ಗೃಹಲಕ್ಷ್ಮಿಗೆ ಪಿಂಕ್‌ ಕಾರ್ಡ್ ಕಡ್ಡಾಯ.!‌ ಈ ಕಾರ್ಡ್‌ ಪಡೆದುಕೊಳ್ಳುವುದು ಹೇಗೆ ಗೊತ್ತಾ? ಇದಿಲ್ಲದೇ ಯಾವ ದುಡ್ಡೂ ಸಿಗಲ್ಲ..!

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಇತ್ತೀಚಿನ ಅಪ್ಡೇಟ್‌ ಪಿಂಕ್‌ ಕಾರ್ಡ್ ಬಗ್ಗೆ ವಿವರಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿಯನ್ನು ನೀಡಲಾಗುವ ಈ ಯೋಜನೆ ಇನ್ನೇನು ಕೆಲ ದಿನದಲ್ಲಿ ಜಾರಿಗೆ ಬರಲಿದೆ. ಹಾಗಾದ್ರೆ ಇದಕ್ಕಾಗಿ ಪಡೆದುಕೊಳ್ಳಬೇಕಾದ ಪಿಂಕ್‌ ಕಾರ್ಡ್‌ ಯಾವುದು? ಈ ಕಾರ್ಡ್‌ ಪಡೆದುಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಓದಿ.

gruhalakshmi pink card

ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಹೊರ ಬಂದಿದೆ. ಇದೇ ಆಗಸ್ಟ್‌ 27 ರಂದು ಗ್ಯಾರಂಟಿ ನಂ 4 ಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆಗಸ್ಟ್‌ ತಿಂಗಳಿನಿಂದ ಮನೆಯ ಯಜಮಾನಿಯ ಖಾತೆಗೆ 2,000 ರೂಪಾಯಿ ವರ್ಗಾವಣೆಯಾಗಲಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ. ಆಗಸ್ಟ್‌ 27 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯಜಮಾನಿಯರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುವುದು?

ಗೃಹಲಕ್ಷ್ಮಿಯರಿಗೆ ನೀಡುವ ಸ್ಮಾರ್ಟ್‌ ಕಾರ್ಡ್‌ ಹೇಗಿರಬೇಕು ಇದನ್ನು ಗೃಹಲಕ್ಷ್ಮಿಯರು ಹೇಗೆ ಉಪಯೋಗಿಸಬೇಕು? ಇದರ ಮಾದರಿ ಹೇಗಿದೆ ಎನ್ನುವುದನ್ನು ಸಭೆ ನಡೆದ ದಿನಾಂಕದಂತೆ ವಿವರವಾಗಿ ತಿಳಿಸಲಾಗಿದೆ. ಈ ಮಾದರಿಯನ್ನು ಡಿಕೆ ಶಿವಕುಮಾರ್‌ ಅವರು ಪಿಂಕ್‌ ಕಾರ್ಡ್‌ನ ಮಾದರಿಯನ್ನು ಬಿಡುಗಡೆ ಮಾಡಿದ್ದರು, ಈ ಕಾರ್ಡ್‌ ಪಿಂಕ್‌ ಬಣ್ಣವನ್ನು ಹೊಂದಿದೆ

ಇದು ಓದಿ: ನಿಟ್ಟುಸಿರು ಬಿಟ್ಟ ಟೊಮೆಟೋ ಪ್ರಿಯರು.! ರಾತ್ರೋರಾತ್ರಿ ಕುಸಿದು ಬಿದ್ದ ರೆಡ್‌ ಬ್ಯೂಟಿ ರೇಟ್‌; ಚೀಲದಲ್ಲಿ ತರುವಷ್ಟು ಅಗ್ಗವಾಯ್ತು ಟೊಮೆಟೋ

ಈ ಕಾರ್ಡ್‌ನಲ್ಲಿ ಫಲನುಭವಿಯ ಸಂಪೂರ್ಣ ವಿವರವನ್ನು ನೀಡಲಾಗಿರುತ್ತದೆ, ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ಭಾವಚಿತ್ರವನ್ನು ಸಹ ಈ ಕಾರ್ಡ್‌ನಲ್ಲಿ ನೋಡಬಹುದಾಗಿದೆ. 2,000 ರೂ ಎಂದು ಈ ಕಾರ್ಡ್‌ನಲ್ಲಿ ನಮೂದಿಸಲಾಗಿರುತ್ತದೆ, ಈ ಎಲ್ಲಾ ಲಕ್ಷಣಗಳನ್ನು ಈ ಪಿಂಕ್‌ ಸ್ಮಾರ್ಟ್‌ ಕಾರ್ಡ್‌ ಹೊಂದಿರುತ್ತದೆ.

ಪಿಂಕ್‌ ಕಾರ್ಡ್ ನೊಂದಿಗೆ ಅಪ್ಲೇ ಮಾಡಿ;

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ 1.5 ಲಕ್ಷ ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೂಡ ಅರ್ಜಿ ಸಲ್ಲಿಸಲು ಅವಕಾಶವನ್ನು ಸರ್ಕಾರ ನೀಡಿದೆ, ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಈಗಾಗಲೇ ತನ್ನ ನಿರ್ಧಾರವನ್ನು ತಿಳಿಸಿದೆ. ಕೇವಲ ನಿಮ್ಮ ಬಳಿ ಬಿಪಿಎಲ್ ಕಾರ್ಡ್‌ ಹಾಗೂ ಎಪಿಎಲ್‌ ಕಾರ್ಡ್‌ ಇದ್ದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಒಂದು ವೇಳೆ ನಿಮ್ಮ ಬಳಿ ರೇಷನ್‌ ಕಾರ್ಡ್‌ ಇಲ್ಲ ಎಂದರೆ ಅದನ್ನು ಮಾಡಿಸಿದ ನಂತರವಷ್ಟೇ ನಿಮಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ರವರು ತಿಳಿಸಿದ್ದಾರೆ.

ಇತರೆ ವಿಷಯಗಳು:

ಭಾಗ್ಯ ಲಕ್ಷ್ಮಿ ಯೋಜನೆ ಕರ್ನಾಟಕ 2023, ಈ ಯೋಜನೆಯಡಿಯಲ್ಲಿ 1 ಲಕ್ಷ ರೂ ಬಾಂಡ್ ಪಡೆಯುವುದು ಹೇಗೆ?, ಹೆಣ್ಣುಮಕ್ಕಳು ಹೆತ್ತವರೇ ತಪ್ಪದೆ ನೋಡಿ.

ಸ್ವಾತಂತ್ರ್ಯ ದಿನದ ಹರ್‌ ಘರ್‌ ತಿರಂಗ ಅಭಿಯಾನಕ್ಕೆ ಸಿದ್ದರಾಗಿ.! ನೋಂದಣಿಯೊಂದಿಗೆ ಪಡೆಯಿರಿ‌ ಉಚಿತ ಸರ್ಟಿಫಿಕೇಟ್;‌ ಈ ರೀತಿ ಮಾಡಿ

8 ನೇ ವೇತನ ಆಯೋಗ: ನೌಕರರಿಗೆ ಬಂಪರ್‌ ಸುದ್ದಿ.! ಸಂಬಳದಲ್ಲಿ ಭರ್ಜರಿ 44% ಹೆಚ್ಚಳ; ತಪ್ಪದೇ ಈ ಸುದ್ದಿ ನೋಡಿ

Comments are closed, but trackbacks and pingbacks are open.