ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ಜನರು ಸ್ವಂತ ಮನೆ ಹೊಂದಿಲ್ಲ ಮತ್ತು ಅವರಿಗೆ ಸೈಟ್ ಸೊಗಸಾದ ಹಾಗೂ ಸುಲಭವಾಗಿ ಲಭ್ಯವಿಲ್ಲ. ಸರ್ಕಾರದ ಆಜ್ಞೆಯ ಆಧಾರದ ಮೇರೆಗೆ, ಆಶ್ರಯ ಯೋಜನೆ ಮತ್ತು ರಾಜೀವ್ ಗಾಂಧಿ ಯೋಜನೆಗಳ ವತಿಯಿಂದ ಖಾಲಿ ಜಾಗಗಳನ್ನು ಸೈಟ್ ಆಗಿ ಪರಿವರ್ತಿಸಿ ನಿರಾಶ್ರಿತರಿಗೆ ನೀಡಲು ನಿರ್ಧಾರವನ್ನು ತೆಗೆದುಕೊಂಡಿದೆ.
ಹೊಸಕೋಟಿ ವಲಯದಲ್ಲಿ ಸುಮಾರು 324 ಎಕರೆಗಳಷ್ಟು ಭೂಮಿ ಲಭ್ಯವಿದೆ. ಇನ್ನು ಎಲ್ಲೆಲ್ಲಿ ಸೈಟ್ ಗೆ ಜಾಗ ಗುರುತಿಸಲಾಗಿದೆ ಎಂದು ನೋಡುವುದಾದರೆ, ದೇವನಹಳ್ಳಿವಲ್ಲಿ 64 ಎಕರೆ, ದೊಡ್ಡಬಳ್ಳಾಪುರದಲ್ಲಿ 93.3 ಎಕರೆ, ಹೊಸಕೋಟೆ 324 ಎಕರೆ, ನೆಲಮಂಗಲ 46 ಎಕರೆ ಗುರುತಿಸಲಾಗಿದೆ. ಸರ್ಕಾರವೇನೋ ಈಗ ಸೈಟ್ ಮನೆ ನಿವೇಶನ ಮಾಡುವುದಾಗಿ ತಿಳಿಸಿದೆ.
ಜಮೀನು ಹೊಂದಿರುವ ರೈತರು ಅಲ್ಲೇ ಮನೆ ಕಟ್ಟಿಕೊಳ್ಳಲು ಸರ್ಕಾರ ಸಹಾಯ ಮಾಡುತ್ತಿದೆ, ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಸ್ವಂತ ಮನೆ ಇಲ್ಲ. ಈ ಕಾರಣಕ್ಕಾಗಿ ಸರ್ಕಾರವು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲು ನಿರ್ಧಾರಿಸಿದೆ.
ಇದರ ಅಲ್ಲದೆ, ರಾಜೀವ್ ಗಾಂಧಿ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಪಡೆಯಲು ಅನೇಕರು ಅಪ್ಲಿಕೇಶನ್ ಹಾಕಿದ್ದು ಈ ಯೋಜನೆಯ ಮೂಲಕ ಮನೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಈಗ ಸರ್ಕಾರವು ಸೈಟ್ ಮತ್ತು ಮನೆ ಎರಡನ್ನು ಕೊಡಲು ನಿರ್ಧಾರಿಸಿದೆ ಎಂದು ಹೇಳಲಾಗುತ್ತಿದ್ದು, ಇದು ಹೇಗೆ ಸಾಧ್ಯ ಎಂದು ಕೇಳಿದ ಜನರಲ್ಲಿ ಕುತೂಹಲ ಶುರುವಾಗಿದೆ.
ಆದರೆ ಈ ಕೆಲಸ ಸುಲಭವಲ್ಲ. ನಿವೇಶನ ಹಂಚಿಕೊಡದೇ ಹೋದರೆ ಸರ್ಕಾರದ ಮೇಲೆ ಆರೋಪ ಬರುತ್ತದೆ. ಚುನಾವಣೆ ಬಗ್ಗೆ ಮಾತ್ರ ಗಮನದಲ್ಲಿ ಇಟ್ಟುಕೊಂಡು, ಜನರಿಗೆ ಬಾಯಿಮಾತಿನ ಸಲುವಾಗಿ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿ, ಮಾಡದೇ ಹೋದರೆ, ಚುನಾವಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಿ, ಆ ಕೆಲಸ ಮಾಡಲಿಲ್ಲ ಎಂದರೆ, ನಿವೇಶನ ಹಂಚಿಕೆ ಆಗಲಿಲ್ಲ ಎಂದರೆ ಜನರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರವಲ್ಲ ಚುನಾವಣೆಯಲ್ಲಿ ವೋಟ್ ಸಿಗದೇ ಹೋಗಬಹುದು. ಹಾಗಾಗಿ ಸರ್ಕಾರವು ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಖಂಡಿತ ಎಂದು ಹೇಳಲಾಗುತ್ತದೆ.
ಇತರೆ ವಿಷಯಗಳು:
ಹೂಡಿಕೆದಾರರಿಗೆ ಗುಡ್ ನ್ಯೂಸ್, 1 ಲಕ್ಷ ರೂಪಾಯಿ ಹೂಡಿಕೆ ಮಾಡಿ 44,995 ರೂ. ಬಡ್ಡಿ ಗಳಿಸಿಕೊಳ್ಳಲು ಅದ್ಭುತ ಅವಕಾಶ.
ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್, ಗೃಹಜ್ಯೋತಿ ನಿಯಮದಲ್ಲಿ ಹೊಸ ಮಹತ್ವದ ಬದಲಾವಣೆ.
ಪ್ರತಿ ತಿಂಗಳು 3 ಸಾವಿರ ರೂ. ಕಟ್ಟಿ ಸಾಕು: ನಿಮ್ಮದಾಗಲಿದೆ ಸಂಪೂರ್ಣ 1 ಕೋಟಿ ರೂ. ಇಲ್ಲಿದೆ ಸಂಪೂರ್ಣ ವಿವರ
Comments are closed, but trackbacks and pingbacks are open.