ನೀವು ನಿಮ್ಮ ಸ್ವಂತ ಬ್ಯುಸಿನೆಸ್‌ ಪ್ರಾರಂಭಿಸಬೇಕಾ? ಕರ್ನಾಟಕ ಸರ್ಕಾರದಿಂದ ನೇರಸಾಲ ಪಡೆಯುವ ಯೋಜನೆ ಇಲ್ಲಿದೆ, ತಡ ಮಾಡದೇ ಈಗಲೇ ಅರ್ಜಿ ಸಲ್ಲಿಸಿ

ನೀವು ನಿಮ್ಮ ಸ್ವಂತ ಬ್ಯುಸಿನೆಸ್‌ ಪ್ರಾರಂಭಿಸಬೇಕಾ?ಕರ್ನಾಟಕ ಸರ್ಕಾರದಿಂದ ನೇರಸಾಲ ಪಡೆಯುವ ಯೋಜನೆ ಇಲ್ಲಿದೆ, ತಡ ಮಾಡದೇ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ನಿವು ಬ್ಯುಸಿನೆಸ್ ಅಥವಾ ಉದ್ಯಮ ಮಾಡುವಂತ ಆಸಕ್ತ ಅಲ್ಪಸಂಖ್ಯಾತರಿಗೆ (Minorities) ನೇರ ಸಾಲ (Direct Loan) ಸೌಲಭ್ಯವನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ.

ಈ ಯೋಜನೆಯಡಿಯಲ್ಲಿ ನಿಮ್ಮ ಆಸ್ತಿ ಅಂದರೆ ಕಟ್ಟಡ ಅಥವಾ ಭೂಮಿಯನ್ನು ಅಡಮಾನವಿಟ್ಟು ತಮ್ಮ ಬ್ಯುಸೆನೆಸ್ ಪ್ರಾರಂಭಿಸಲು ಅಥವಾ ವಿಸ್ತರಿಸಲು ಅರ್ಹ ಉದ್ಯಮಿಗಳಿಗೆ ಮಾತ್ರ ಕರ್ನಾಟಕ ಸರ್ಕಾರ ಸಾಲವನ್ನು ಒದಗಿಸಲಾಗುತ್ತದೆ.

ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀವು ನೇರ ಸಾಲ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು ಮತ್ತೆ ನಿಮ್ಮ ಯಾವೆಲ್ಲಾ ದಾಖಲೆಗಳು ಇರಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ

  • ನೇರಸಾಲ ಪಡೆಯಲು ಇರಬೇಕಾದ ಅರ್ಹತೆಯ ಮಾನದಂಡ ಇಲ್ಲಿದೆ
  • ಅರ್ಜಿದಾರ ನೀವು ಕರ್ನಾಟಕದ ನಿವಾಸಿಯಾಗಿರಬೇಕು
  • ಅರ್ಜಿದಾರ ಅಲ್ಪಸಂಖ್ಯಾತ (SC,ST) ಸಮುದಾಯಕ್ಕೆ ಸೇರಿರಬೇಕು
  • ಅರ್ಜಿದಾರರ ನಿಮ್ಮ ವಯಸ್ಸು 18 ರಿಂದ 55 ವರ್ಷದವರಾಗಿರಬೇಕು
  • ಅರ್ಜಿದಾರ ಕೆಎಂಡಿಸಿ ಡೀಫಾಲ್ಟರ್ ಆಗಿರಬಾರದು
    ನಿಗಮದಿಂದ ನಿಮ್ಮ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಮಾತ್ರ ಸಾಲ ನೀಡಲಾಗುತ್ತೆ.
  • ನಿಮ್ಮ ಆಸ್ತಿಯ ಮೌಲ್ಯ ನೀವು ಪಡೆಯುವ ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು
  • ವ್ಯಾಪಾರ ಅಥವಾ ಉದ್ಯಮ ಸಾಲವನ್ನು ನಿಮ್ಮ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುತ್ತೆ
  • ಅರ್ಜಿದಾರರ ನಿಮ್ಮ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ನಂತರ ಶೇ.4ರ ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿವರೆಗೆ ಸಾಲ ಸರ್ಕಾರ ನೀಡಲಾಗುತ್ತೆ.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೇರಸಾಲ ಪಡೆಯಲು ಬೇಕಿರುವ ಪ್ರಮುಖ ದಾಖಲೆಗಳು

