ಗೃಹ ಜ್ಯೋತಿ ನೋಂದಣಿ 45.61 ಲಕ್ಷ ದಾಟಿದೆ,ಅರ್ಜಿ ಸಲ್ಲಿಸುವುದು ಈಗ ಇನ್ನಷ್ಟು ಸುಲಭವಾಗಿದೆ, ಕೇವಲ ಈ ದಾಖಲೆಯ ಸಂಖ್ಯೆ ಹಾಕಿ ಕ್ಲಿಕ್ ಮಾಡಿ ಸಾಕು!

ಗೃಹ ಜ್ಯೋತಿ ನೋಂದಣಿ 45.61 ಲಕ್ಷ ದಾಟಿದೆ,ಅರ್ಜಿ ಸಲ್ಲಿಸುವುದು ಈಗ ಇನ್ನಷ್ಟು ಸುಲಭವಾಗಿದೆ, ಕೇವಲ ಈ ದಾಖಲೆಯ ಸಂಖ್ಯೆ ಹಾಕಿ ಕ್ಲಿಕ್ ಮಾಡಿ ಸಾಕು!

ಶನಿವಾರ ಸಂಜೆ ವೇಳೆಗೆ ಒಟ್ಟು 45,61,662 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಇ-ಆಡಳಿತ ಇಲಾಖೆಯು ಪ್ರತ್ಯೇಕ ಲಿಂಕ್ ಅನ್ನು ಹಂಚಿಕೊಂಡ ನಂತರ ಮತ್ತು ರಾಜ್ಯದಾದ್ಯಂತ ಎಲ್ಲಾ ವಿದ್ಯುತ್ ಕಚೇರಿಗಳಿಗೆ ಲಾಗಿನ್ ಮಾಡಿದ ನಂತರ ನೋಂದಣಿ ವೇಗವಾಗಿ ನಡೆಯುತ್ತಿದೆ.

ಜೂನ್ 18 ರಂದು ರಾಜ್ಯಾದ್ಯಂತ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮ ಒಂದರಲ್ಲಿ ಏಕಕಾಲದಲ್ಲಿ ನೋಂದಣಿ ಪ್ರಾರಂಭವಾಯಿತು.

ಶುಕ್ರವಾರ (ಜೂನ್ 23) 10,93,606 ಮತ್ತು ಶನಿವಾರ (ಜೂನ್ 24) 11,17,208 ಜನರು ರಾತ್ರಿ 8 ಗಂಟೆಯವರೆಗೆ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಯೋಜನೆಗಾಗಿ ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಡಲಾಗುತ್ತದೆ ( https://sevasindhugs.karnataka.gov.in ). ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಮತ್ತು ಸೈಬರ್ ಕೆಫೆಗಳನ್ನು ಬಳಸಿಕೊಂಡು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ನಾಡ ಕಚೇರಿ, ಭಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಲಾಗುತ್ತದೆ.

ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ಇಲ್ಲ ಆದ್ದರಿಂದ ಜನರು ನೋಂದಣಿಗಾಗಿ ಭಯಪಡಬೇಡಿ ಎಂದು ವಿನಂತಿಸಲಾಗಿದೆ.

“ಗೃಹ ಜ್ಯೋತಿ” ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗ,ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ

1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್..
ಈ ಮೂರು ಇದ್ದರೆ ಸಾಕು..
ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..

1) ಈ ಲಿಂಕ್ ನ Internet Explorer/Google Chrome/ Mozilla Firefox App ನಲ್ಲಿ ತೆರೆಯಿರಿ..

https://sevasindhugs.karnataka.gov.in/

2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ ಮಾಡಿ

3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ..
ಮನೆ ವಿಳಾಸ ತಾನಾಗೆ ಮೂಡುತ್ತದೆ..(ವಿಳಾಸ ಬರುವವರೆಗೆ ತಾಳಿ)

4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ ಮಾಡಿ

5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪಿಸಿ..

6) ನಂತರ ಆಧಾರ್ e – KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್’ನಲ್ಲಿ ಇರುವ ಫೋನ್ ನಂಬರ್’ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e – KYC‌ ಮುಗಿಯಿತು..

7) ನಂತರ ಮುಂದಿನ ಬಾಕ್ಸ್’ ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ‌
ಅದನ್ನ ಟೈಪಿಸಿ OK ಮಾಡಿ..

8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್’ಗೆ right tick mark ಮಾಡಿ..

9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್’ನಲ್ಲಿ ಟೈಪ್ ಮಾಡಿ submit ಮಾಡಿ..

10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ.‌.

11) ನಿಮ್ಮ‌ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ..
ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ..
ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯಿತು..

ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.. ಸರ್ವರ್‌ ಸಮಸ್ಯೆ ಇರುವುದರಿಂದ ಬೆಳಿಗ್ಗೆ 10 ಗಂಟೆಯ ಒಳಗೆ, ರಾತ್ರಿ 8ರ ನಂತರ ನೊಂದಾಯಿಸಿದರೆ‌ ಉತ್ತಮ.. ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,ಹಾಗಾಗಿ ಅವಸರ ಬೇಡ.

ಇತರೆ ವಿಷಯಗಳು :

ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್,ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆ ಬೇಕು? ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್, 35 ಲಕ್ಷ ಮಂದಿ ನೋಂದಣಿ, ನೀವು ಇನ್ನು ಅರ್ಜಿ ಸಲ್ಲಿಸಿಲ್ವಾ? ಇಲ್ಲಿದೆ ನೋಡಿ ಹಂತ ಹಂತವಾಗಿ ಹೇಗೆ ಅರ್ಜಿ ಸಲ್ಲಿಸುವುದೆಂಬ ಮಾಹಿತಿ

ನಿಮ್ಮ ಮೊಬೈಲ್ ನಲ್ಲಿ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರಗಳನ್ನು ಪಡೆಯುವುದು ಹೇಗೆ? ನಾಡಕಚೇರಿಯ ಅಧಿಕೃತ ವೆಬ್‌ಸೈಟ್‌ ಲಿಂಕ್ ಇಲ್ಲಿದೆ ನೋಡಿ.

ರೈಲಿನ ಮೇಲ್ಬಾಗದಲ್ಲಿ ದುಂಡಗಿನ ಆಕಾರದ ಮುಚ್ಚಳಗಳು ಏಕೆ? ನಿಮಗೆ ಗೊತ್ತೇ ಇಲ್ಲದ ವಿಷಯ ಇಲ್ಲಿದೆ ನೋಡಿ.

Comments are closed, but trackbacks and pingbacks are open.