ಬೆಂಗಳೂರಿನಲ್ಲಿ ವಿಶ್ವಮಟ್ಟದ ಸಿರಿಧಾನ್ಯ ಮೇಳ 2023
ಸಿರಿಧಾನ್ಯ ಮೇಳ 2023
ಈ ವಿಷಯದಲ್ಲಿ ನಾವು ಸಿರಿಧಾನ್ಯ ಮೇಳವು 2023 ರಂದು ಜನವರಿಯಲ್ಲಿ3 ದಿನ ನಡೆಯುತ್ತದೆ, ಹಾಗಾಗಿ ಈ ಮೇಳವನ್ನು ಯಾಕೆ ಆಯೋಜಿಸಲಾಗಿದೆ ಮತ್ತು ಇದರ ಉದ್ದೇಶದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಿರಿಧಾನ್ಯ ರೈತರಿಗೆ ಮತ್ತು ಆರೋಗ್ಯಕ್ಕೆ ಹೇಗೆ ಅವಶ್ಯಕ ಎಂಬುದನ್ನು ಕೂಡ ವಿವರಿಸಲಾಗಿದೆ.
World Cereal Fair 2023
ಸಿರಿಧಾನ್ಯಗಳಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. 2021ರಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆದ ಕರ್ನಾಟಕಕ್ಕೆ ‘ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಬಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಅಂದರೆ ವಿದೇಶಗಳಲ್ಲಿರುವ ರೈತರಿಗೆ ಸಿರಿಧಾನ್ಯಗಳ ಮಾಹಿತಿಯನ್ನು ತಿಳಿಸಬೇಕಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ ಎಂದು ಬಿ.ಸಿ ಪಾಟೀಲ್ ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಅಂದರೆ 2023ರ ಜನವರಿ 20, 21 ಮತ್ತು 22 ರಂದು ಬೆಂಗಳೂರಿ ನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ರೈತ ಮುಖಂಡರು ಕೂಡ ಈ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಗವಾಗಿದ್ದಾರೆ.
ಪ್ರಮುಖ ಆಹಾರ ಸರಕುಗಳ ವಿಶ್ವ ಮಾರುಕಟ್ಟೆಗಳ ಹೆಚ್ಚು ಆಳವಾದ ವಿಶ್ಲೇಷಣೆಗಳನ್ನು ಕಾಣಬಹುದಾಗಿದೆ. ಸಿರಿಧಾನ್ಯಗಳು ರೈತನಿಗೆ ತುಂಬಾ ಲಾಭ ತರುವಂತಹ ಧಾನ್ಯಗಳಾಗಿವೆ. ಸಿರಿಧಾನ್ಯದ ಹೆಜ್ಜೆಯನ್ನು ಶಿಲಾಯುಗದಷ್ಟು ಹಿಂದಿನ ಕಾಲದಲ್ಲೂ ಕಾಣಬಹುದು.
ಪ್ರಪಂಚದಾದ್ಯಂತ ಸುಮಾರು 6,000 ವಿಧದ ಸಿರಿಧಾನ್ಯಗಳಿವೆ, ಮತ್ತು ಅವು ಮಣ್ಣು ಮತ್ತು ನೀರನ್ನು ಕಡಿಮೆ ಬೇಡುವುದರಿಂದಾಗಿ , ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಅವು ಶಕ್ತಿ ಮತ್ತು ಪ್ರೋಟೀನ್ನ ಪ್ರಮುಖ ಮೂಲವಾಗಿವೆ. ಅನೇಕ ಪೋಷಕಾಂಶಗಳು ಪರಿಪೂರ್ಣ ಕಾಳುಗಳಲ್ಲಿ ಕಂಡುಬರುತ್ತವೆ.
ಸಾಂಪ್ರದಾಯಿಕ ವೈದ್ಯದ ಪ್ರಕಾರ, ಸಿರಿಧಾನ್ಯ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ಹಸಿವನ್ನು ಸುಧಾರಿಸುತ್ತದೆ, ಪ್ರಾಣವನ್ನು ಪೋಷಿಸಿ ಮತ್ತು ರಕ್ತದ ಕೊರತೆಯನ್ನು ನೀಗಿಸುತ್ತದೆ. ಹೊಟ್ಟೆಯನ್ನು ಸಮಾಧಾನಗೊಳಿಸುತ್ತದೆ ಮತ್ತು ನಿದ್ರೆಯನ್ನು ಶಾಂತಗೊಳಿಸುತ್ತದೆ.
ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಹೊಂದಿರುತ್ತವೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಯ ವೇಗವನ್ನು ಸಹ ನಿಯಂತ್ರಿಸುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಸಿರಿಧಾನ್ಯಗಳೆಂದರೆ – ಸಜ್ಜೆ, ನವಣೆ, ಜೋಳ, ರಾಗಿ, ಸಾಮೆ ಇತ್ಯಾದಿ ಇವು ಮನುಷ್ಯನ ಆರೋಗ್ಯಕ್ಕೆ ಉತ್ತಮ ಅಹಾರವಾಗಿದೆ.
ವಿದೇಶಗಳಲ್ಲಿರುವ ಪ್ರತಿಯೊಬ್ಬ ರೈತರಿಗೆ ಧಾನ್ಯಗಳ ಮಹತ್ವ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಸಿರಿಧಾನ್ಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿಯವರಿಗೂ ಕೂಡ ಈ ಸಿರಿಧಾನ್ಯ ಮೇಳಕ್ಕೆ ಆಹ್ವಾನ ನೀಡಲಾಗುತ್ತದೆ. ಸಿರಿಧಾನ್ಯ ಮೇಳದಲ್ಲಿ ವ್ಯಾಪಾರಸ್ಥರು ಹಾಗೂ ರಫ್ತುದಾರರು ಕೂಡ ಭಾಗಿಯಾಗಲಿದ್ದಾರೆ. ಹಾಗೆಯೇ ಹಲವಾರು ರೈತರು ಕೂಡ ಇಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಯವರು ಬಂದರೆ ಇನ್ನಷ್ಟು ಕಾರ್ಯಕ್ರಮಕ್ಕೆ ಮೆರಗು ಬರುವುದು ಎಂದು ತಿಳಿಸಲಾಗಿದೆ.
ಇತರೆ ವಿಷಯಗಳು :
ವಿವಿಧ ಉಡುಪುಗಳಿಗೆ ದೀಪಾವಳಿ ಹಬ್ಬದ ಭರ್ಜರಿ ಆಫರ್ ಗಳು
ಸ್ಮಾರ್ಟ್ಫೋನ್ ಗಳಿಗೆ ದೀಪಾವಳಿಯಲ್ಲಿ ಭರ್ಜರಿ ಆಫರ್ ಗಳು
ಕೇದಾರನಾಥಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಹೆಲಿಕ್ಯಾಪ್ಟರ್ ಪತನ
Comments are closed, but trackbacks and pingbacks are open.