ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ?, ಹಾಗಿದ್ರೆ ತಡ ಮಾಡದೆ ಈ ಚಿಕ್ಕ ಕೆಲಸ ಮಾಡಿ.

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ?, ಹಾಗಿದ್ರೆ ತಡ ಮಾಡದೆ ಈ ಚಿಕ್ಕ ಕೆಲಸ ಮಾಡಿ.

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಸಾಕಷ್ಟು ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲವೆಂಬುದು ಪ್ರಮುಖ ವಿಚಾರಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಐದು ಕೆಜಿಗೆ ಹಣ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ಹಣ ಪಡಿತರ ಚೀಟಿಯಲ್ಲಿ ನಿರ್ಧಾರಿತ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತದೆ.

ಆದಾಗ್ಯೂ ಕೆಲವರು ಇನ್ನೂ ಹಣವನ್ನೂ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಹೌದು, ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲಾಗಿ ನೀಡುವ ಹಣವನ್ನು ಬಂದಿದೆಯಾ ಎಂದು ತಿಳಿದುಕೊಳ್ಳಲು ಬ್ಯಾಂಕ್‌ಗೆ ಹೋಗಿ ಬೇಸರದಿಂದ ವಾಪಸ್‌ ಆಗುತ್ತಿದ್ದಾರೆ.

ಇದಕ್ಕೆ ಕಾರಣ ಸರ್ಕಾರ ಹಣವನ್ನು ನಿಮ್ಮ ಖಾತೆಗೆ ಹಾಕಿಲ್ಲ ಎಂದಲ್ಲ, ಬದಲಾಗಿ ನಿಮ್ಮ ಬ್ಯಾಂಕ್‌ ಖಾತೆ ಸಕ್ರಿಯವಾಗಿಲ್ಲ ಎಂದರ್ಥ.

ಹೀಗಾಗಿ ತಕ್ಷಣವೇ ಇ-ಕೆವೈಸಿ ಮಾಡಿಸಿಕೊಳ್ಳಿ. ಹಾಗಿದ್ರೆ, ಯಾವೆಲ್ಲಾ ಸಮಸ್ಯೆಗಳಿಗೆ ಏನೆಲ್ಲಾ ದಾಖಲೆಗಳು ಬೇಕು? ಹಣ ಜಮೆ ಆಗಿದೆ ಎಂದು ಪತ್ತೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನಾಳೆಯೇ ಡೆಡ್‌ಲೈನ್‌: ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವವರೆಗೆ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಪಡಿತರದಾರರಿಗೆ ಜಮಾ ಮಾಡುತ್ತಿದ್ದು, ಈ ನಡುವೆ ಕೆಲವರು ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ನಾಳೆಯೊಳಗೆ ಅಂದರೆ ಜುಲೈ 15 ರೊಳಗೆ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಲು ಕೆವೈಸಿ ಮಾಡಿಸಿ ಎಂದು ಸರ್ಕಾರ ತಿಳಿಸಿದ್ದು, ಯಾರೆಲ್ಲಾ ಈ ಕೆಲಸ ಮಾಡಿಲ್ಲವೋ ಅವರಿಗೆ ಹಣ ಜಮಾವಣೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಎಚ್ಚರಿಸಿದೆ.

ಲಕ್ಷಾಂತರ ಖಾತೆಗಳು ನಿಷ್ಕ್ರಿಯಗೊಂಡಿವೆ: ಪ್ರಧಾನಮಂತ್ರಿ ಜನಧನ ಯೋಜನೆ ಅಡಿಯಲ್ಲಿ ಬಡ, ಕೂಲಿ ಕಾರ್ಮಿಕರು ಸೇರಿದಂತೆ ಬಹುಪಾಲು ಜನರು ಖಾತೆಗಳನ್ನು ಓಪನ್‌ ಮಾಡಿಸಿದ್ದರು. ಆದರೆ ಈ ಖಾತೆಯಲ್ಲಿ ಯಾವುದೇ ವ್ಯವಹಾರಗಳನ್ನು ನಡೆಸಿಲ್ಲ. ಅದರಲ್ಲೂ ಆರ್‌ಬಿಐ ನಿಯಮದ ಪ್ರಕಾರ ಒಂದು ಬ್ಯಾಂಕ್ ಖಾತೆ ಎರಡು ವರ್ಷಗಳಿಗಿಂತ ಹೆಚ್ಚು ಅವಧಿಗೆ ಬಳಕೆಯಲ್ಲಿ ಇಲ್ಲದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಈ ಕಾರಣಕ್ಕಾಗಿಯೇ ಈಗ ಈ ಸಮಸ್ಯೆ ಎದುರಾಗಿದೆ.

ಇತರೆ ವಿಷಯಗಳು :

ಜುಲೈ 17 ಅಥವಾ 19 ರಂದು ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ: ಲಕ್ಷ್ಮೀ ಹೆಬ್ಬಾಳ್ಕರ್, ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಈ ಕೆಲಸ ಮಾಡಿ.

ಉಚಿತ 200 ಯೂನಿಟ್ ಪಡೆಯುವ ಜನರಿಗೆ ಸರ್ಕಾರದಿಂದ ಮತ್ತೊಂದು ಹೊಸ ಗೂಡ್ ನ್ಯೂಸ್, ಇಂಧನ ಇಲಾಖೆಯಿಂದ ಹೊಸ ಯೋಜನೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಬಾಡಿಗೆ ಮನೆಯಲ್ಲಿ ಇರುವವರಿಗೆ ಸರ್ಕಾರ ಹೊಸ ಮಾರ್ಗ ಸೂಚನೆ ಹೊರಡಿಸಿದೆ, ಕಡ್ಡಾಯವಾಗಿ ಈ ಕೆಲಸ ನೀವು ಮಾಡಲೇಬೇಕು.

ಶಕ್ತಿ ಯೋಜನೆಗೆ ಮೆಚ್ಚುಗೆ, ವೀರೇಂದ್ರ ಹೆಗ್ಗಡೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದಾರೆ.

Comments are closed, but trackbacks and pingbacks are open.