ಅಯ್ಯೊ ಗುರು ಕೇವಲ ಓಡಾಡೋದಲ್ಲ, ಚಂದ್ರನ ನೆಲದಲ್ಲಿ ಭಾರತದ ಶಾಶ್ವತ ಮುದ್ರೆ ಒತ್ತಿ ಬರಲಿದ್ದಾನೆ ಪ್ರಜ್ಞಾನ್, ತಪ್ಪದೇ ಈ ರೋಚಕ ಮಾಹಿತಿ ತಿಳಿಯಿರಿ.

ಪ್ರಜ್ಞಾನ್ ನೌಕೆ ಇದ್ಯಲ್ಲ..ಈಗ ಲ್ಯಾಂಡ್ ಆಗಿರೋ ವಿಕ್ರಮನಿಂದ ಹೊರಬಂದು ಚಂದ್ರ ನೆಲದಲ್ಲಿ ಓಡಾಡುತ್ತಲ. ಇದರದ್ದೊಂದು ವಿಶೇಷ ಹೇಳ್ಲೇಬೇಕು ನಿಮಗೆಲ್ಲಾ ಈ ಖುಷಿಯ ಸಂದರ್ಭದಲ್ಲಿ.

ಸಾಮಾನ್ಯವಾಗಿ…ರೋವರ್ ವೆಹಿಕಲ್ ಗಳು ಬೇರೆ ಗ್ರಹಗಳಿಗೆ ಹೋದಾಗ ಓಡಾಡಿಕೊಂಡು ಬರುತ್ತವೆ. ಆದರೆ ನಮ್ಮ ಪ್ರಜ್ಞಾನ್ ಕೇವಲ ಓಡಾಡೋದಿಲ್ಲ.
ತಾನು ಓಡಾಡಿದ ಅಷ್ಟೂ ಜಾಗಕ್ಕೂ ಭಾರತದ ಬಾವುಟ ನೆಟ್ಟು ಬೇಲಿ ಹಾಕಿ ಬರಲಿದೆ. ಇನ್ಮುಂದೆ ಆ ಜಾಗದೊಳಗೆ ಯಾರೇ ಕಾಲಿಟ್ರೂ ಅವ್ರು ಭಾರತದ ನೆಲದಲ್ಲಿ ಕಾಲಿಟ್ಟಂಗೆ.

ಹೇಗೆ ಅಂದ್ರೆ…ಪ್ರಜ್ಞಾನ್ ನೌಕೆಯ ಹಿಂದಿನ ಎರಡೂ ಚಕ್ರಗಳಲ್ಲೂ, ಇಸ್ರೋ ಲೋಗೋ ಹಾಗೂ ಭಾರತದ ರಾಷ್ಟ್ರೀಯ ಲಾಂಛನವನ್ನು ಉಬ್ಬು ಮುದ್ರೆಯನ್ನು ರಚಿಸಿ ಕಳಿಸಲಾಗಿದೆ.( ರಾಷ್ಟ್ರೀಯ ಲಾಂಛನ ಗೊತ್ತಲ್ವಾ? )

ಮುಂದಿನ ಹದಿನಾಲ್ಕು ದಿನ, ಚಂದ್ರನ ನೆಲದಲ್ಲಿ ಎಲ್ಲೆಲ್ಲಾ ನಮ್ಮ ಪ್ರಜ್ಞಾನ್ ಸಾಗುತ್ತಾ ಹೋಗುತ್ತೋ, ಅಲ್ಲೆಲ್ಲಾ ಭಾರತದ ಲಾಂಛನವನ್ನು ಮುದ್ರೆ ಒತ್ತುತ್ತಾ ಹೋಗುತ್ತಿರುತ್ತೆ. ಸಿಂಹವೊಂದು ತನ್ನ ಪ್ರದೇಶವನ್ನು ಮಾರ್ಕ್ ಮಾಡುತ್ತಾ ಸಾಗುವಂತೆ, ಪ್ರಜ್ಞಾನ್ ಸಾಗಿದ ಅಷ್ಟೂ ಜಾಗದಲ್ಲೂ ನಮ್ಮ ರಾಷ್ಟ್ರೀಯ ಲಾಂಛನದಲ್ಲಿರೋ ನಾಲ್ಕು ಸಿಂಹಗಳದ್ದೇ ಘರ್ಜನೆ.

ಚಂದ್ರ ಇರೋವರೆಗೂ ಇಸ್ರೋ ಹೆಸರು ಹಾಗೂ ನಮ್ಮ ರಾಷ್ಟ್ರೀಯ ಲಾಂಛನದ ಮುದ್ರೆಗಳು ಚಂದ್ರನ ನೆಲದಲ್ಲಿರುತ್ತೆ. ಚಂದ್ರನ ನೆಲದಲ್ಲಿ ಗುರುತುಗಳು ಅಳಿಸೋದಿಲ್ಲ. ಹೋದಲ್ಲಿ ನಮ್ಮ ಹೆಜ್ಜೆ ಗುರುತು ಬಿಟ್ಟು ಬಂದ್ರೆ ಹೀಗೆ ಬಿಟ್ಟುಬರಬೇಕು‌.

Nagesha hegde

ಇತರೆ ವಿಷಯಗಳು:

ಚಂದಮಾಮನ ಲೋಕಕ್ಕೆ ಇಂದು ಕಾಲಿಡಲಿದ್ದಾನೆ ವಿಕ್ರಮ..! ಚಂದ್ರನ ಅಂಗಳದಲ್ಲಿ ವಿಕ್ರಮನ ಕೆಲಸವೇನು?

ಪ್ಯಾನ್‌ ಕಾರ್ಡ್‌ದಾರರೇ ಎಚ್ಚರ.! ಅಪ್ಪಿ ತಪ್ಪಿನೂ ನಿಮ್ಮ ಕಾರ್ಡ್‌ ಯಾರ ಕೈಗೂ ಕೊಡಬೇಡಿ; ಈ ಸಮಸ್ಯೆ ನಿಮ್ಮನ್ನು ಸುತ್ತಿಕೊಳ್ಳುತ್ತೆ ಹುಷಾರ್.!

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಶೀಘ್ರವೇ LPG ಸಿಲಿಂಡರ್ ಗಳ ಬೆಲೆ ಇಳಿಕೆ!, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Comments are closed, but trackbacks and pingbacks are open.