ರಾಜ್ಯದ ಪಶುಪಾಲಕರಿಗೆ ಗುಡ್ ನ್ಯೂಸ್, 50% ಸಬ್ಸಿಡಿಯಲ್ಲಿ ಕೌ ಮ್ಯಾಟ್‌ ವಿತರಣೆ, ಈ ಜಿಲ್ಲೆಯವರು ಇಂದೇ ಅರ್ಜಿ ಸಲ್ಲಿಸಿ.

2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಬ್ಬರ್ ಕೌಮ್ಯಾಟ್‌ ವಿತರಣೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಡಿ ಆಯ್ಕೆಯಾದ ಪ್ರತಿ ಫಲಾನುಭವಿಗಳಿಗೆ ಎರಡು ಕೌಮ್ಯಾಟ್‌ಗಳನ್ನು ವಿತರಿಸಲಾಗುವುದು.

ಈ ಯೋಜನೆಯ ಘಟಕದ ವೆಚ್ಚ ರೂ. 5,598 ಆಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50ರಂಶ್ಟು ಅಂದರೆ, ರೂ. 2,799 ಗಳ ಸಹಾಯಧನ ಮತ್ತು ಉಳಿದ ಶೇ 50 ಮೊತ್ತವು ಪಲಾನುಭವಿಗಳ ವಂತಿಕೆಯೊಂದಿಗೆ ಯೋಜನೆ ಅನುಷ್ಠಾನಗೋಳಿಸಲಾಗುವುದು.

ಅರ್ಜಿಸಲ್ಲಿಸಿದ ಅರ್ಜಿದಾರರು ಫ್ರೂಟ್ಸ್ ಐಡಿ ಹೊಂದಿರಬೇಕು. ಕಡ್ಡಾಯವಾಗಿ ಕನಿಷ್ಠ 2 ಜಾನುವಾರುಗಳನ್ನು ಹೊಂದಿರುವುದು ಅವಶ್ಯಕ. ಫಲಾನುಭವಿಗಳು ಆರ್.ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಅವಶ್ಯಕ. ಸರ್ಕಾರದ ನಿಯಮಗಳಂತೂ, ಶೇ 33.3 ರಷ್ಟು ಮಹಿಳೆಯರಿಗೆ, ಶೇ 15 ರಷ್ಟು ಅಲ್ಪಸಂಖ್ಯಾತರಿಗೆ ಮತ್ತು ಶೇ 3 ರಷ್ಟು ವಿಶೇಷ ಚೇತನರಿಗೆ ಆಧ್ಯತೆ ನೀಡಲಾಗುವುದು.

ಅರ್ಜಿಗಳ ವಿವರಗಳನ್ನು ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲೂಕುಗಳ ಸಹಾಯಕ ನಿರ್ದೇಶಕರು ಅಥವಾ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಮುಖ್ಯ ಪಶುವೈದ್ಯಾದಿಕಾರಿಗಳು ಪಶು ಆಸ್ಪತ್ರೆ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು ಕಚೇರಿಗಳಿಗೆ ಸಂಪರ್ಕಿಸಬಹುದು. ಜಿಲ್ಲೆಯ ರೈತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಕೊಪ್ಪಳ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ನಾಗರಾಜ ಹೆಚ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ- ಡಿಐಪಿಆರ್‌ ಕೊಪ್ಪಳ.

ಇತರೆ ವಿಷಯಗಳು:

ಹೆಣ್ಣು ಮಕ್ಕಳಿಗೆ ಭಾಗ್ಯದ ದಿನ ಆರಂಭ.! ಪ್ರತಿಯೊಬ್ಬರಿಗೂ ಉಚಿತ ಸ್ಕೂಟಿ, ಅರ್ಜಿ ಸಲ್ಲಿಸಿದ್ರೆ ಮಾತ್ರ; ಅನ್ಲೈನ್‌ ಅಪ್ಲೇ ಲಿಂಕ್‌ ಇಲ್ಲಿದೆ

ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023, ರೈತರಿಗೆ ಬೋರ್ವೆಲ್‌ ಹಾಕಿಸಲು 3 ಲಕ್ಷ ರೂ ಸಂರ್ಪೂಣ ಉಚಿತ, ತಡ ಮಾಡದೆ ಈ ಕಚೇರಿಗೆ ಭೇಟಿ ನೀಡಿ.

ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ: ₹2000 ಜೊತೆಗೆ ಸೋಲಾರ್‌ ಸ್ಟೌ ಭಾಗ್ಯ.! ಯಾರಿಗುಂಟು ಯಾರಿಗಿಲ್ಲ; ತಡ ಮಾಡದೇ ಈ ಕೆಲಸ ಮಾಡಿ

Comments are closed, but trackbacks and pingbacks are open.