಪತ್ರಿಕೆ – 2: ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್ & ಕಂಪ್ಯೂಟರ್ ಜ್ಞಾನ (100 ಅಂಕಗಳು)
- ಸಾಮರ್ಥ್ಯ ಕನ್ನಡ: ಕನ್ನಡ ವ್ಯಾಕರಣ, ಸಂಧಿ, ಸಮಾಸ, ನುಡಿಗಟ್ಟುಗಳು, ಸಮಾನಾರ್ಥಕ & ವಿರುದ್ಧಾರ್ಥಕ ಪದಗಳು, ಗಾದೆ ಮಾತುಗಳು, ವಾಕ್ಯ ದೋಷ ತಿದ್ದುಪಡಿ ಹಾಗೂ ಕನ್ನಡ ಸಾಹಿತ್ಯ.
- ಸಾಮಾನ್ಯ ಇಂಗ್ಲಿಷ್ (ಆಯ್ಕೆ ಮಾಡಿಕೊಂಡರೆ): English Grammar, Vocabulary, Tenses, Comprehension, Synonyms & Antonyms, Sentence Correction.
- ಕಂಪ್ಯೂಟರ್ ಸಾಕ್ಷರತೆ (Computer Knowledge): ಕಂಪ್ಯೂಟರ್ ಮೂಲಭೂತ ಅಂಶಗಳು, MS Office (Word, Excel, PowerPoint), ಇಂಟರ್ನೆಟ್, ಇಮೇಲ್ ಹಾಗೂ ಸೈಬರ್ ಭದ್ರತೆ.
ಅರ್ಜಿ ಸಲ್ಲಿಕೆಯ ದಿನಾಂಕ ಹಾಗೂ ಸಂಪೂರ್ಣ ಅಧಿಸೂಚನೆ ಶೀಘ್ರದಲ್ಲೇ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಲಿದೆ.







