Breaking News: ಅನ್ನದಾತರಿಗೆ ಸಾಲ ಮರುಪಾವತಿ ನೊಟೀಸ್!‌ ಕಂಗಲಾದ ರಾಜ್ಯದ ರೈತ ವರ್ಗ; ಬ್ಯಾಂಕ್‌ಗಳು ಶುರು ಮಾಡಿವೆ ಸಾಲ ವಸೂಲಿ ಕಾರ್ಯ

ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಹಲವು ಕಡೆ ಸರಿಯಾಗಿ ಮಳೆಯಾಗಿಲ್ಲ ಮುಂಗಾರು ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸುತ್ತಾ ಇದೆ. ಹೀರುವಾಗ ರೈತರನ್ನು ಒಂದು ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದಂತ ಪರಿಸ್ಥಿತಿಯಾಗಿದೆ. ಈ ಕಡೆ ಬೆಳೆದ ಬೆಳೆಯೂ ಕೂಡ ಕೈಗೆ ಸಿಕ್ಕಿಲ್ಲ ಮತ್ತೊಂದು ಕಡೆ ಬೆಲೆ ಬೆಳೆಯೋಕೆ ತೆಗೆದುಕೊಂಡ ಸಾಲ ಮರುಪಾವತಿಗೆ ಬ್ಯಾಂಕ್‌ ಗಳು ಒತ್ತಾಯಿಸುತ್ತಿವೆ. ಅಂದರೆ ನೋಟಿಸ್‌ ಕಳುಹಿಸುತ್ತಾ ಇದೆ. ಇದು ರೈತರನ್ನಾ ಇಕ್ಕಟ್ಟಿಗೆ ಸಿಲುಕಿಸಿದೆ. ಎಲ್ಲಾ ರೈತರನ್ನು ಸಂಷ್ಟಕ್ಕೆ ಸಿಲುಕಿಸಲಿದೆಯಾ ಸರ್ಕಾರ? ಅಥವಾ ಸಾಲ ಮನ್ನಾ ಮಾಡಲು ಸೂಚನೆ ನೀಡಲಿದೆಯಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Loan repayment Notice For Farmers

ಒಂದೆಡೆ ಬರದ ಛಾಯೆ ಮತ್ತೊಂದೆಡೆ ಬ್ಯಾಂಕ್‌ ಗಳ ಕಾಟ ಅನ್ನದಾತರ ಮನೆಗೆ ಬರುತ್ತಿದೆ ಸಾಲದ ಮರುಪಾವತಿ ನೋಟಿಸ್‌. ನೋಟಿಸ್‌ ನೋಡಿ ಕಂಗಾಲಾದ ಹಾವೇರಿ ಜಿಲ್ಲೆಯ ಅನ್ನದಾತರು ಕೊಳೆ ರೋಗಕ್ಕೆ ತುತ್ತಾದ ಮೆಕ್ಕೆಜೋಳ ಬೆಳೆ ಸಾಲದ ನೋಟೀಸ್‌ ತೋರಿಸುತ್ತಾ ಅನ್ನದಾತರು.

ಹಾವೇರಿ ತಾಲೂಕಿನ ಹಿರೆಲಿಂಗನಹಳ್ಳಿ ಸೇರಿದಂತೆ ಸುತ್ತಾ ಮುತ್ತಲಿನ ಹಳ್ಳಿಯಲ್ಲಿ ನೋಟಿಸ್‌‌ ನೋಡಿ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿ ಫಸಲು ಕೈಗೆ ಬಾರದೇ ಕಂಗಾಲಾಗಿದ್ದರು, ಈ ಬಾರಿ ಜೂನ್‌ ನಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಬೆಳೆಗಳು ರೋಗಕ್ಕೆ ತುತ್ತಾಗಿ ಒಣಗಿ ಹೋಗಿವೆ. ಜಿಲ್ಲೆಯಲ್ಲಿ ಈ ಬಾರಿ ಕೆಲವು ರೈತರು 2-3 ಬಾರಿ ಬಿತ್ತನೆ ಮಾಡಿದ್ರು ಬೆಳೆಗಳು ನಿಲ್ಲುತ್ತಾ ಇಲ್ಲ ಕಳೆದ ತಿಂಗಳು ಮಳೆಯಾಗಿದ್ದರಿಂದ ಮೆಕ್ಕೆಜೋಳ ಹತ್ತಿ ಮೆಣಸಿಕಾಯಿ ಸೇರಿದಂತೆ ವಿವಿಧ ಬೆಳೆಗಳು ಬಾಡಿ ನಿಂತಿವೆ. ಅದ್ರೆ ಬ್ಯಾಂಕ್‌ ಅಧಿಕಾರಿಗಳು ಮಾತ್ರ ರೈತರ ಮನೆಗಳಿಗೆ ನೋಟೀಸ್‌ ಕಳುಹಿಸುತ್ತಾ ಇದ್ದಾರೆ. ಇದರಿಂದ ರೈತರು ಕಂಗಲಾಗಿದ್ದಾರೆ.

