ಆದಾಯ ಹೆಚ್ಚಿಸಲು ಸಾರಿಗೆ ಇಲಾಖೆ ಹೊಸ ಪ್ಲಾನ್..! ಖಾಸಗಿ ಲಾಜಿಸ್ಟಿಕ್ ಗೆ KSRTC ಸೆಡ್ಡು..! ಈ ದಿನದಿಂದ ರೋಡಿಗಿಳಿಯಲಿದೆ KSRTC ಲಾರಿಗಳು
ಹಲೋ ಸ್ನೇಹಿತರೆ ಇಷ್ಟು ದಿನ ರಾಜ್ಯಾದ್ಯಂತ ಜನರನ್ನು ಹೊತ್ತು ಸಾಗಿಸುವಂತಹ KSRTC ಬಸ್ ಗಳನ್ನು ನೋಡುತ್ತಾ ಇದ್ರೆ, ಇನ್ಮುಂದೆ KSRTC ಲಾರಿಗಳು ಕೂಡ ರಸ್ತೆಗೆ ಇಳಿಯಲಿದೆ. ಅರೆ ಇದೇನಪ್ಪಾ ಹೊಸ ವಿಚಾರ KSRTC ಲಾರಿಗಳ ಇವುಗಳ ಕೆಲಸ ಏನು? ಯಾವಾಗಿನಿಂದ ರೋಡಿಗಿಳಿಯತ್ತೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಖಾಸಗಿ ಲಾಜಿಸ್ಟಿಕ್ ಗೆ KSRTC ಸೆಡ್ಡು, ಸೆಪ್ಟೆಂಬರ್ ನಲ್ಲಿ ರೋಡಿಗಿಳಿಯತ್ತೆ KSRTC ಲಾಜಿಸ್ಟಿಕ್, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮತ್ತಷ್ಟು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ KSRTC ಹೊಸ ಪ್ಲಾನ್ ಗೆ ಮುಂದಾಗುತ್ತಿದೆ.
ಖಾಸಗಿ ಲಾಜಿಸ್ಟಿಕ್ ಗೆ ಸೆಡ್ಡು ಹೊಡಿಯಲು KSRTC ಮುಂದಾಗಿದ್ದು , ಇನ್ನುಂದೆ ಲಾರಿಗಳ ಮೂಲಕ ಲಗೇಜ್ ಗಳನ್ನು ರಾಜ್ಯಾವ್ಯಾಪಿ ಸಾಗಾಣೆ ಮಾಡೊಕೆ ಚಿಂತನೆ ಮಾಡಿದೆ. ಇಷ್ಟು ದಿನ ಪ್ರಯಾಣಿಕರು ಸಂಚರಿಸುವ ಬಸ್‌ನಲ್ಲಿ ಪಾರ್ಸಲ್ ಸೇವೆ ಒದಗಿಸಲಾಗುತ್ತಾ ಇತ್ತು ಕೆಲ ಖಾಸಗಿಯವರಿಗೆ ಕಾರ್ಗೊ ಸಾಗಾಣೆ ಟ್ರೆಂಟರ್ ಗಳನ್ನು ಕೊಟ್ಟು ಅವರಿಂದ ವರ್ಷಕ್ಕೆ 28 ಕೋಟಿ ಲಾಭವನ್ನು KSRTC ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಾ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಲಗೇಜ್ ಸಾಗಾಣಿಕೆ ಬೇಡಿಕೆ ಹೆಚ್ಚಾದ ಹಿನ್ನಲೆ ಇನ್ಮುಂದೆ ತಾವೇ ಈ ಸರ್ವೆ ನೀಡಲು ಪ್ಲಾನ್ ಮಾಡಿದೆ. ಈ ಮೂಲಕ ಖಾಸಗಿ ಅವರಿಗೆ ಬರುತ್ತಾ ಇದ್ದಾ 28 ಕೋಟಿ ಹಣದಿಂದ ಸಾಗಾಣಿಕೆ ಲಾಭವನ್ನು 100 ಕೋಟಿಗೆ ಹೆಚ್ಚಿಸಲು ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
KSRTC ಪ್ಲಾನ್:
- ಬಸ್ ಚಾಲಕರನ್ನೇ ಲಾರಿ ಚಾಲಕರನ್ನಾಗಿ ಮಾಡುವ ಸಾಧ್ಯತೆ.
- ಇದಕ್ಕೆಂದು ಪ್ರತ್ಯೇಕ ನೇಮಕಾತಿ ಮಾಡುವ ಸಾಧ್ಯತೆ ಕಡಿಮೆ.
- ಪಾರ್ಸಲ್ಗಳನ್ನು ಗ್ರಾಹಕರ ಮನೆ ಬಾಗಿಲಿಗೂ ತಲುಪಿಸುವ ಚಿಂತನೆ.
- ಪ್ರತ್ಯೇಕ ಶುಲ್ಕ ವಿಧಿಸಿ ಸೇವೆಗಳನ್ನು ಒದಗಿಸಲು KSRTC ಪ್ಲಾನ್
- ಸಥಲೀಯ ಸಿಬ್ಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಪಾರ್ಸೆಲ್ ತಲುಪಿಸಲು ಪ್ಲಾನ್
ಇನ್ನೂ ಪ್ರಾಥಮಿಕ ಹಂತವಾಗಿ ಪ್ರತ್ಯೇಕ 10 ಲಾರಿಗಳನ್ನು ತರಿಸಲಾಗಿದೆ ಪ್ರಾರಂಭದಲ್ಲಿ ರಾಜ್ಯದೊಳಗೆ ಮಾತ್ರ ಸೇವೆ ನೀಡಲು KSRTC ಚಿಂತನೆ ಮಾಡಿದೆ. ರಾಜ್ಯದೊಳಗೆ ವರ್ಕೌಟ್ ಆದ್ರೆ ಹೊರ ರಾಜ್ಯಗಳಿಗೂ ಸೇವೆ ವಿಸ್ತರಣೆ ಸಾಧ್ಯತೆ ಹೆಚ್ಚಿದೆ. ಸೆಪ್ಟೆಂಬರ್ ನಿಂದ KSRTC ಲಾಜಿಸ್ಟಿಕ್ ಆರಂಭವಾಗೋ ಸಾಧ್ಯತೆ ಇದ್ದೂ. ಸದ್ಯದರಲ್ಲೆ ದರ ಫಿಕ್ಸ್ ಮಾಡುವ ನಿರೀಕ್ಷೇ ಇದೆ. ಒಟ್ಟಿನಲ್ಲಿ ನೀವು ಬಸ್ ನಲ್ಲಿ ಪ್ರಯಾಣ ಮಾಡಿದರೆ ನಿಮ್ಮ ಲಗೇಜ್‌ಗಳು ಲಾರಿ ಜೊತೆ ನಿಮ್ಮ ಜಾಗ ಸೇರತ್ತೆ.
ಇತರೆ ವಿಷಯಗಳು:
ಈ ಜಿಲ್ಲೆಯ ರೈತರೇ ಗಮನಿಸಿ, ಸರ್ಕಾರದಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನ, ತಪ್ಪದೆ ಈ ಕಚೇರಿಗೆ ಭೇಟಿ ನೀಡಿ.
Comments are closed, but trackbacks and pingbacks are open.