ನುಡಿದಂತೆ ನಡೆದ ಸಿದ್ದು ಸರ್ಕಾರ.! ಗೃಹಲಕ್ಷ್ಮಿಗೆ ಇಂದು ಸಂಜೆ ಚಾಲನೆ, ಯಾವಾಗಿಂದ ಹಣ ಬರುವುದು ಗೊತ್ತಾ?

ಎಲ್ಲರಿಗೂ ನಮಸ್ಕಾರ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಸಿದ್ದು ಸರ್ಕಾರದ 4 ನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ 4 ನೇ ಗ್ಯಾರಂಟಿಯನ್ನು ಇದೀಗ ಜಾರಿ ಮಾಡಲಾಗುವುದು. ಈ ಯೋಜನೆಗೆ ಅರ್ಜಿಸಲ್ಲಿಸುವು ಹೇಗೆ? ಅರ್ಜಿಸಲ್ಲಿಸಲು ಹೊಂದಿರ ಬೇಕಾದ ದಾಖಲೆಗಳು ಯಾವುವು? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ರಾಜ್ಯದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯೇ ಗೃಹಲಕ್ಷ್ಮಿ ಯೋಜನೆಯಾಗಿದೆ. ಗ್ಯಾರಂಟಿಗಳಲ್ಲಿ ನಾಲ್ಕನೇ ಗ್ಯಾರಂಟಿಗೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ಗೃಹಲಕ್ಷ್ಮಿ ಯೋಜನೆ ಇಂದು ಸಂಜೆ 5 ಗಂಟೆಗೆ ಜಾರಿಯಾಗಲಿದೆ. ಇಂದು ಸಿದ್ದು ಸರ್ಕಾರದ ಮತ್ತೊಂದು ಗ್ಯಾರಂಟಿ ಜಾರಿಯಾಗಲಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಗೃಹಿಣಿಗೂ ಸಿಗಲಿದೆ 2000 ಪ್ರತಿ ತಿಂಗಳು. ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಮೇಲೆ ಕಾರ್ಯಕ್ರಮವನ್ನು ಹಂಬಿಕೊಳ್ಳಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇದು ಓದಿ: ಇಂದಿನಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ, ನೀವು ಅರ್ಜಿ ಸಲ್ಲಿಸಬೇಕಾ? ಹಾಗಾದ್ರೆ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.

ಸಂಜೆ ಗೃಹಲಕ್ಷ್ಮಿ ಯೋಜನೆಗೆ ಚಲಾನೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ಈಗಾಗಲೇ ವರದಿ ಮಾಡಿದ್ದಾರೆ ಅದರಂತೆ ಇದೀಗ ಜಾರಿ ಮಾಡುವ ಸಕಲ ಸಿದ್ದತೆಯನ್ನು ಇದೀಗ ಮಾಡಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಉದ್ಘಾಟನೆ ಆಗಲಿದೆ ಮತ್ತು ನಾಳೆ ಇದಕ್ಕೆ ಅರ್ಜಿ ಪ್ರಕ್ರಿಯೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಮ ಒನ್‌, ಬೆಂಗಳೂರ್‌ ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಮಾತ್ರ ಅರ್ಜಿಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ. ಪಡಿತರ ಚೀಟಿ ಹೊಂದಿರುವ ಗೃಹಿಣಿಗೆ ಮಾತ್ರ ಈ ಯೋಜನೆಯ ಲಾಭ ಸಿಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮೊದಲನೆಯದಾಗಿ ನಿಮ್ಮ ಆಧಾರ್ ಗೆ ಲಿಂಕ್‌ ಆಗಿರುವ ನಂಬರ್‌ ನಿಂದ 8147500500 ಗೆ SMS ಅನ್ನು ಕಳುಹಿಸ ಬೇಕಾಗುತ್ತದೆ. ಕಳುಹಿಸಿದ ಕೆಲ ನಿಮಿಷದಲ್ಲಿಯೆ ಮತ್ತೆ SMS ಬರುತ್ತದೆ, ನೀವು ಯಾಲ್ಲಿ ಅರ್ಜಿಸಲ್ಲಿಸಬೇಕು ಮತ್ತು ಯಾವಾಗ ಅರ್ಜಿಸಲ್ಲಿಸಲು ಬರಬೇಕು ಎನ್ನುವುದನ್ನು ತಿಳಿಸಲಾಗುತ್ತದೆ. ನೀವು ಕೂಡ ಅದಷ್ಟು ಬೇಗ ಅರ್ಜಿ ಸಲ್ಲಿಸಿ, ಇದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಳ್ಳಿ. ಆಧಾರ್‌ ಕಾರ್ಡ್‌, ಪತಿಯ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಪಾಸ್‌ ಪುಸ್ತಕ ಮುಖ್ಯವಾದ ದಾಖಲೆಗಳು ಅತ್ಯಗತ್ಯವಾಗಿದೆ.

ಇತರೆ ವಿಷಯಗಳು:

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬೇಸರದ ಸುದ್ದಿ! ಒಂದೇ ತಿಂಗಳಿಗೆ ಹೊಸ ಮಹತ್ವದ ಆದೇಶ ಹೊರಡಿಸಿದ ಸರ್ಕಾರ, ಮಹಿಳೆಯರೇ ತಪ್ಪದೆ ನೋಡಿ

ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆ ನಿಷೇಧ, ದೇವಾಲಯದಲ್ಲಿ ಮೊಬೈಲ್ ಬಳಕೆ ಕಂಡರೆ ದಂಡ ಎಷ್ಟು ಗೊತ್ತಾ?

Comments are closed, but trackbacks and pingbacks are open.