ಕೋಟಿ ಕೋಟಿ ಹಣಕ್ಕೆ ದಾರಿಯಾಯ್ತು ʼಶಕ್ತಿʼ ಗ್ಯಾರಂಟಿ..! ರಾಜ್ಯದಲ್ಲಿ ಎಷ್ಟಾಯಿತು ಗೊತ್ತಾ ಹೆಚ್ಚುವರಿ ಹುಂಡಿ ಹಣ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ʼಶಕ್ತಿʼ ಗ್ಯಾರಂಟಿಯಿಂದ ದೇವಸ್ಥಾನಗಳು ಪಡೆಯುತ್ತಿರುವ ಲಾಭದ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಇದೀಗ ದೇವಸ್ಥಾನಗಳ ಆದಾಯ ಏರಿಕೆಯನ್ನು ಕಂಡಿದೆ. ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಎಷ್ಟು ಏರಿಕೆಯನ್ನು ಕಂಡಿದೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಶಕ್ತಿ ಯೋಜನೆಯಿಂದ ಶ್ರೀಮಂತವಾದ ದೇವಾಲಯಗಳು. ಶಕ್ತಿ ಯೋಜನೆಯ ಬಳಿಕ ತೀರ್ಥ ಕ್ಷೇತ್ರಗಳ ಪ್ರವಾಸಿಗರ ಸಂಖ್ಯೆ ಹೆಚ್ಚಾಳವನ್ನು ಕಂಡಿದೆ. ರಾಜ್ಯದ ದೇವಾಲಯಗಳಲ್ಲಿಆಧಾಯ ಹೆಚ್ಚಾಗಿದೆ. ಅದಕ್ಕಾಗಿ ದೇವಾಲಯಗಳಿಗೆ ಡಬಲ್ ಶಕ್ತಿ ಬಂದಂತಾಗಿದೆ. ಒಂದೇ ತಿಂಗಳಿನಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ಸಂಗ್ರಹ ಆಗಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಆದಾಯದ ಪ್ರಮಾಣ ಏರಿಕೆಯನ್ನು ಕಂಡಿದೆ. ನೀವು ಕೂಡ ಶಕ್ತಿ ಯೋಜನೆಯ ಲಾಭ ಪಡೆದವರಾಗಿದ್ದಾರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.
ಜುಲೈ 11 ರಿಂದ ಜುಲೈ 15 ರವರೆಗೂ 24.47 ಕೋಟಿ ಆದಾಯ ಬಂದಿದೆ. ಡಿಜಿಟಲ್ ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿದೆ. ಯಾವ ಯಾವ ದೇವಸ್ಥಾನಕ್ಕೆ ಎಷ್ಟು ಎಷ್ಟು ಆದಾಯ ಬಂದಿದೆ ಹಾಗದ್ರೆ ಮೊದಲನೆಯದಾಗಿ ಹುಲಿಗೆಮ್ಮ ದೇವೆ ಕೊಪ್ಪಳ ಕಳೆದ ವರ್ಷ 1.02 ಕೋಟಿ/ ಈ ವರ್ಷ 1.41 ಕೋಟಿ ರೂ. ಬನಶಂಕರಿ ಅಮ್ಮನವರು ಬೆಂಗಳೂರು ಕಳೆದ ವರ್ಷ 65.82 ಲಕ್ಷ/ ಈ ವರ್ಷ 83.64 ಲಕ್ಷ ರೂ. ಮಹಾಲಿಂಗೇಶ್ವರ ದೇವಸ್ಥಾನ ಕಳೆದ ವರ್ಷ 43.33 ಲಕ್ಷ/ ಈ ವರ್ಷ 48.09 ಲಕ್ಷ ರೂ. ನಿಮಿಷಾಂಬ ದೇವಸ್ಥಾನ ಶ್ರೀರಂಗಪಟ್ಟಣ ಕಳೆದ ವರ್ಷ 20.76 ಲಕ್ಷ/ ಈ ವರ್ಷ 27.98 ಲಕ್ಷ ರೂ.
ಕಬ್ಬಾಳಮ್ಮ ದೇವಸ್ಥಾನ ಕನಕಪುರ ಕಳೆದ ವರ್ಷ 13.96 ಲಕ್ಷ/ ಈ ವರ್ಷ 19.64 ಲಕ್ಷ ರೂ. ಮುಜಾರಯಿ ಇಲಾಖೆ ಇದನ್ನು ಖಚಿತ ಪಡಿಸಲಾಗಿದೆ. ಈ ವರ್ಷ ಉಚಿತ ಸಾರಿಗೆ ವ್ಯವಸ್ಥೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಆದಾಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಯಬಹುದಾಗಿದೆ.
ಇತರೆ ವಿಷಯಗಳು:
ಹಾಲಿನ ಭವಿಷ್ಯ ಇಂದು ಭಟಾಬಯಲು.! ಕರ್ನಾಟಕಕ್ಕೆ ಮತ್ತೆ ಬೆಲೆ ಏರಿಕೆಯ ಬಿಸಿ, ನಂದಿನಿ ಈಗ ತುಂಬಾ ದುಬಾರಿ
ಕಲ್ಪವೃಕ್ಷಕ್ಕೆ ವಕ್ಕರಿಸಿದ ಕಂಟಕ.! ತೆಂಗು ಬೆಳೆಗಾರರಿಗೆ ಆತಂಕ, ನಿಮ್ಮ ತೋಟಕ್ಕೂ ಆಗಮಿಸಿದ ಮಹಾಮಾರಿ?
Comments are closed, but trackbacks and pingbacks are open.