ಹಿಂದೆ ಸಿದ್ದರಾಮಯ್ಯ ಸರ್ಕಾರ ಸೇರಿದಂತೆ ಎಲ್ಲಾ ಸರ್ಕಾರಗಳು ನೊಟೀಸ್‌ ನಿಡಬಾರದು ಅಂತ ಆದೇಶ ಮಾಡಿದ್ರು ಆದರೆ ಕೆಲ ಬ್ಯಾಂಕ ಗಳು ರೈತರ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ನೊಟೀಸ್‌ ಮೇಲೆ ನೊಟೀಸ್‌ ಕೊಟ್ಟು ಭಯ ಬೀಳಿಸುತ್ತಾ ಇದೆ. ಕೆಲವು ಬ್ಯಾಂಕ್‌ ನಲ್ಲಿ ರೈತ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ವೃದ್ಧಾಪ್ಯ ವೇತನ ಹಾಗೂ ಬೆಳೆ ವಿಮೆ ಹಣ ಹಾಗೂ ಮನೆ ನಿರ್ಮಾಣ ಹಣ ಮಂಜೂರು ಆಗಿದ್ದ ಹಣವನ್ನು ಬ್ಲಾಕ್‌ ಮಾಡಿ ರೈತರಿಗೆ ಹಣ ಕೊಡದೇ ಸತಾಯಿಸುತ್ತದೆ, ಕೂಡಲೇ ಸರ್ಕಾರ ರೈತರಿಗೆ ಯಾವುದೇ ನೊಟೀಸ್‌ ಕೊಡದೆ ಕಾಲಾವಕಾಶ ಹಾಗೂ ಸಾಲ ಮನ್ನಾ ಘೋಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

ಇತರೆ ವಿಷಯಗಳು:

ಚಿಕಿತ್ಸೆಗಾಗಿ ಹೊಸ ಬಿಪಿಎಲ್‌ ಕಾರ್ಡ್‌, ವೈದ್ಯಕೀಯ ಸೌಲಭ್ಯಗಳನ್ನು ಬಯಸುವವರಿಗೆ ಪ್ರತ್ಯೇಕ ಹೊಸ ಬಿಪಿಎಲ್ ಕಾರ್ಡ್‌, ಈ ಕಾರ್ಡಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?

ಬಾಡಿಗೆ ಮನೆಯಲ್ಲಿ ಇರುವವರ ಗಮನಕ್ಕೆ, ರಾಜೀವ್ ಗಾಂಧಿ ವಸತಿ ಯೋಜನೆ ಮುಖಾಂತರ ಮನೆ ಇಲ್ಲದವರಿಗೆ ಉಚಿತ ಮನೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿ ಮನೆ ಪಡೆಯಿರಿ.

ಬಿಪಿಎಲ್‌ ಕಾರ್ಡ್‌ದಾರರಿಗೆ ಭರ್ಜರಿ ಕೊಡುಗೆ.! ಉಚಿತ ಅಕ್ಕಿ ಅಷ್ಟೇ ಅಲ್ಲ, ವೈದ್ಯಕೀಯ ಸೌಲಭ್ಯವೂ ಫ್ರೀ

Comments are closed, but trackbacks and pingbacks are open.