G20 Summit 2022 in Kannada
ಈ ಕೆಳಗಿನ ಲೇಖನದಲ್ಲಿ ಇಂಡೋನೇಶ್ಯಾದಲ್ಲಿ ನಡೆಯುವ ಜಿ20 ಶೃಂಗಸಭೆಯು ನವೆಂಬರ್ 15 – 16 ರಲ್ಲಿ ನಡೆಯುಲಿದ್ದು, ಈ ಸಭೆಯ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಬಾಲಿಯಲ್ಲಿ ಜಿ20 ಶೃಂಗಸಭೆ
ನವೆಂಬರ್ 15-16 ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 14 ರಂದು ಬಾಲಿಗೆ ತೆರಳಲಿದ್ದಾರೆ. ನ.14 ರಂದು ದಿಲ್ಲಿಯಿಂದ ಇಂಡೋನೇಷ್ಯಾದ ಬಾಲಿಗೆ ತೆರಳಲಿರುವ ಪ್ರಧಾನಿ ನ.17ರಂದು ಮರಳಲಿದ್ದಾರೆ. ಈ ನಡುವಿನ 48 ಗಂಟೆ ಅವಧಿಯಲ್ಲಿ ಜಿ-20 ಶೃಂಗಸಭೆಯಲ್ಲಿ ಪೂರ್ಣ ಬ್ಯೂಸಿ ಶೆಡ್ಯೂಲ್ ರೂಪಿಸಿಕೊಂಡಿದ್ದು, ವಿಶ್ವದ ಪ್ರಮುಖ ನಾಯಕರ ಜತೆಗೆ ಮಹತ್ವದ ಮಾತುಕತೆ ನಡೆಸಲಿರುವುದು ವಿಶೇಷವಾಗಿದೆ.
ಶೃಂಗಸಭೆಯಲ್ಲಿ ಪ್ರಧಾನಿ ಅವರು ಮೂರು ಹಂತದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿ-20 ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ, ಶೃಂಗಸಭೆಯ ಥೀಮ್ ಕಾರ್ಯಕ್ರಮಗಳು, ಇಂಡೋನೇಷ್ಯಾದಲ್ಲಿರುವ ಭಾರತೀಯ ಸಮುದಾಯದ ಜತೆಗೆ ಸಂವಾದದಲ್ಲಿ ಮೋದಿ ಪಾಲ್ಗೊಳ್ಳುವರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಒಟ್ಟಿಗೆ ಚೇತರಿಸಿಕೊಳ್ಳಬೇಕು, ಬಲಶಾಲಿಯಾಗಿ ಮುನ್ನಡೆಯಬೇಕು
ಜಾಗತಿಕವಾಗಿ ಕುಸಿದಿರುವ ಆರ್ಥಿಕತೆ ಪರಿಣಾಮದಿಂದ ಶೀಘ್ರ ಚೇತರಿಸಿಕೊಂಡು ಬಲಶಾಲಿಯಾಗಿ ಮುನ್ನಡೆಯುವ, ಅಂದರೆ ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’ ಎಂಬ ಥೀಮ್‌ನೊಂದಿಗೆ ಬಾಲಿ ಶೃಂಗಸಭೆ ಆರಂಭವಾಗಲಿದೆ. ಜಾಗತಿಕ ಹಸಿವು, ಆಹಾರ ಭದ್ರತೆ, ಇಂಧನ, ರಕ್ಷಣಾ ಮತ್ತು ಆರ್ಥಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಜಿ-20 ನಾಯಕರು ಸುದೀರ್ಘ ಸಮಾಲೋಚನೆ ನಡೆಸಿ, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದೇ ವೇಳೆ ಉಕ್ರೇನ್-ರಷ್ಯಾ ನಡುವೆ ಮುಂದುವರಿದಿರುವ ಯುದ್ಧದ ಬಗ್ಗೆ ನಾಯಕರು ಒಂದೇ ನಿಲುವು ತೆಗೆದುಕೊಳ್ಳುವ ಕುರಿತಂತೆಯೂ ಸಮಾಲೋಚನೆ ನಡೆಸಲಿದ್ದಾರೆ.
ಯುದ್ಧದ ವಿಚಾರದಲ್ಲಿ ಭಾರತದ ನಿಲುವು ದೃಢ
ರಷ್ಯಾ-ಉಕ್ರೇನ್ ಯುದ್ಧ ಆದಷ್ಟು ಬೇಗ ಕೊನೆಗಾಣಬೇಕು ಎಂದು ಈಗಾಗಲೇ ಪ್ರತಿಪಾದಿಸಿರುವ ಭಾರತ, ಇದೇ ಮಾತಿಗೆ ಕಟಿಬದ್ಧವಾಗಿ ನಿಲ್ಲಲಿದೆ ಎಂಬ ಮಾತನ್ನು ಮೋದಿ ಅವರು ಶೃಂಗಸಭೆಯಲ್ಲಿ ಪುನರುಚ್ಛಾರ ಮಾಡುವ ಸಾಧ್ಯತೆ ಇದೆ.
ಶೃಂಗಸಭೆ ವೇಳೆ ಪ್ರಧಾನಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಬಳಿಕ ಉಭಯ ನಾಯಕರ ನಡುವೆ ಮೊದಲ ಭೇಟಿ ಇದಾಗಿದ್ದು, ಭಾರತ-ಬ್ರಿಟನ್ ನಡುವಿನ ಹಲವು ದ್ವಿಪಕ್ಷಿಯ ಮಾತುಕತೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ವ್ಯಾಪಾರ-ವ್ಯವಹಾರ, ಭದ್ರತೆ, ಸಾಂಸ್ಕೃತಿಕ ವಿನಿಮಯ, ರಕ್ಷಣಾ ಸಹಕಾರ ಸೇರಿ ಹಲವು ಮಹತ್ವದ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ.
ಇತರೆ ವಿಷಯಗಳು :
ಜಿಡಿಪಿ ಬೆಳವಣಿಗೆ ಶೇಕಡಾ 7 ಕ್ಕೆ ಕುಸಿತ
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ
25 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ 2023 ಕ್ಕೆ
Comments are closed, but trackbacks and pingbacks are open.