ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಉಚಿತ ಬಸ್‌ ಪ್ರಯಾಣ! ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಉಚಿತ ಬಸ್‌ ಪ್ರಯಾಣ! ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಮೈಸೂರು : ರಾಜ್ಯದಲ್ಲಿ ಆಷಾಢ ಮಾಸ ಆರಂಭವಾಗಿದೆ. ಈ ಮಾಸದಲ್ಲಿ ಶ್ರೀ ಚಾಮುಂಡೇಶ್ವರಿ ಮಾತೆಗೆ ವಿಶೇಷವಾಗಿ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ಆಷಾಢ ಮಾಸದ ಶುಕ್ರವಾರದಂದು ಚಾಮುಂಡೇಶ್ವರಿ (ಚಾಮುಂಡೇಶ್ವರಿ ದೇವಸ್ಥಾನ) ದೇವಿಯ ದರ್ಶನ ಪಡೆಯುವ ಸಂಪ್ರದಾಯ ಇಂದಿನಿಂದ ನಡೆದುಕೊಂಡು ಬಂದಿದೆ. ಕೆಲವು ಭಕ್ತರು ಬೆಟ್ಟದ ತಪ್ಪಲಿನಲ್ಲಿರುವ 1001 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುತ್ತಾರೆ.

ಉಚಿತ ಬಸ್ ವ್ಯವಸ್ಥೆ

ಬೆಟ್ಟಕ್ಕೆ ಬರುವ ಭಕ್ತರ ವಾಹನ ದಟ್ಟಣೆ ತಡೆಯುವ ಉದ್ದೇಶದಿಂದ ಆರಂಭಿಸಿದ್ದ ಉಚಿತ ಸಾರಿಗೆ ವ್ಯವಸ್ಥೆ ಹಿಂದಿನ ವರ್ಷಗಳಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಈ ಬಾರಿಯೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ರಾಜ್ಯ ಕೆಎಸ್ ಆರ್ ಟಿಸಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಮೈಸೂರು ನಗರದ ಲಲಿತ ಮಹಲ್ ಪ್ಯಾಲೇಸ್ ಹೆಲಿಪ್ಯಾಡ್ ನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

56 ಬಸ್‌ಗಳ ಓಡಾಟ

ವಿಶೇಷವಾಗಿ ಭಕ್ತರ ಅನುಕೂಲಕ್ಕಾಗಿ ನಗರದ ಪ್ರಮುಖ ಪ್ರದೇಶಗಳಿಂದ ಚಾಮುಂಡಿ ಬೆಟ್ಟಕ್ಕೆ ತೆರಳಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಪೂರ್ಣನಗರ ಬಸ್ ನಿಲ್ದಾಣದಿಂದ ದಿನವಿಡೀ 56 ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮುಂಜಾನೆ ಆರಂಭ

ಈ ಬಸ್‌ಗಳು ಬೆಳಗಿನ ಜಾವ 3.30ರಿಂದ ರಾತ್ರಿ 11ರವರೆಗೆ ಸಂಚರಿಸಲಿವೆ. ಹೆಚ್ಚಿನ ಬಸ್‌ಗಳ ವ್ಯವಸ್ಥೆ ಪ್ರತಿ ಆಷಾಢ ಶುಕ್ರವಾರ ಹಾಗೂ ತಾಯಿ ಚಾಮುಂಡೇಶ್ವರಿ ವರ್ಧಂತಿಯಂದು ಬೆಟ್ಟಕ್ಕೆ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ.

ಮಹಿಳಾ ಭಕ್ತರ ಸಂಖ್ಯೆ ದ್ವಿಗುಣ!

ರಾಜ್ಯದಲ್ಲಿ “ಶಕ್ತಿ” ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದರಿಂದ ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆಯಿದೆ. ಅಗತ್ಯಬಿದ್ದರೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ.

ಇತರೆ ವಿಷಯಗಳು :

ಹೊಲಿಗೆ ಯಂತ್ರ ಉಚಿತ ಯೋಜನೆ 2023 ,ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ವಾಟ್ಸಾಪ್ ಇಂದ ಬಂತು ಬೆಂಕಿ ಫೀಚರ್ಸ್! ವಾಟ್ಸಾಪ್ ಶೀಘ್ರದಲ್ಲೇ ವೀಡಿಯೊ ಕರೆಗಳಿಗಾಗಿ ಸ್ಕ್ರೀನ್ ಶೇರಿಂಗ್ ಫೀಚರ್ಸ್ ಪರಿಚಯಿಸಲಿದೆ.

ಕುಸುಮ್ ಯೋಜನೆ ನೋಂದಣಿ 2023, ಈ ಸೋಲಾರ್ ಪಂಪಿನ ಸಂಪೂರ್ಣ ಮಾಹಿತಿಗಳು ಇಲ್ಲಿದೆ ನೋಡಿ

PM ಉಚಿತ ಸೋಲರ್ ಪೈನಲ್ ಯೋಜನೆ, ಹೇಗೆ ಅರ್ಜಿ ಸಲ್ಲಿಸುವುದು ,ಏನೆಲ್ಲಾ ದಾಖಲೆ ಬೇಕೆಂಬ ಮಾಹಿತಿ ಇಲ್ಲಿದೆ,ಅರ್ಜಿ ಸಲ್ಲಿಸುವ ಆನ್‌ಲೈನ್ ಲಿಂಕ್ ಇಲ್ಲಿದೆ

Comments are closed, but trackbacks and pingbacks are open.