ಆಟೋ, ಗೂಡ್ಸ್‌ ವಾಹನ ಖರೀದಿಸಲು ಸರ್ಕಾರದಿಂದ 3 ಲಕ್ಷ ಸಹಾಯಧನ; ದಾಖಲೆ & ಅರ್ಹತೆಗಳೇನು? ಹೀಗೆ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವ ಮಾಹಿತಿ ಏನೆಂದರೆ ಆಟೋ ಖರೀದಿಸಲು 3 ಲಕ್ಷ ಸಹಾಯಧನವನ್ನು ಪಡೆಯಲು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಯಾವ ರೀತಿ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಮತ್ತು ಅರ್ಹತೆಗಳೇನು? ಎಂಬುದರ ಕುರಿತ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಹೇಗೆ ಅರ್ಜಿಯನ್ನು ಸಲ್ಲಿಸುವುದು ಮತ್ತು ಇದರ ಪ್ರಯೋಜನಗಳೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ಕೊನೆಯವರೆಗೂ ಓದಿ.

goods subsidy loan

ಮೊದಲಿಗೆ ನೀವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಎಂಬ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಒಂದು ಅಫಿಶಿಯಲ್‌ ವೆಬ್ಸೈಟ್‌ ಗೆ ಭೇಟಿ ನೀಡಿದ ನಂತರ ಅಲ್ಲಿ ನಿಮಗೆ ಯೋಜನೆಗಳು ಮೇಲೆ ಕ್ಲಿಕ್‌ ಮಾಡಬೇಕು. ಅಲ್ಲಿ ಕ್ಲಿಕ್‌ ಮಾಡಿದ ನಂತರ ಟ್ಯಾಕ್ಸಿ/ಗೂಡ್ಸ್ ವಾಹನ/ ಆಟೋ ಖರೀದಿಸಲು ಸಹಾಯಧನಕ್ಕೆ ಅರ್ಜಿ ಸಲ್ಲಿಸು ಮೇಲೆ ಕ್ಲಿಕ್‌ ಮಾಡಿ.

ಗೂಡ್ಸ್‌ ವಾಹನ ಹಾಗೂ ಆಟೋ ರಿಕ್ಷಾ ಖರೀದಿಸಲು 3 ಲಕ್ಷ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

IAS ಸಂದರ್ಶನದಲ್ಲಿ ಕೇಳಿದ ಪ್ರಶ್ನೆ: ಈ ವಸ್ತುವನ್ನು ಬಡವರು ಎಸೆಯುತ್ತಾರೆ, ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ

ಅರ್ಹತೆಗಳು:

  • ಅರ್ಜಿದಾರರು ರಾಜ್ಯದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
  • ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಆರ್.ಟಿ.ಒ.ಯಿಂದ ನೀಡಲ್ಪಟ್ಟ ಸಂಬಂಧಪಟ್ಟ ವಾಹನ ಚಾಲನಾ ಪರವಾಗಿಯನ್ನು ಹೊಂದಿರಬೇಕು
  • ವಯೋಮಿತಿ 18 ರಿಂದ 55 ವರ್ಷಗಳು.
  • ವಾರ್ಷಿಕ ಆದಾಯ ರೂ.4.50 ಲಕ್ಷ ದೊಳಗಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರದ ಉದ್ಯೋಗಿಯಾಗಿರಬಾರದು
  • ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.

ದಾಖಲೆಗಳು:

1.ಆನ್‍ಲೈನ್ ಅರ್ಜಿ
2.ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
3.ಜಾತಿ, ಆದಾಯ ಪ್ರಮಾಣ ಪತ್ರ
4.ಆಧಾರ್ ಕಾರ್ಡ್ ಜೆರಾಕ್ಸ್
5.ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ
6.ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ 

ಅಲ್ಪಸಂಖ್ಯಾತರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಈ ಯೋಜನೆಯಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಕುರಿತು ನಾವು ಮಾಹಿತಿಯನ್ನು ತಿಳಿಸಲಾಗಿದೆ. ಅಲ್ಲಿ ನೀವು ಸೇವೆಗಳು ಮೇಲೆ ಕ್ಲಿಕ್‌ ಮಾಡಬೇಕು. ನಂತರ ಅಪ್ಲಿಕೇಶನ್‌ ತೆರೆಯುತ್ತದೆ. ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು:

ರಾಜ್ಯದ ಜನರಿಗೆ ಗುಡ್ ನ್ಯೂಸ್, ಗೃಹಜ್ಯೋತಿ, ಗೃಹಲಕ್ಷ್ಮೀ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ, ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.

WhatsApp ನಿಂದ ಬಂದಿದೆ ಬೆಂಕಿ ಅಪ್ಡೇಟ್!‌ ವಾಟ್ಸ್ಯಾಪ್‌ ಬಳಕೆದಾರರು ಫುಲ್‌ ಖುಷ್..!‌ 15 ನಿಮಿಷಗಳ ಬಿಗ್‌ ಎಡಿಟ್ ಗಿಫ್ಟ್!

Comments are closed, but trackbacks and pingbacks are open.