ಪಡಿತರ ಚೀಟಿಗೆ ಕಾಯುತ್ತಿದ್ದವರಿಗೆ ಬಂಪರ್ ನ್ಯೂಸ್.! ಮನೆಯಲ್ಲೇ ಕುಳಿತು ಆನ್ಲೈನ್‌ನಲ್ಲಿ ಅರ್ಜಿ ಹಾಕಿ, ಇಲ್ಲಿದೆ ಪೂರ್ಣ ಮಾಹಿತಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹೊಸ ಪಡಿತರ ಚೀಟಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ನಾವು ಒದಗಿಸಬೇಕಾದ ದಾಖಲೆಗಳು ಯಾವುವು? ಎಲ್ಲಿ ಮತ್ತು ಹೇಗೆ ಈ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು, ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಓದಿ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಘೋಷಣೆ ಮಾಡಿದಾಗಿನಿಂದಲೂ ಕೂಡ ರೇಷನ್ ಕಾರ್ಡ್ ಇಲ್ಲದವರು ಬೇಸರವನ್ನು ಹೊರ ಹಾಕಿದ್ದಾರೆ ಹಾಗೂ ಇನ್ನು ಹೊಸದಾಗಿ ಮದುವೆಯಾದ ಅಥವಾ ಕುಟುಂಬದಿಂದ ಬೇರೆಯಾದವರು ಅಗತ್ಯವಾಗಿ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಲು ಬಯಸುತ್ತಾರೆ. ಹಾಗಾಗಿ ರೇಷನ್ ಕಾರ್ಡ್‌ನ ಅರ್ಜಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ.
ಪ್ರತಿಯೊಬ್ಬ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಲೇಖನವನ್ನು ಪೂರ್ತಿಯಾಗಿ ಓದಿ. ನೀತಿ ಸಂಹಿತೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣೆ ಮಾಡುವುದನ್ನು ನಿಷೇಧ ಮಾಡಲಾಗಿತ್ತು. ಈಗಾ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್ಚ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಅರ್ಜಿಯನ್ನು ಅನ್ಲೈನ್‌ನಲ್ಲಿ ಸಲ್ಲಿಸಬಹುದು ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಜನಸ್ನೇಹಿ ಕೇಂದ್ರ ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಧಾರ್ ಆಧಾರಿತ ಬಯೋ ಮೆಟ್ರಿಕ್‌ಅನ್ನು ಒದಗಿಸಬೇಕು.
ಅರ್ಜಿ ಸಲ್ಲಿಸುವ ಹಂತದಲ್ಲಿ ದೃಢೀಕರಣ ನೀಡಬೇಕು, 5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಿಗೆ ಬಯೋ ಮೆಟ್ರಿಕ್ ಮಾಡಿಸುವುದು ಕಡ್ಡಾಯವಾಗಿಲ್ಲ ಆದ್ರೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ನೀವು ಉಚಿತ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದುದಾಗಿದೆ ನೀವು ಕೂಡ ಈ ಕಾರ್ಡ್ ಮಾಡಿಸಲು ಯೋಚನೆ ಮಾಡುತ್ತಿದ್ದಾರೆ ಇಂದೇ ಈ ರೀತಿ ಮಾಡುವುದರಿಂದ ನಿಮ್ಮ ಕಾರ್ಡ ಬೇಗನೆ ಬರುತ್ತದೆ.
Comments are closed, but trackbacks and pingbacks are open.