ವಿಶ್ವದ ಚಿತ್ತ ಭಾರತದ ವಿಕ್ರಮನತ್ತ: ಇಸ್ರೋನ ಅಪಹಾಸ್ಯ ಮಾಡಿದ ಪ್ರಕಾಶ್‌ ರಾಜ್! ಇದರ ಬಗ್ಗೆ ಕೊಟ್ಟ ಸ್ಪಷ್ಟನೆ ಏನು?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಂದ್ರಯಾನ-3 ರ ಕುರಿತು ಪ್ರಕಾಶ್‌ ರಾಜ್ ಮಾಡಿರುವ ಟ್ವೀಟ್‌ ಬಗ್ಗೆ ವಿವರಿಸಿದ್ದೇವೆ. ಹಾಗಾದ್ರೆ ಏನಿದು ಸುದ್ದಿ? ನಿಜಕ್ಕೂ ಈ ಪೋಸ್ಟ್‌ ಯಾರಿಗಾಗಿ ಮಾಡಲಾಗಿದೆ? ಈ ಪೋಸ್ಟ್‌ ನಿಂದ ದೇಶಾದ್ಯಂತ ಜನರ ಮನಸ್ಥಿತಿ ಹೇಗಿದೆ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.

prakash raj tweet on chandrayaan 3

ದೇಶದ ಮಹತ್ವದ ಯೋಜನೆ ಚಂದ್ರಯಾನ-3 ಒಂದೊಂದೆ ಹಂತವನ್ನು ಮುಗಿಸುತ್ತ ಚಂದ್ರನತ್ತ ತನ್ನ ಹೆಜ್ಜೆಯನ್ನು ಹಾಕುತ್ತಾ ಹೋಗುತ್ತಿದೆ, ಇನ್ನೇನು ಚಂದ್ರನ ಮೇಲೆ ಲ್ಯಾಂಡ್‌ ಆಗಲು ಕ್ಷಣಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಇಢೀ ವಿಶ್ವದ ಕಣ್ಣು ಭಾರತದ ಮೇಲಿದೆ ಎಂದರೂ ತಪ್ಪಾಗಲಾರದು. ಇದರ ನಡುವೆಯೇ ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಸುತ್ತ ಸುತ್ತುತ್ತಿದ್ದ ಚಂದ್ರಯಾನ-2ನ ಆರ್ಬಿಟರ್‌ ಚಂದ್ರಯಾನ- 3 ನ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಸಾಧ್ಯವಾಗಿದೆ ಎಂದು ಇಸ್ರೋ ಮಾಹಿತಿಯನ್ನು ತಿಳಿಸಿದೆ, ಈ ಮೂಲಕ ಚಂದ್ರಯಾನ- 3‌ ನ ಯಶಸ್ಸು ಚಂದ್ರಯಾನ- 2 ರದ್ದು ಆಗಲಿದೆ.

ಸ್ವಾಗತ ಗೆಳೆಯ ಅಂತ ಚಂದ್ರಯಾನ- 2 ನ ಆರ್ಬಿಟರ್‌ ಲ್ಯಾಂಡರ್‌ ಅನ್ನು ಸ್ವಾಗತಿಸಿದೆ ಅಂತ ಇಸ್ರೋ ಹೇಳಿದೆ, ಇದರಿಂದಾಗಿ ಬೆಂಗಳೂರಿನಲ್ಲಿರುವ ಐಸ್‌ ಟ್ರಾಕ್ ಗೆ ಈಗ ಲೂನಾರ್‌ ಮಾಡ್ಯೂಲ್ ಸಂಪರ್ಕ ಸಾಧಿಸೋಕೆ ಮಾರ್ಗಗಳು ಸಿಕ್ಕಿದಂತೆ ಆಗಿದೆ ಎಂದು ಇಸ್ರೋ ಟ್ವೀಟ್‌ ಮಾಡಿದೆ. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಿದ್ದು ಆಗಸ್ಟ್‌ 23 ಸಂಜೆ 5.23 ರಿಂದ ಲೈವ್‌ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ರವರು ಚಂದ್ರಯಾನ- 3 ಅಪಹಾಸ್ಯ ಮಾಡಿ ಟ್ವೀಟ್‌ ಮಾಡಿದ್ದಾರೆ, ಈ ಪೋಸ್ಟ್‌ ಈಗ ವಿವಾದಕ್ಕೆ ಕಾರಣವಾಗಿದೆ.

