ಲಕ್ಷ್ಮಿಯರಿಗೆ ಬಂತಲ್ಲ ಗುಡ್ ನ್ಯೂಸ್.! ಇನ್ನೇನು ಕೆಲ ದಿನದಲ್ಲಿ ನಿಮ್ಮ ಕೈ ಸೇರಲಿದೆ ಗೃಹಲಕ್ಷ್ಮಿ ಹಣ; ಮಹಿಳೆಯರ ಸಂತೋಷಕ್ಕೆ ಪಾರವೇ ಇಲ್ಲ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಹಣ ಕೈ ಸೇರುವ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ನಿಮ್ಮ ಖಾತೆಗೆ ಹಣ ಬರಲಿದೆ? ಹಣವನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.
ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಲಾಗಿದ್ದ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೆ ತರಲಾಗಿದೆ, ಅದರಲ್ಲಿ ಒಂದಾದ ಗ್ಯಾರಂಟಿ ನಂಬರ್ 4 ಗೃಹಲಕ್ಷ್ಮಿ ಯೋಜನೆಗೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಇದೆ ತಿಂಗಳಿನಲ್ಲಿ ಈ ಯೋಜನೆಯಡಿ ಪ್ರತಿ ಮನೆ ಯಜಮಾನಿಯ ಖಾತೆಗೆ 2000 ರೂಪಾಯಿಯನ್ನು ನೀಡಲಾಗುವುದು. ಅದಕ್ಕಾಗಿಯೇ ರಾಜ್ಯ ಸರ್ಕಾರ ಇದೆ ಆಗಸ್ಟ್ 30 ರಂದು ಈ ಯೋಜನೆಯಡಿ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುವುದು ಎಂದು ಅಧಿಕೃತ ಮಾಹಿತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಇದು ಓದಿ: ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ! ಮಿತಿ 18,000 ದಿಂದ 56,900 ರೂ.ಗೆ ಏರಿಕೆ, ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ
1 ಕೋಟಿ 09 ಲಕ್ಷ 55 ಸಾವಿರ ಜನರು ಈ ಯೋಜನೆಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ, ಈ ಯೋಜನೆಯನ್ನು ಇದೇ ತಿಂಗಳ 30 ರಂದು ಎಲ್ಲಾ ಮನೆಯೊಡತಿಯರ ಖಾತೆಗೆ ಗೃಹಲಕ್ಷ್ಮಿ ಹಣ ನೀಡಲಾಗುವುದು ಎಂದು ತಿಳಿದು ಬಂದಿದೆ ಈ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಲೋಕಸಭೆಯ ಸದಸ್ಯರಾಗಿರುವ ರಾಹುಲ್ ಗಾಂಧಿರವರು ಕರ್ನಾಟಕಕ್ಕೆ ಆಗಮಿಸಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ.
Comments are closed, but trackbacks and pingbacks are open.