ಲಕ್ಷ್ಮಿಯರ ಕನಸು ನಾಳೆ ನನಸು.! ಖಾತೆಗೆ 2000 ಬರಲು ಕಾಲ ಕೂಡಿ ಬಂದೆ ಬಿಡ್ತು; ಹಣ ಬಂದಾಗ ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಗ್ಯಾರಂಟಿ ನಂಬರ್ 4ನ್ನು ಜಾರಿ ಮಾಡಲು ಇನ್ನೇನು ಕ್ಷಣಗಣನೆ ಆರಂಭವಾಗಲಿದೆ, ರಾಜ್ಯದಲ್ಲಿ ಎಷ್ಟು ಜನ ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ, ಈ ಭಾರೀ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ಸರ್ಕಾರದ ಎಲ್ಲಾ ಗ್ಯಾರಂಟಿಗಳಲ್ಲಿ ಒಂದಾದ ಬಹು ನಿರೀಕ್ಷೆಯ ಮತ್ತು ಹೆಣ್ಣು ಮಕ್ಕಳ ಅತ್ಯಂತ ಪ್ರಿಯವಾದ ಗ್ಯಾರಂಟಿ ಎಂದರೆ ಅದುವೇ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಗೆ ಇದೀಗ ಕೌಂಟ್ ಡೌನ್ ಆರಂಭವಾಗಿದೆ, ನಾಳೆ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾದ ಚಾಲನೆ ಸಿಗಲಿದೆ ಸಿಎಂ ಸಿದ್ದರಾಮಯ್ಯರವರ ತವರು ಜಿಲ್ಲೆ ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆಗಸ್ಟ್ ತಿಂಗಳ ₹2000 ರೂ ಹಣ ಪಡೆಯಲು ಮಹಿಳೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈವತ್ತು ನೊಂದಾಣಿ ಮಾಡಿಕೊಳ್ಳುವವರಿಗೆ ಆಗಸ್ಟ್ ತಿಂಗಳ ಹಣ ಬರುವುದಿಲ್ಲಾ ಎನ್ನುವುದನ್ನು ಸರ್ಕಾರ ಈಗಾಗಲೇ ತಿಳಿಸಿದೆ, ಇಂತವರು ಸೆಪ್ಟೆಂಬರ್ ತಿಂಗಳ ಫಲಾನುಭವಿ ಎಂದು ಸರ್ಕಾರ ತೀರ್ಮಾನವನ್ನು ಮಾಡಿದೆ. ಹಾಗಾದ್ರೆ ಆಗಸ್ಟ್ ತಿಂಗಳಿನಲ್ಲಿ ಹಣ ಪಡೆಯಲು ಒಟ್ಟು ಎಷ್ಟು ನೊಂದಣಿ ಸಕ್ರಿಯವಾಗಿದೆ ಎಂದು ನೋಡುವುದದರೆ, ರಾಜ್ಯದಲ್ಲಿ ಒಟ್ಟು ಫಲಾನುಭವಿಗಳು ಇರುವುದು 1.28 ಕೋಟಿ ಎಂದು ಸರ್ವೆ ಮೂಲಕ ತಿಳಿದು ಬಂದಿದೆ. ಇನ್ನು ಈ ಯೋಜನೆಗೆ ನೊಂದಣಿಯನ್ನು ಮಾಡಿಸಿಕೊಂಡವರ ಸಂಖ್ಯೆಯನ್ನು ನೋಡುವುದಾದರೆ, 1.11 ಕೋಟಿ ಜನರು ಬಹುತೇಕ ಜನರು ಈ ಯೋಜನೆಗೆ ನೊಂದಣಿಯನ್ನು ಮಾಡಿಕೊಂಡಿದ್ದಾರೆ.
ಇದು ಓದಿ: ಟೊಮೇಟೊ ನಂತರ ಬೆಳ್ಳುಳ್ಳಿ ರೇಟ್ ಡಬಲ್.! ಹಿಂದಿನ ವಾರ ಎಷ್ಟಿತ್ತು ಇಂದು ಎಷ್ಟಿದೆ ನೋಡಿ
ಈ ಯೋಜನೆಗೆ ಇನ್ನು ಅರ್ಜಿ ಸಲ್ಲಿಸದೆ ವಂಚಿತರಾದವರು ಯಾರು ಎಂದು ನೋಡುವುದಾದರೆ, 15 ರಿಂದ 17 ಲಕ್ಷ ಮಂದಿ ಜನರು ಇನ್ನು ಕೂಡ ತಮ್ಮ ಅರ್ಜಿಯನ್ನು ಸಲ್ಲಿಕೆಯನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಹಣ ಸಿಗದೆ ಇರಲು ಮುಖ್ಯ ಕಾರಣ ಎಂದರೆ ಅದು ಕೆವೈಸಿ ಸಂಬಂಧಿತ ತೊಂದರೆಗಳು, ಆಧಾರ್ ಗೆ ನಿಮ್ಮ ನಂಬರ್ ಲಿಂಕ್ ಮಾಡದೆ ಇರುವುದು, ಆಧಾರ್ ಅಪ್ಡೇಟ್ ಮಾಡದೇ ಇರುವುದು, ಮರಣ ಹೊಂದಿದವರ ಹೆಸರನ್ನು ಪಡಿತರ ಚೀಟಿ ಇಂದ ಹೊರಹಾಕದೆ ಇರುವುದು ಹೀಗೆ ಅನೇಕ ಕಾರಣಗಳು ಎಂದು ತಿಳಿದು ಬಂದಿದೆ. ಈ ಎಲ್ಲಾ ತೊಂದರೆಗಳನ್ನು ನೀವು ಸರಿ ಮಾಡಿಸಿಕೊಳ್ಳುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದುದಾಗಿದೆ.
Comments are closed, but trackbacks and pingbacks are open.