ಈ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ರಾಜ್ಯದ ಸರ್ಕಾರದಿಂದ ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಮಾಹಿತಿ.
ಈ ಯೋಜನೆಯ ಅಡಿಯಲ್ಲಿ 2023-24 ಬಿ.ಇಡಿ ಮತ್ತು ಡಿ.ಇಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯದ) ವಿಶೇಷ ಪ್ರೋತ್ಸಾಹಧನವನ್ನು ನೀಡಲು ಆನ್ಲೈನ್ ಸೇವಾಸಿಂಧು ತಂತ್ರಾಂಶವನ್ನು ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಈ ಯೋಜನೆಗೆ 2023ರ ಸೆಪ್ಟೆಂಬರ್ 21 ಕೊನೆಯ ದಿನವಾಗಿದ್ದು, ಅರ್ಜಿಯನ್ನು https://sevasindhu.karnataka.gov.in ವೆಬ್ಸೈಟ್ ಮೂಲಕ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಇಲ್ಲಿದೆ ನೋಡಿ :-
×ನಿವಾಸಿ ದೃಢೀಕರಣ ಪತ್ರ
×ಜಾತಿ ಮತ್ತು ಆದಾಯ ಪ್ರಮಾಣ ಪತ್ರ
×ಹಿಂದಿನ ವರ್ಷದ ಅಂಕಪಟ್ಟಿ
×ಪದವಿ ಪ್ರಮಾಣ ಪತ್ರ
×ಶುಲ್ಕ ರಸೀದಿ
×ಆಧಾರ್ ಕಾರ್ಡ್
×ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ
×ಪಿಯುಸಿ ಅಂಕಪಟ್ಟಿ
×ವ್ಯಾಸಂಗ ದೃಢೀಕರಣ ಪತ್ರ
×ಬ್ಯಾಂಕ್ ಪಾಸ್ ಬುಕ್ (ಆಧಾರ್ ಲಿಂಕ್ ಮಾಡಿಸಿರಬೇಕು)
ಈ ಯೋಜನೆಯ ಷರತ್ತುಗಳು: ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು, ಕೋರ್ಸುಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷವೂ ರೂ.25000/- ಅನುದಾನ ನೀಡಲಾಗುತ್ತದೆ (ಗರಿಷ್ಠ 2 ವರ್ಷಗಳ ಮಿತಿ). ಅಲ್ಪಸಂಖ್ಯಾತರ ಅಭ್ಯರ್ಥಿಗಳ ಪೋಷಕರ ವಾರ್ಷಿಕ ಆದಾಯ ಗರಿಷ್ಠ ರೂ. 6 ಲಕ್ಷಗಳಾಗಿರಬೇಕು. ಅಭ್ಯರ್ಥಿಗಳ ಅರ್ಹತೆ ಪರೀಕ್ಷೆ ಅಥವಾ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಸಲಾಗುತ್ತದೆ. ಪ್ರೋತ್ಸಾಹಧನ ಪಡೆಯುವ ವಿದ್ಯಾರ್ಥಿಗಳು ಭಾರತ ಸರ್ಕಾರ ಅಥವಾ ಇತರ ವಿದ್ಯಾರ್ಥಿ ವೇತನ ಶಿಷ್ಯವೇತನ ಪಡೆಯಲು
ಈ ಯೋಜನೆಯ ಅರ್ಹರಾಗುತ್ತಾರೆ: ಈ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ಸರ್ಕಾರಿ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ನಿಯಮಾನುಸಾರ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.
Comments are closed, but trackbacks and pingbacks are open.