ಹಳೆ KSRTC ಬಸ್‌ಗಳಿಗೆ ಹೊಸ ಕಳೆ, ವೇಗದೂತ ಪ್ರಯಾಣಿಕರಿಗೆ ಇನ್ನು ಆರಾಮದಾಯಕ ಪ್ರಯಾಣ, ಈ ಬಸ್ಸಿನ ವಿಶೇಷತೆ ಏನು ಗೊತ್ತಾ?

ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಕೆಎಸ್‌ಆರ್‌ಟಿಸಿಗೆ ವೇಗದೂತ ಸೇವೆಗೆ ಹೊಸ ಪ್ರೋಟೋ ಟೈಪ್ ಎಕ್ಸ್‌ಪ್ರೆಸ್‌ ಬಸ್‌ಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿದ್ದು ಎಂದು ತಿಳಿದುಬಂದಿದೆ, ಪ್ರತಿ ದಿನ ಸಾರಿಗೆ ಬಸ್‌ಗಳನ್ನು ಉಪಯೋಗಿಸುವ ಜನರಿಗೆ ಮತ್ತಷ್ಟು ಆರಾಮದಾಯಕ ಅನುಭವವನ್ನು ನೀಡಲಿವೆ ಎಂದು ಸಂಸ್ಥೆ ತಿಳಿಸಿದೆ.

ಈ ಹೊಸ ಬಸ್‌ಗಳನ್ನು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಬಸ್‌ಗಳನ್ನು ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ಪರಿಶೀಲನೆ ನಡೆಸಿದರು. ಈ ಬಸ್‌ಗಳನ್ನು ಮೆ. ಕೆ.ಎಂ.ಎಸ್. ಕೋಚ್ ಬಿಲ್ಡರ್ಸ್‌ ಕಡೆಯಿಂದ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಮುಂದೆ ರಾಜ್ಯದಲ್ಲಿ ಸಂಸ್ಥೆಗೆ ಸೇರುವ ಎಲ್ಲಾ ಹೊಸ ಬಸ್‌ಗಳು ಕೂಡಾ ಇದೇ ಮಾದರಿಯಲ್ಲಿಯೇ ಇರಲಿವೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ತಿಳಿಸಿದೆ.

ಈ ಹೊಸ ಬಸ್‌ಗಳ ವಿಶೇಷತೆ ಏನು ಇಲ್ಲಿದೆ ನೋಡಿ?

×ಈ ಬಸ್‌ ವಾಹನದ ಎತ್ತರ 3,420 ಮಿ.ಮಿ. (ಸದ್ಯದ ಬಸ್‌ಗಿಂತ ತುಸು ಎತ್ತರ ಹೆಚ್ಚಿದೆ)

×ಈ ಬಸ್‌ ನಲ್ಲಿ ಆಸನಗಳ ಸಂಖ್ಯೆ 52

×ಪ್ರಯಾಣಿಕರ ಆಸನ ವಿನ್ಯಾಸ ಬದಲಾವಣೆ.
ಮತ್ತಷ್ಟು ಮೃದು ಆಸನಕ್ಕೆ ಆದ್ಯತೆ.

×ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿದೆ. ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿದೆ.

×ಕಿಟಕಿ ಗಾಜು ದೊಡ್ಡದಾದ ಟಿಂಟೆಡ್ ಗಾಜುಗಳಾಗಿವೆ.

×ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ನೀಡಲಾಗಿದೆ.

×ಬಸ್‌ನ ಒಳ ಭಾಗದಲ್ಲಿ ಎಲ್ಇ‌ ಡಿ ಲೈಟ್‌ ಅಳವಡಿಸಲಾಗಿದೆ.

×ಬಸ್‌ ಸಂಚರಿಸುವ ಮಾರ್ಗವನ್ನು ತೋರಿಸಲು ಹಿಂದಿನ/ಮುಂದಿನ ಎಲ್ಇಡಿ ಮಾರ್ಗ ಫಲಕ ಅಳವಡಿಕೆ ಮಾಡಲಾಗಿದೆ.

×ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸರ್‌ ಬಾಗಿಲುಗಳಿವೆ. ​

×ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್ ಇದೆ.

×ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಈ ಬಸ್‌ ನಲ್ಲಿ ಸಾಗಿಸಬಹುದಾಗಿದೆ.

×ಈ ಬಸ್‌ ನಲ್ಲಿ ಆಸನಗಳ ಮಧ್ಯೆ ( ಲೆಗ್‌ಸ್ಪೇನ್‌) ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ.

ಇತರೆ ವಿಷಯಗಳು:

ರಾಜ್ಯದ ಈ 5 ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್, ಗಂಗಾ ಕಲ್ಯಾಣ ಯೋಜನೆಯಡಿ ಸರ್ಕಾರದಿಂದ ಉಚಿತ ಬೋರ್ವೆಲ್, ರೈತರೆ ಇಂದೇ ಈ ಕಚೇರಿಗೆ ಭೇಟಿ ನೀಡಿ.

Gold Rate: ಭಾರಿ ಇಳಿಕೆ ಕಂಡ ಚಿನ್ನದ ಬೆಲೆ.! ರಾತ್ರೋ ರಾತ್ರಿ ದಿಢೀರ್‌ ಇಳಿಕೆಯತ್ತ ಮುಖ ಮಾಡಿದ ಗೋಲ್ಡ್‌ ರೇಟ್! ಚಿನ್ನ ಖರೀದಿ ಮಾಡುವವರು ತಕ್ಷಣ ನೋಡಿ

ಆಂಡ್ರಾಯ್ಡ್ ಫೋನ್ ಬಳಕೆದಾರರೇ ಇತ್ತ ಕಡೆ ಗಮನ ಕೊಡಿ.!‌ ಈ ಮೆಸೆಜ್‌ ಅಪ್ಪಿ ತಪ್ಪಿ ನಿಮ್ಮ ಮೊಬೈಲ್ ಗೆ ಬಂದ್ರೆ ಏನ್‌ ಆಗುತ್ತೆ ಗೊತ್ತಾ?

Comments are closed, but trackbacks and pingbacks are open.