ಕೃಷಿ ಮೇಳ-2022 | Krishi Mela 2022 Bengaluru in Kannada
ಕೃಷಿ ಮೇಳ-2022, Krishi Mela 2022 Bengaluru in Kannada krishi mela 2022 in kannada gkvk krishi mela bangalore in kannada 2022
Krishi Mela 2022 Bengaluru in Kannada
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ನವೆಂಬರ್ ತಿಂಗಳ ಮೊದಲ ವಾರ ‘ಕೃಷಿ ಮೇಳ-2022’ ಹಮ್ಮಿಕೊಳ್ಳಲಾಗಿದೆ. ಈ ಕೃಷಿ ಮೇಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕೃಷಿ ಮೇಳ-2022
ಕೃಷಿ ಮೇಳದ ದಿನಾಂಕ ಮತ್ತು ಸ್ಥಳ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನವೆಂಬರ್ 3 ರಿಂದ 6ರವರೆಗೆ ಒಟ್ಟು ನಾಲ್ಕು ದಿನ ‘ಕೃಷಿ ಮೇಳ-2022’ ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಯಲಹಂಕದ ಗಾಂಧಿ ವಿಜ್ಞಾನ ಕೃಷಿ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ಆಯೋಜಿಸಲಾಗಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಬೃಹತ್ ಮತ್ತು ಸಣ್ಣ ಗಾತ್ರ ಕೃಷಿ ಯಂತ್ರೋಪಕರಣ ತಯಾರಕರು, ಸರ್ಕಾರಿ, ಅರೇ ಸರ್ಕಾರಿ ಸಂಸ್ಥೆಗಳು, ಅಲ್ಲದೇ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ.
ಇತ್ತೀಚಿನ ತಾಂತ್ರಿಕ ಪ್ರಗತಿಗಳು, ಹೊಸ ಬೆಳೆಗಳು ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ಬಗ್ಗೆ ರೈತರಿಗೆ ಒಳನೋಟವನ್ನು ಒದಗಿಸಲು ವಾರ್ಷಿಕ ಮೇಳವನ್ನು ಆಯೋಜಿಸಲಾಗಿದೆ. ಕೃಷಿ ಮೇಳದಲ್ಲಿ ಈ ವರ್ಷ 12ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು, ಕೃಷಿ ಆಸಕ್ತರು ಭಾಗವಹಿಸಲಿದ್ದಾರೆ.
ಕೃಷಿ ಮೇಳದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನ ಬಳಸಿಕೊಳ್ಳುವುದು ಹೇಗೆ, ಆ ಕುರಿತು ಮಾಹಿತಿ ಒದಗಿಸಲಿದೆ. ಆಹಾರ ಧಾನ್ಯ, ತರಕಾರಿ ಸೇರಿದಂತೆ ನೂತನ ಕೃಷಿ ಉತ್ಪನ್ನ, ತಳಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಸಾವಯವ ಕೃಷಿ, ಬೆಳೆ ಪದ್ಧತಿ, ನೂತನ ಬೆಳೆ ಪದ್ಧತಿ, ಮಾರುಕಟ್ಟೆ ಸೇರಿದಂತೆ ಪ್ರಾತ್ಯಕ್ಷಿಕೆಗಳು ಜರುಗಲಿವೆ. ಅಲ್ಲದೇ ಮೇಳದಲ್ಲಿ ತಜ್ಞರು, ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳು ಪಾಲ್ಗೊಂಡು ರೈತರಿಗೆ ಕೃಷಿ ಬೆಳೆಗಳು, ಆದಾಯ, ಕೃಷಿಯಲ್ಲಿನ ಸಮಸ್ಯೆ, ಸವಾಲುಗಳ ಬಗ್ಗೆ ಸಲಹೆ ಮತ್ತು ಸೂಕ್ತ ಮಾಹಿತಿ ನೀಡಲಿದ್ದಾರೆ.
ಒಂಬತ್ತು ಹೊಸ ತಳಿಗಳ ಬೆಳೆಗಳ ಜೊತೆಗೆ ಒಟ್ಟು 38 ಕೃಷಿ ತಂತ್ರಜ್ಞಾನಗಳನ್ನು ಈ ವರ್ಷ ಬಿಡುಗಡೆ ಮಾಡಲಾಗುವುದು. ಹೊಸ ಬೆಳೆಗಳಲ್ಲಿ 120 ರಿಂದ 125 ದಿನಗಳಲ್ಲಿ ಕೊಯ್ಲು ಮಾಡಬಹುದಾದ ಭತ್ತದ ತಳಿಗಳು, ಹೈಬ್ರಿಡ್ ಜೋಳ, ಅಲ್ಪಾವಧಿಯ ಹೊಲ ಹುರುಳಿ ಮತ್ತು ಇತರವು ಸೇರಿವೆ.
ಏಕಬೆಳೆಯನ್ನು ತಪ್ಪಿಸಲು ಸಮಗ್ರ ಬೆಳೆ ಮಾದರಿಗಳ ಪ್ರಯೋಜನಗಳ ಬಗ್ಗೆ ತಜ್ಞರ ಅಧಿವೇಶನಗಳೂ ಸಹ ಇರುತ್ತವೆ. ಕೃಷಿ ಸಾಧಕರಿಗೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಮೂರು ವಿಭಾಗಗಳ ಅಡಿಯಲ್ಲಿ ನೀಡಲಾಗುತ್ತದೆ. ಇದರಲ್ಲಿರೈತ ಮಹಿಳೆಯರನ್ನೂ ಸನ್ಮಾನಿಸುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸಲಾಗುವುದು,’’
ಮೇಳ ವೀಕ್ಷಿಸಲು ಬರುವವರಿಗೆ ಪ್ರತಿದಿನ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಮಾಡಲಾಗುವುದು. ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ನಾನಾ ಜಿಲ್ಲೆಗಳ ರೈತರನ್ನು ಬೇರೆ ಬೇರೆ ದಿನಗಳಂದು ಮೇಳಕ್ಕೆ ಆಹ್ವಾನಿಸಲಾಗುವುದು. ಭೌತಿಕವಾಗಿ ಮೇಳಕ್ಕೆ ಬರಲಾಗದವರು ಆನ್ಲೈನ್ನಲ್ಲೇ ವೀಕ್ಷಿಸಬಹುದು.
ಇತರೆ ವಿಷಯಗಳು :
ರಾಜಸ್ಥಾನದ ನಾಥದ್ವಾರದ ಶಿವನ ಪ್ರತಿಮೆ ಲೋಕಾರ್ಪಣೆ
ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಕೆಎಲ್ಇ ಸಂಶೋಧಕರು
Comments are closed, but trackbacks and pingbacks are open.