ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಡೇಟ್ ಫಿಕ್ಸ್ ಇಲ್ಲಿದೆ ನೋಡಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಇಲ್ಲಿದೆ ಡಿಟೇಲ್ಸ್!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಡೇಟ್ ಫಿಕ್ಸ್ ಇಲ್ಲಿದೆ ನೋಡಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಇಲ್ಲಿದೆ ಡಿಟೇಲ್ಸ್!
ಗೃಹಲಕ್ಷ್ಮಿ ಯೋಜನೆಗೆ ಇಷ್ಟುದಿನ ರಾಜ್ಯದ ಮಹಿಳೆಯರು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಜೂನ್ 27ರಿಂದ ಆರಂಭವಾಗಲಿದ್ದು, ಅಂದುಕೊಂಡಂತೆ ಆದ್ರೆ ಸ್ವಾತಂತ್ರೋತ್ಸವ ದಿನಕ್ಕೆ ಲಕ್ಷ್ಮೀಯರ ಖಾತೆಗೆ ಎರಡು ಸಾವಿರ ಲಕ್ಷ್ಮೀಯೇ ಆಗಮನವಾಗಲಿದೆ. ಹಾಗಾದ್ರೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಹೇಗೆಲ್ಲಾ ಸರ್ಕಾರ ಸಿದ್ದವಾಗ್ತಿದೆ ಅನ್ನೋ ರಿಪೋರ್ಟ್ ಇಲ್ಲಿದೆ ನೋಡಿ.
ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್ ಕೊಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್ನಂತೆ ಓಡಾಡಿ ಅಂತ ನಾರಿಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದ ಸರ್ಕಾರ ಈಗ ಖರ್ಚಿಗೆ ರಾಜ್ಯದ ಎಲ್ಲಾ ಗೃಹಗಳ ಲಕ್ಷ್ಮೀಯರ ಖಾತೆಗೆ ಎರಡು ಸಾವಿರ ಹಣ ಹಾಕಲು ಮುಂದಾಗಿದೆ.ಜೂನ್ 27 ರಿಂದ ಗೃಹಲಕ್ಷ್ಮೀ ಯೋಜನೆ ನೋಂದಾಣಿ ಪ್ರಕ್ರಿಯೆ ಆರಂಭವಾಗಲಿದ್ದು ಎಂದು ಹೇಳಿದ್ದಾರೆ,ಇದಕ್ಕೆ ಅಂತ ರಾಜ್ಯ ಸರ್ಕಾರ ಸಿದ್ದತೆಗಳನ್ನ ಆರಂಭಿಸಿದೆ. ಆಗಸ್ಟ್ 16 ಅಥವಾ 17ರ ನಂತರ ಮನೆ ಯಜಮಾನಿ ಖಾತೆಗೆ ಎರಡು ಸಾವಿರ ಹಣ ತಲುಪಿಸಲು ಸರ್ಕಾರ ನಿರ್ಧಾರ ಮಾಡಿದೆ.
ಗೃಹಲಕ್ಷ್ಮೀ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿ ಗೊತ್ತಾ..?
- ಜೂನ್ 27 ರಿಂದ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ.
- ಜುಲೈ ಅಂತ್ಯದಲ್ಲಿ ಸರ್ಕಾರ ಫಲಾನುಭವಿಗಳನ್ನ ಆಯ್ಕೆ ಮಾಡಲಾಗುವುದು.
- ಆಯ್ಕೆಗೊಂಡ ಫಲಾನುವಿಗಳಿಗೆ ಆಗಸ್ಟ್ 16 ಅಥವಾ 17 ರಂದು ಯಜಮಾನಿ ಖಾತೆಗೆ ಎರಡು ಸಾವಿರ ಹಣ ಜಮೆ.
- ಫಲಾನುಭವಿಗಳು ಸೇವಾ ಸಿಂಧು ಅಥವಾ ಆಫ್ ಭೌತಿಕವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ
- ಆದಾಯ ತೆರಿಗೆ ಪಾವತಿಸಿರುವ ಕುಟುಂಬಕ್ಕೆ ಇಲ್ಲ ಗೃಹಲಕ್ಷ್ಮೀ ಭಾಗ್ಯ ಯೋಜನೆ ಎಂದಿದ್ದಾರೆ
- ಈ ಯೋಜನೆಗೆ ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ 2 ಸಾವಿರ ರೂಪಾಯಿ
Comments are closed, but trackbacks and pingbacks are open.