1.ನಿವಾಸದ ಪುರಾವೆಗಾಗಿ ಆಧಾರ್ ನಕಲು

2.ಸಕ್ಷಮ ಪ್ರಾಧಿಕಾರದಿಂದ ನೀಡುವ ಜಾತಿ ಪ್ರಮಾಣ ಪತ್ರ ಬೇಕು

3.ಸಕ್ಷಮ ಪ್ರಾಧಿಕಾರದಿಂದ ನೀಡುವ ಆದಾಯ ಪ್ರಮಾಣ ಪತ್ರ ಬೇಕು

4.ಅರ್ಜಿದಾರರ ನಿಮ್ಮ ಗುತ್ತಿಗೆ ಪತ್ರ(Lease deed)/ವಿಭಜನಾ ಪತ್ರ (Partition deed)/ ಬಿಡುಗಡೆ ಪತ್ರ(Release deed)ಬೇಕು ಅಥವಾ/ಬಾಡಿಗೆ ಪತ್ರ/ಆಸ್ತಿ ಮಾರಾಟ ಪತ್ರ (Sale deed of property) ನೀಡಬೇಕು

5.ಸಿಎಂ (ಚಾರ್ಟರ್ಡ್ ಅಕೌಂಟೆಂಟ್‌)ನಿಂದ ಯೋಜನಾ ವರದಿ ಅಥವಾ ಚಟುವಟಿಕೆಗಳ ವಿವರ

6.ಯೋಜನೆಗೆ ಸಂಬಂಧಿಸಿ ಉಲ್ಲೇಖಗಳು (Quotations)

7.ಅಡಮಾನ ಇಡಲು ಉದ್ದೇಶಿಸಿರುವ ಆಸ್ತಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪರವಾನಗಿ

8.ನಿಮ್ಮ ಕಟ್ಟಡದ ಖಾತಾ ಸಾರ ಮತ್ತು ಖಾತಾ ಪ್ರಮಾಣಪತ್ರ ಅಥವಾ ಭೂಮಿಯ ರೂಪಾಂತರ ಪ್ರತಿ (land Mutation copy) ಬೇಕು

9.ಕಂದಾಯ ಭೂಮಿ ಮತ್ತು ಫಹಣ-ಆರ್‌ಟಿಸಿಗೆ ಸಂಬಂಧಿಸಿದಂತೆ ಫೋಡಿ/ವಿಭಜನಾ ಪತ್ರ ಬೇಕು

10.ಎನ್ಕಂಬರೆನ್ಸ್ ಸರ್ಟಿಫಿಕೇಟ್ (EC)/ ಫಾರ್ಮ್ ನಂ.15

11.ಸ್ಥಳೀಯ ಸಂಸ್ಥೆಗಳಿಂದ ಇಂದಿನವರೆಗೆ ತೆರಿಗೆ ಪಾವತಿಸಿದ ರಸೀದಿ ಬೇಕು

12.ಸಕ್ಷಮ ಪ್ರಾಧಿಕಾರದಿಂದ ಭೂಮಿಯ ಮಾರ್ಗದರ್ಶನ ಮೌಲ್ಯ

13.ನೀವು ಕೋಟ ಆಸ್ತಿ ಪತ್ರವನ್ನು ಒತ್ತೆ ಇಡಲು ನಿಮ್ಮ ಕುಟುಂಬದಯಲ್ಲ ಸದಸ್ಯರಿಂದ ಯಾವುದೇ ಆಕ್ಷೇಪಣೆ ಇರಬಾರದು

14.ಕಟ್ಟಡ ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನದ ವರದಿ – ಮೌಲ್ಯಮಾಪನದ ಪ್ರಮಾಣ ಪತ್ರ

15.ನಿಮ್ಮ ಸ್ವಯಂ ಘೋಷಣೆ.