ಇದು ಓದಿ: ಮನೆಯಿಂದ ಸಾಲ ಪಡೆಯಲು ಬಯಸುತ್ತಿದ್ದೀರಾ?, 21 ವರ್ಷ ಪೂರೈಸಿದವರಿಗೆ 15,000 ಸಂಬಳವಿದ್ರು ಸಿಗಲಿದೆ 3 ಲಕ್ಷದವರೆಗೆ ಸಾಲ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಇಸ್ರೋ ಮುಖ್ಯಸ್ಥ ಕೆ. ಶಿವನ್‌ ರವರು ಚಹಾ ಮಗಚುವ ಚಿತ್ರವನ್ನು ಪೋಸ್ಟ್‌ ಮಾಡಿರುವ ಪ್ರಕಾಶ್‌ ರಾಜ್‌ ʼ ತಾಜ ಸುದ್ದಿ ಚಂದ್ರಯಾನ್‌ ನಿಂದ ಈಗಷ್ಟೇ ಬಂದ ಮೊದಲ ದೃಶ್ಯʼ ಎಂದು ಸಾಲನ್ನು ಬರೆದು ಪೋಸ್ಟ್‌ ಮಾಡಿದ್ದಾರೆ, ಇದು ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಪಟ್ಟೆ ವೈರಲ್‌ ಆಗಿದೆ ಮತ್ತು ಚರ್ಚೆಗೂ ಸಹ ಕಾರಣವಾಗಿದೆ. ಕೆಲ ಕಡೆಗಳಲ್ಲಿ ಇದರ ಪರ ಮತ್ತು ವಿರುದ್ದದ ಚರ್ಚೆಗಳು ಕೂಡ ಹುಟ್ಟಿಕೊಂಡಿದೆ. ಕೆಲವರು ಇದಕ್ಕಾಗಿ ನೀವು ಯಾವುದೇ ವಿವರವನ್ನು ನೀಡಿದರು ಕೂಡ ಅದು ಸುಳ್ಳು, ನೀವು ಬೇಕು ಬೇಕು ಎಂದೆ ಈ ರೀತಿ ಮಾಡಿದ್ದಿರಿ ಇದು ಇಸ್ರೋ ಮತ್ತು ನಮ್ಮ ದೇಶಕ್ಕೆ ಮಾಡಿರುವ ಅವಮಾನ ಎಂದು ಜನರು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮೋದಿಯವರ ಕಾಲು ಎಳೆಯುವ ದೃಷ್ಠಿಯಿಂದ ಚಾಯಿವಾಲ ಎಂದು ಪೋಸ್ಟ್‌ ಅನ್ನು ಹಾಕಿದ್ದಿರಿ ಎಂದು ಜನರು ಗುಡುಗಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿದ ಪ್ರಕಾಶ್‌ ರಾಜ್‌ “ಹಳೆಯ ಒಂದು ಜೋಕ್ಸ್‌ ಒಂದು ಇತ್ತು ನೀಲ್‌ ಆರ್ಮ್‌ ಸ್ಟ್ರಾಂಗ್‌ ರವರು ಮೂನ್‌ ಹೋಗುವುದಕ್ಕಿಂತ ಮುಂಚೆ ಕೇರಳದವರು ಅಲ್ಲಿ ಚಹಾ ಮಾರಟಕ್ಕಿದ್ದರು ಎನ್ನುವ ಹಳೆಯ ಜೋಕ್ಸ್‌ ಜಾಲ್ತಿಯಲ್ಲಿ ಇತ್ತು ಇದನ್ನು ಕೇರಳದವರು ಎಲ್ಲಾ ಕಡೆಗಳಲ್ಲಿಯು ಇದ್ದರೆ ಎನ್ನುವುದನ್ನು ಹೇಳುವ ಸಂದರ್ಭದಲ್ಲಿ ಈ ಜೋಕ್ಸ್‌ ಅನ್ನು ಹೇಳುತ್ತಿದ್ದರು ಎಂದು ತಮ್ಮ ಸಮರ್ಥನೆಯನ್ನು ನಂತರದ ಟ್ವೀಟ್‌ ಮೂಲಕ ತಿಳಿಸಿದ್ದಾರೆ, ಇದು ಕೇವಲ ಜೋಕ್ಸ್‌ ಮಾತ್ರ ಇದನ್ನು ಜೋಕ್ಸ್‌ ಆಗಿಯೇ ತೆಗೆದುಕೊಳ್ಳಿ ನಿಮಗೆ ಇದು ಅರ್ಥ ಅಗಿಲ್ಲ ಅಂದ್ರೆ ನಾನು ಏನು ಮಾಡೋಕೆ ಆಗೋಲ್ಲ” ಎಂದು ತಿಳಿಸಿದ್ದಾರೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್‌ ಮೂಲಕ ತಿಳಿಸಿ.

ಇತರೆ ವಿಷಯಗಳು:

ರಿಲಯನ್ಸ್‌ ಜಿಯೋ ತಂದಿದೆ ಹಬ್ಬದ ಕೊಡುಗೆ.! ಕೇವಲ 149 ರೂ.ನಲ್ಲಿ ಅದ್ಬುತ ಲಾಭ; ಇಂದೇ ಪಡೆಯಿರಿ

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗಿಫ್ಟ್!, ಗೃಹಲಕ್ಷ್ಮಿ ಆಯ್ತು, ಈಗ ವರಮಹಾಲಕ್ಷ್ಮಿ ಹಬ್ಬಕ್ಕೂ ಸರ್ಕಾರದಿಂದ ಮಹಿಳೆಯರಿಗೆ ಗಿಫ್ಟ್, ಮಹಿಳೆಯರೇ ತಪ್ಪದೆ ಈ ಮಾಹಿತಿ ತಿಳಿಯಿರಿ

ಹಳೆ KSRTC ಬಸ್‌ಗಳಿಗೆ ಹೊಸ ಕಳೆ, ವೇಗದೂತ ಪ್ರಯಾಣಿಕರಿಗೆ ಇನ್ನು ಆರಾಮದಾಯಕ ಪ್ರಯಾಣ, ಈ ಬಸ್ಸಿನ ವಿಶೇಷತೆ ಏನು ಗೊತ್ತಾ?

Comments are closed, but trackbacks and pingbacks are open.