ಇಂದಿನಿಂದ ಡಿಜಿಟಲ್ ರುಪಾಯಿ ಯುಗ ಶುರು | Dijital Rupee in Kannada
ಇಲ್ಲಿ ಇಂದಿನಿಂದ ಶುರುವಾದಂತಹ ಡಿಜಿಟಲ್ ರುಪಾಯಿ ಶುರುವಾಗುತ್ತಿದೆ ಇದರ ಮಾಹಿತಿಯನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ.
Dijital Rupee in Kannada
ಇಂದಿನಿಂದ ಡಿಜಿಟಲ್ ರುಪಾಯಿ ಯುಗ ಶುರು
ಭಾರತ ಸರಕಾರ ತನ್ನದೇ ಅಧಿಕೃತ ಡಿಜಿಟಲ್ ಕರೆನ್ಸಿ (Digital Rupee)ಯನ್ನು 2023ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಡಿಜಿಟಲ್ ರುಪಾಯಿ ಯುಗ ಇಂದಿನಿಂದ ಶುರುವಾಗುತ್ತಿದ್ದು, ಪ್ರಾಯೋಗಿಕವಾಗಿ ಆರ್‌ಬಿಐನಿಂದ ಇ-ರುಪಿ ಬಿಡುಗಡೆಯಾಗಲಿದೆ. ಮೊದಲಿಗೆ ಸಗಟು ವಹಿವಾಟಿಗೆ ಇಂದಿನಿಂದ ಡಿಜಿಟಲ್ ರೂಪಾಯಿ ಲಭ್ಯವಾಗಲಿದ್ದು, 1 ತಿಂಗಳಲ್ಲಿ ಚಿಲ್ಲರೆ ವಹಿವಾಟಿಗೆ ಲಭ್ಯವಾಗಲಿದೆ ಎಂದೂ ವರದಿಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಲಿರುವ ಡಿಜಿಟಲ್ ರೂಪಾಯಿ ಕೂಡ ಪ್ರಸ್ತುತ ಖಾಸಗಿ ಕಂಪನಿಗಳಿಂದ ಲಭ್ಯವಿರುವ ಎಲೆಕ್ಟ್ರಾನಿಕ್ ವ್ಯಾಲೆಟ್‌ನಂತೆಯೇ ಇರಲಿದೆ. ಆದರೆ ಆರ್‌ಬಿಐ ಬೆಂಬಲಿದೆ ಡಿಜಿಟಲ್ ರೂಪಾಯಿದೆ ದೇಶದ ಅಧಿಕೃತ ಕರೆನ್ಸಿಯ ಮಾನ್ಯತೆ ಇರಲಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ಮೂಲಕ ಭಾರತ ಕೂಡಾ ಡಿಜಿಟಲ್ ಕರೆನ್ಸಿ ಬಳಕೆಗೆ ತನ್ನನ್ನು ತಾನು ತೆರೆದುಕೊಳ್ಳಲಿದೆ. ಮೊದಲ ಹಂತದಲ್ಲಿ ಕೇವಲ ಸಗಟು ವಹಿವಾಟು ಕ್ಷೇತ್ರಕ್ಕೆ ಪ್ರಾಯೋಗಿಕವಾಗಿ ಈ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳೊಳಗೆ ಚಿಲ್ಲರೆ ಕ್ಷೇತ್ರಕ್ಕೂ ಈ ವರ್ಚುವಲ್ ಕರೆನ್ಸಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬಿಡುಗಡೆ ಮಾಡಲಿದೆ.
ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿಯು ಪ್ರಸ್ತುತ ಚಲಾವಣೆಯಲ್ಲಿರುವ ‘ಫಿಯಟ್’ (ಭೌತಿಕ) ಕರೆನ್ಸಿಯಂತೆಯೇ ವಿಶಿಷ್ಟ ಅಂಕಿಗಳನ್ನು ಹೊಂದಿರುತ್ತದೆ. ಇದು ‘ಫಿಯಟ್’ ಕರೆನ್ಸಿಗಿಂತ ಭಿನ್ನವಾಗಿರುವುದಿಲ್ಲ. ಮೌಲ್ಯದಲ್ಲಿ ಕೂಡ ಫಿಯಟ್ ಕರೆನ್ಸಿ ಮತ್ತು ಡಿಜಿಟಲ್ ರೂಪಾಯಿ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು ಪ್ರಸ್ತುತ ಕರೆನ್ಸಿಯ ಡಿಜಿಟಲ್ ರೂಪವಾಗಿರುತ್ತದೆ ಅಷ್ಟೇ. ಫಿಯೆಟ್ ಕರೆನ್ಸಿಯನ್ನು ಸರ್ಕಾರವು ಹೇಗೆ ಅಧಿಕೃತವಾಗಿ ಟಂಕಿಸುತ್ತದೆಯೋ, ಹಾಗೆಯೇ ಡಿಜಿಟಲ್ ರೂಪಾಯಿ ಕೂಡ ಸರ್ಕಾರದಿಂದ ಖಾತರಿಪಡಿಸಿದ ಡಿಜಿಟಲ್ ವ್ಯಾಲೆಟ್ ಎಂದು ಹೇಳಬಹುದು.
ಡಿಜಿಟಲ್ ರೂಪಾಯಿಯ ವಹಿವಾಟುಗಳನ್ನು ಟ್ರ್ಯಾಕ್ ಮಾಡುವುದು
2023ರ ಆರ್ಥಿಕ ವರ್ಷದ ಅಂತ್ಯದೊಳಗೆ ಡಿಜಿಟಲ್ ರೂಪಾಯಿ ಸಿದ್ಧವಾಗಲಿದೆ ಎಂದು ಆರ್‌ಬಿಐ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ರಿಸರ್ವ್ ಬ್ಯಾಂಕ್ ಅಭಿವೃದ್ಧಿಪಡಿಸಿರುವ ಡಿಜಿಟಲ್ ರೂಪಾಯಿ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತವಾಗಿದ್ದು, ಎಲ್ಲಾ ರೀತಿಯ ವಹಿವಾಟುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಪ್ರಸ್ತುತ ಖಾಸಗಿ ಕಂಪನಿಗಳ ಮೊಬೈಲ್ ವ್ಯಾಲೆಟ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಇದನ್ನು ವಿವರಿಸಿದ ಮೂಲಗಳು, ಪ್ರಸ್ತುತ ಜನರು ಖಾಸಗಿ ಕಂಪನಿಗಳ ಎಲೆಕ್ಟ್ರಾನಿಕ್ ವ್ಯಾಲೆಟ್‌ಗಳನ್ನು ಬಳಸಿ ಖಾಸಗಿ ಕಂಪನಿಗಳಿಗೆ ಹಣ ವರ್ಗಾಯಿಸುತ್ತಾರೆ. ಈ ಹಣವು ಕಂಪನಿ ಅಥವಾ ಎಕ್ಸ್‌ಚೇಂಜ್ ಬಳಿಯೇ ಇರುತ್ತದೆ ಮತ್ತು ಈ ಕಂಪನಿಗಳು ಗ್ರಾಹಕರ ಪರವಾಗಿ ಯಾವುದೇ ವಹಿವಾಟಿನ ಮೇಲೆ ಪಾವತಿ ಮಾಡುತ್ತವೆ.
ಇತರೆ ವಿಷಯಗಳು :
ಶಿವಮೊಗ್ಗ ಜಿಲ್ಲೆಯ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ರಾಜಸ್ಥಾನದ ನಾಥದ್ವಾರದ ಶಿವನ ಪ್ರತಿಮೆ ಲೋಕಾರ್ಪಣೆ
ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಕೆಎಲ್‌ಇ ಸಂಶೋಧಕರು
Comments are closed, but trackbacks and pingbacks are open.