Exclusive News: ಚೈತ್ರ ಕುಂದಾಪುರರನ್ನು ಬಂಧಿಸಿದ ಖಾಕಿ ಪಡೆ.! 4 ಕೋಟಿ ವಂಚಿಸಿದ ಚೈತ್ರ ಅಡಗಿದ್ದೆಲ್ಲಿ?
ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೈಗಾರಿಕೋದ್ಯಮಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ 4 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಅವರ ಮೇಲಿದೆ. ಈ ಸಂಬಂಧ ದೂರಿನ ಮೇರೆಗೆ ಸ್ಪೆಷಲ್ ವಿಂಗ್ ಸಿಟಿ ಸೆಂಟ್ರಲ್ ಬ್ರಾಂಚ್ (ಸಿಸಿಬಿ) ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಇಲ್ಲಿ ಅವರನ್ನು ಬುಧವಾರ ಸಂಜೆಯವರೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ನಂತರ ಪೊಲೀಸರು ಅವರ ಕಸ್ಟಡಿಗೆ ಕರೆದೊಯ್ಯಬಹುದು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ ತನ್ನ ಸಹಚರರ ಜತೆ ಸೇರಿ ಬೈಂದೂರಿನ ಉದ್ಯಮಿಯೊಬ್ಬರಿಗೆ 7 ಕೋಟಿ ಸುಲಿಗೆ ಮಾಡಿದ್ದರು. ತಾನು ಮೋಸ ಹೋಗಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂಬಂಧ ಉದ್ಯಮಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಚೈತ್ರಾ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.
ಇದು ಓದಿ: ಬೆಲೆ ಏರಿಕೆ ಶಾಕ್.! ಇಂದಿನಿಂದ ಈ ದಿನಸಿ ಸಾಮಗ್ರಿಗಳು ಸಿಕ್ಕಾಪಟ್ಟೆ ದುಬಾರಿ; ಯಾಕೆ ಗೊತ್ತಾ?
ಚೈತ್ರಾ ಕುಂದಾಪುರ ಜೊತೆಗೆ ಶ್ರೀಕಾಂತ್ ನಾಯ್ಕ್ ಪೆಲತ್ತೂರು ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನೂ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
7 ದಿನದಿಂದ ತಲೆಮರಿಸಿಕೊಂಡಿದ್ದ ಚೈತ್ರ ಕುಂದಾಪುರ ಇವರಿಗೆ ಕಾಂಗ್ರೆಸ್ ವಕ್ತಾರೆಯೊಬ್ಬರ್ ಆಶ್ರಯ ನೀಡಿದ್ದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ನ ಮಾಧ್ಯಮ ವಕ್ತಾರೆ ಅಜುಂ ನಿವಾಸದಲ್ಲಿಯೇ ಇಷ್ಟು ದಿನ ಚೈತ್ರ ಕುಂದಾಪುರರವರು ಇದ್ದರು ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ. ಇದೀಗ ಅಂಜು ಕೂಡ ಸಿಸಿಬಿ ಪೋಲಿಸರ ತನಿಕೆಗೆ ಸಹಕರಿಸುವಂತೆ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಬಿಲ್ಲವ ಮುಖಂಡ ಹಾಗೂ ಉದ್ಯಮಿಗೆ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರು ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಉದ್ಯಮಿಯಿಂದ ತಂಡ ಮೂರು ಹಂತಗಳಲ್ಲಿ ಸುಮಾರು 7 ಕೋಟಿ ರೂಪಾಯಿ ಪಡೆದಿತ್ತು ಎನ್ನಲಾಗಿದೆ.
ಇತರೆ ವಿಷಯಗಳು:
ಚೌತಿಯಂದು ನೌಕರರಿಗೆ ಭರ್ಜರಿ ಕೊಡುಗೆ.! ಹೆಚ್ಚಳವಾಗೇಬಿಡ್ತು ಡಿಎ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಕೇವಲ 5 ಸಾವಿರದಿಂದ ವಾಪಸ್ ಸಿಗುತ್ತೆ 8 ಲಕ್ಷ ರೂ. ಪೋಸ್ಟ್ ಆಫೀಸ್ ಹೊಸ ಸ್ಕೀಮ್
Comments are closed, but trackbacks and pingbacks are open.