ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ಗಮನಕ್ಕೆ, ನಿಮ್ಮ ಕಾರ್ಡ್ ನಲ್ಲಿ ಈ ಒಂದು ತಪ್ಪು ಮಾಡಿದ್ದರೆ ನಿಮಗೆ ಸಿಗಲ್ಲ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಲಾಭ.
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ಕುರಿತು ಹೊಸ ಸಂಕಷ್ಟ ಎದುರಾಗುತ್ತಿದೆ. ಮೊನ್ನೆಯಷ್ಟೇ ಜಾರಿಯಾದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ಇದೀಗಾ ಹೊಸ ಸಂಕಷ್ಟ ಎದುರಾಗಿದೆ. ಹೌದು, ಬಿಪಿಎಲ್ ಕಾರ್ಡ್ ನಲ್ಲಿ ಪುರುಷರು ಮುಖ್ಯಸ್ಥರಿದ್ದವರಿಗೆ ಗೃಹ ಲಕ್ಷ್ಮಿ ಸ್ಕೀಮ್ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಯೋಜನೆಗೆ ಸಧ್ಯ ಕಾರ್ಡ್ ನಲ್ಲಿ 18 ವರ್ಷದ ಒಳಗಿದ್ದ ಬಾಲಕಿಯರು ಇದ್ರೆ ತೊಂದರೆ ಇಲ್ಲ. ಆದರೆ ವಯಸ್ಕ ಮಹಿಳೆ ಇದ್ದೂ ಕಾರ್ಡ್ ಮುಖ್ಯಸ್ಥ ಗಂಡಸರಾಗಿದ್ದರೆ ಅನ್ನಭಾಗ್ಯ ಯೋಜನೆಯ ಲಾಭ ಸಿಗುವುದಿಲ್ವಂತೆ ಎಂದು ತಿಳಿದುಬಂದಿದೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಿಪಿಎಲ್, ಎಪಿಎಲ್ ಕಾರ್ಡ್ ಮನೆಯೊಡತಿಯೇ ಇರಬೇಕು. ಇಲ್ಲದಿದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಎರಡೂ ಯೋಜನೆಗೂ ಅನರ್ಹರಾಗಿರುತ್ತಾರಂತೆ ಎಂದು ವರದಿಯಾಗಿದೆ.
ಯಾಕಂದ್ತೆ ಈ ಎರಡು ಯೋಜನೆಗಳು ಮಹಿಳೆಯರಿಗೆ ಹೆಚ್ಚು ಪ್ರಧಾನ್ಯತೆಯನ್ನ ನೀಡುತ್ತಿರುವುದುರಿಂದ ಜೊತೆಗೆ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮಾಹಿತಿಯನ್ನ ಆಧಾರಿಸಿ ಈ ನಿಯಮವನ್ನ ಕಡ್ಡಾಯ ಮಾಡಲಾಗಿದೆ. ಸಧ್ಯ ಆಹಾರ ಇಲಾಖೆಯ ಪ್ರಕಾರ ಈಗಿರುವ ಬಿಸಿಎಲ್ ಕಾರ್ಡ್ ದಾರರ ಪೈಕಿ ಆರು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇರುವುದು ಕಂಡುಬಂದಿದೆ.
ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಇದ್ದೂ ಪುರುಷ ಮುಖ್ಯಸ್ಥ ಇರೋ ಕಾರ್ಡ್ ನಿಂದ ಅರ್ಜಿ ಸಲ್ಲಿಸಿದ್ರೆ ಅರ್ಜಿ ಸ್ವೀಕಾರವಾಗುತ್ತಿಲ್ಲ.
ಜೊತೆಗೆ ಆಂತಹ ಬಿಪಿಎಲ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿಯ ಎರಡು ಸಾವಿರ ದುಡ್ಡು ಕೂಡ ಸಿಗೋದಿಲ್ಲ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಲು ಆಹಾರ ಇಲಾಖೆ ಸಮಯ ನಿಗದಿ ಮಾಡಿದೆ. ಮನೆಯೊಡತಿ ಹೆಸರು ಬದಲಾವಣೆಗೆ ಸೆ. 1ರಿಂದ 10ರವರೆಗೆ ಅವಕಾಶ ನೀಡಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.
ಇನ್ನು, ಆಹಾರ ಇಲಾಖೆಯ ಪ್ರಕಾರ 94 % ರಷ್ಟು ಮಹಿಳೆಯರು ಬಿಪಿಎಲ್ ಕಾರ್ಡ್ ಗಳ ಮುಖ್ಯಸ್ಥರಾಗಿದ್ದಾರೆ. ಇನ್ನು 5 % ರಷ್ಟು ಕಾರ್ಡ್ ಗಳಲ್ಲಿ ಪುರುಷರು ಮುಖ್ಯಸ್ಥರಾಗಿದ್ದಾರೆ.
ಹೀಗಾಗಿ ಈಗಾಗಲೆ ಗೃಹಲಕ್ಷ್ಮಿಗೆ ಯೋಜನೆಯ ಅರ್ಜಿ ಸಲ್ಲಿಕೆ ಮಾಡಿದ 1.28 ಕೋಟಿ ಫಲಾನುಭವಿಗಳ ಪೈಕಿ ಸಧ್ಯ 1.11 ಕೋಟಿಯಷ್ಟು ಅರ್ಜಿಸಲ್ಲಿಕೆಯಾಗಿದ್ದು, ಇನ್ನು 18 ಲಕ್ಷದಷ್ಟು ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿ ಇದೆ ಎಂದು ತಿಳಿದುಬಂದಿದೆ.
ಇದರಲ್ಲಿ ಆರು ಲಕ್ಷದಷ್ಟು ಕಾರ್ಡ್ ಗಳು ಬಿಪಿಎಲ್ ಕಾರ್ಡ್ ಗಳಲ್ಲಿ ಮುಖ್ಯಸ್ಥೆಯರು ಅಲ್ಲದೇ ಇರುವುದು ಕಂಡುಬಂದಿರುವುದೇ ಅರ್ಜಿ ಸಲ್ಲಿಕೆಗೆ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ. ಆದಷ್ಟು ಬೇಗ ಮಹಿಳೆಯರು ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಒನ್ ಸೆಂಟರ್, ಕರ್ನಾಟಕ ಒನ್ ಸೆಂಟರ್ ಗಳಲ್ಲಿ ತಮ್ಮ ಹೆಸರುಗಳನ್ನ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ರಾಜ್ಯದ ಜನತೆಗೆ ಸರ್ಕಾರದ ನೆರವು: ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಬಡ್ಡಿ, ಸರ್ಕಾರದಿಂದ ಹೊಸ ಯೋಜನೆ
Comments are closed, but trackbacks and pingbacks are open.