ನೇರಸಾಲಕ್ಕೆ ಆಯ್ಕೆಯಾದ ನಂತರ ಬೇಕಾಗಿರುವ ದಾಖಲೆಗಳು

  • ಸಮಿತಿಯ ಅನುಮೋದನೆ ಆದೇಶ
  • ಅರ್ಜಿದಾರರಿಂದ ಅಫಿಡವಿಡ್
  • ಫಲಾನುಭವಿ ಮತ್ತು ಖಾತರಿದಾರರಿಂದ ಜಂಟಿ ಅಫಿಡವಿಟ್
  • ಡಿಮ್ಯಾಂಡ್ ಪ್ರಾಮಿಸರಿ ನೋಟ್ (ಡಿಪಿಎನ್)
  • ಹೈಪೋಥೆಕೇಶನ್ ಮತ್ತು ಅಡಮಾನ ಪತ್ರ
  • ಮರುಪಾವತಿಯ ಪತ್ರ
  • ಖಾತರಿ ಪತ್ರ
  • ಸಾಲ ಒಪ್ಪಂದ
  • ಪರಿಗಣನೆ ರಶೀದಿ
  • ಸಾಲಗಾರರಿಂದ ಸ್ವೀಕೃತಿ ಸಾಲ
  • ಕ್ಯಾರಂಟರ್‌ನಿಂದ ಸ್ವೀಕೃತಿ ಸಾಲ
  • ಟೈಟಲ್ ಡೀಡ್‌ಗಳು/ ಸಮಾನ ಅಡಮಾನ ಪತ್ರಗಳ ಠೇವಣಿಯ ಮೆಮೊರಾಂಡಮ್
  • ಅಟಾರ್ನಿಯ ರಕ್ತ ಸಂಬಂಧಗಳ ಶಕ್ತಿ (ಆಸ್ತಿ ಅರ್ಜಿದಾರರ ಹೆಸರಿನಲ್ಲಿಲ್ಲದಿದ್ದರೆ)

ಇತರೆ ವಿಷಯಗಳು :

ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್,ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆ ಬೇಕು? ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್, 35 ಲಕ್ಷ ಮಂದಿ ನೋಂದಣಿ, ನೀವು ಇನ್ನು ಅರ್ಜಿ ಸಲ್ಲಿಸಿಲ್ವಾ? ಇಲ್ಲಿದೆ ನೋಡಿ ಹಂತ ಹಂತವಾಗಿ ಹೇಗೆ ಅರ್ಜಿ ಸಲ್ಲಿಸುವುದೆಂಬ ಮಾಹಿತಿ

ನಿಮ್ಮ ಮೊಬೈಲ್ ನಲ್ಲಿ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರಗಳನ್ನು ಪಡೆಯುವುದು ಹೇಗೆ? ನಾಡಕಚೇರಿಯ ಅಧಿಕೃತ ವೆಬ್‌ಸೈಟ್‌ ಲಿಂಕ್ ಇಲ್ಲಿದೆ ನೋಡಿ.

ರೈಲಿನ ಮೇಲ್ಬಾಗದಲ್ಲಿ ದುಂಡಗಿನ ಆಕಾರದ ಮುಚ್ಚಳಗಳು ಏಕೆ? ನಿಮಗೆ ಗೊತ್ತೇ ಇಲ್ಲದ ವಿಷಯ ಇಲ್ಲಿದೆ ನೋಡಿ.

Comments are closed, but trackbacks and pingbacks are open.