ವರಮಹಾಲಕ್ಷ್ಮಿ ಹಬ್ಬದ ಸಾಮಾಗ್ರಿಗಳು ಬಲು ದುಬಾರಿ.! ಜನಸಾಮಾನ್ಯರ ಜೇಬಿಗೆ ಕತ್ತರಿ; ಹೂವು ಹಣ್ಣು ಬೆಲೆ ಕೇಳಿದ್ರೆ ತಲೆ ಗಿರ್ ಅನ್ನುತ್ತೆ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲಾ ವಸ್ತುವಿನ ದರ ಏರಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಹಬ್ಬ ಪ್ರಾರಂಭವಾಗಿರುವದರಿಂದ ಎಲ್ಲಾ ಪೂಜಾ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ, ಹಾಗಾದ್ರೆ ಯಾವ ವಸ್ತುವಿನ ಎಷ್ಟಿದೆ? ಈ ಬೆಲೆ ಏರಿಕೆಗೆ ಕಾರಣ ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ರಾಜ್ಯಾದ್ಯಂತ ಹಬ್ಬದ ತಯಾರಿ ಬಲು ಜೋರಾಗಿಯೇ ನಡೆಯುತ್ತಿದೆ, ನಾಗರ ಪಂಚಮಿಯ ನಂತರದಲ್ಲಿ ಬರುವ ಮೊದಲ ಹಂತವಾಗಿರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಜನರು ಅನೇಕ ರೀತಿಯ ಹಣ್ಣು, ಹೂವು, ಇನ್ನು ಅನೇಕ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವಲ್ಲಿ ಜನರು ತುಂಬಾನೇ ಮುಂದಾಗಿದ್ದಾರೆ ಅದ್ರೆ ಹಬ್ಬದ ಸಂಭ್ರಮದಲ್ಲಿ ಇದ್ದವರಿಗೆ ಈ ಭಾರೀ ಬೆಲೆ ಏರಿಕೆಯ ಬಿಸಿ ತಗುಲಿದೆ, ಏಕೆಂದರೆ ಹಬ್ಬ ಹತ್ತಿರ ಬಂತು ಎಂದರೆ ಹೂವು – ಹಣ್ಣುಗಳ ಬೆಲೆ ಏರಿಕೆಯನ್ನು ಕಾಣುವುದು ಸಾಮಾನ್ಯ ವಿಷಯವಾಗಿದೆ.
ಹೌದು ಈ ಭಾರೀಯು ಕೂಡ ಎಲ್ಲಾ ಪೂಜಾ ಸಾಮಗ್ರಿಗಳ ಬೆಲೆಯು ಏರಿಕೆಯನ್ನು ಕಂಡಿದೆ. ಈ ಎಲ್ಲವೂ ಹಬ್ಬಕ್ಕೆ ಬೇಕೆ ಬೇಕು ಅದ್ರೆ ಇದನ್ನು ತೆಗೆದುಕೊಳ್ಳಲು ಜನರ ಜೇಬು ಸುಡುವಂತೆ ಆಗಿದೆ ಎಂದು ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಈ ಭಾರಿಯಂತು ಎಲ್ಲಾ ವಸ್ತುಗಳ ಬೆಲೆಯು ಏರಿಕೆಯನ್ನು ಕಂಡಿದೆ. ಈ ಭಾರೀ ಯಾವ ವಸ್ತು ಎಷ್ಟು ಬೆಲೆಯನ್ನು ಹೊಂದಿದೆ ಎಂದು ನೋಡುವುದದರೇ, ದಾಳಿಂಬೆ ಹಣ್ಣು 150 ರಿಂದ 200 ರೂ, ಕಿತ್ತಲೆ ಹಣ್ಣು- 150 ರಿಂದ 200 ರೂ, ದ್ರಾಕ್ಷಿ ಹಣ್ಣು-180 ರಿಂದ 250 ರೂ, ಪೈನಾಪಲ್ 90 ರಿಂದ 150 ರೂ, ಮಾನಿವನ ಹಣ್ಣು ತೊರಣ- 40 ರೂ,
ಇದು ಓದಿ: ಸೂರ್ಯನ ಬಳಿ ಹೋಗಲಿರುವ ಇಸ್ರೋ.! ವಿಶ್ವವೇ ಕಂಡು ಕೇಳರಿಯದ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಆದಿತ್ಯ L1
ವಿಳ್ಯದೆಲೆ- 100 ರಿಂದ 150 ರೂ, ಕನಕಾಂಬರ ಕೆಜಿಗೆ 1200 ರಿಂದ 1500 ರೂ, ಬಾಳೆ ಕಂಬ ಜೋಡಿಗೆ 50 ರಿಂದ 100 ರೂ. ಇದೆ ರೀತಿ ಮುಂದುವರೆದರೆ ಹಬ್ಬಗಳನ್ನು ಪೂರೈಕೆ ಮಾಡುವುದು ತುಂಬ ಕಷ್ಟವಾಗುತ್ತದೆ ಎಂದು ಜನ ಸಾಮಾನ್ಯರು ತಿಳಿಸಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ವರಮಹಾಲಕ್ಷ್ಮಿ ಮತ್ತು ಹಬ್ಬಗಳ ಸಾಲು ಪ್ರಾರಂಭವಾಗಲಿದೆ, ಇದರಿಂದ ಬೆಲೆ ಏರಿಕೆಯಿಂದ ಜನರು ಸುಸ್ತಾಗಿದ್ದಾರೆ.
Comments are closed, but trackbacks and pingbacks are open.