ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ನಿಂದ ರಾಜ್ಯದ ಎಲ್ಲರೂ ಮಹಿಳೆಯರು ಗಾಬರಿಗೊಂಡಿದ್ದಾರೆ.
ಇನ್ನುಮುಂದೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಅಂತ ತಿಳಿಸಿದೆ ಯಾಕೆಂದರೆ ಕುಟುಂಬದ ಎಲ್ಲ ಸದಸ್ಯರು ಒಂದೇ ಕಡೆ ವಾಸಿಸುತ್ತಿದ್ದರು ಅವರ ಹತ್ತಿರ 4-5 ರೇಷನ್ ಕಾರ್ಡ್ ಹೊಂದಿರುತ್ತಾರೆ.
ಈಗಾಗಲೇ ರಾಜ್ಯ ಸರ್ಕಾರ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ರೇಷನ್ ಕಾರ್ಡ್ ಬಂದ್ ಮಾಡಿಸಿದೆ.
ಹಾಗಾಗಿ ರದ್ದು ಪಡೆಸಿದ ಸದಸ್ಯರ ಹೆಸರನ್ನು ಕುಟುಂಬದ ಮುಖ್ಯ ಅಥವಾ ಪೋಷಕರ ರೇಷನ್ ಕಾರ್ಡಿನಲ್ಲಿ ಸೇರಿಸಬಹುದಾಗಿದೆ.ಇಂತಹ ಸದಸ್ಯರು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬಯಸಿದರೆ ಅದು ಕಾನೂನಾತ್ಮಕವಾಗಿ ತಪ್ಪಾಗಿದ್ದು ಆತವರ ರೇಷನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು.
ಹೊಸದಾಗಿ ವಿವಾಹವಾದಂತಹ ದಂಪತಿಗಳು ಅಥವಾ ವಿವಾಹಿತರು ಬೇರೆ ಮನೆಯಲ್ಲಿ ವಾಸವನ್ನು ಮಾಡುತ್ತಿದ್ದರೆ ಅವರು ಹೊಸ ರೇಷನ್ ಕಾರ್ಡ್ ಪಡೆಯಲಿಕ್ಕೆ ಕೂಡಲೇ ಅರ್ಜಿಸಲ್ಲಿಸಬಹುದು.ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದರೆ ಅವರು ತಮ್ಮ ಹೆಸರನ್ನು ಪೋಷಕರ ರೇಷನ್ ಕಾರ್ಡಿನಲ್ಲಿ ಸೇರಿಸಬೇಕಾಗುತ್ತದೆ.
ಮತ್ತೆ ಮುಂದುವರೆದು ಸರ್ಕಾರ ಸ್ಪಷ್ಟ ಪಡಿಸಿರುವುದೇನೆಂದರೆ ನಕಲಿ ರೇಷನ್ ಕಾರ್ಡನ್ನು ಬಳಸಿಕೊಂಡು ಸರ್ಕಾರದಿಂದ ಜಾರಿಗೊಳಿಸಿರುವ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭ ಪಾಡೆದುಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿದೆ.
Comments are closed, but trackbacks and pingbacks are open.