Expire ಆಗಲಿದೆ ಶಕ್ತಿ ಯೋಜನೆ; ಫಿಕ್ಸ್ ಆಯ್ತು ಲಾಸ್ಟ್ ಡೇಟ್.! ಎಷ್ಟು ದಿನ ಸಂಚರಿಸಲಿದೆ ಗೊತ್ತಾ ಫ್ರೀ ಬಸ್?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಶಕ್ತಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಸಂಚಾರವನ್ನು ಮಾಡಬಹುದಾಗಿದೆ, ಕೆಲ ದಿನದಿಂದ ಬಂದಿರುವ ಸುದ್ದಿ ನಿಜಾನ ಅಥವಾ ಸುಳ್ಳಾ? ಇನ್ನು ಮುಂದೆ ಶಕ್ತಿ ಯೋಜನೆ ಜಾರಿಯಲ್ಲಿ ಇರುತ್ತದೆಯೇ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಿದ್ದೇವೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಪೂರ್ತಿಯಾಗಿ ಓದಿ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಕರ್ನಾಟಕದಾದ್ಯಂತ ಅನೇಕ ಸುದ್ದಿಗಳು ಹರಿದಾಡುತ್ತದೆ ಅದರ ಮಧ್ಯದಲ್ಲಿಯು ಅನೇಕ ಮಹಿಳೆಯರು ತಮಗೆ ಬೇಕಾದ ಪುಣ್ಯ ಕ್ಷೇತ್ರಗಳಿಗೆ ಈಗಾಲೇ ಹೋಗುತ್ತಿದ್ದಾರೆ, ಹಾಗಾದ್ರೆ ಏನು ಈ ಸುದ್ದಿ ಎಂದು ನೋಡುವುದಾದ್ರೆ, ಹೌದು ಅದುವೇ ಈ ಯೋಜನೆಯನ್ನು ಇನ್ನೇನು ಕೆಲ ದಿನದಲ್ಲಿ ನಿಲ್ಲಿಸಲಾಗುವುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದ್ರೆ ಇದಕ್ಕೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ಸ್ಪಷ್ಟವಾದ ಮಾಹಿತಿಯನ್ನು ಹೊರಹಾಕಿದ್ದಾರೆ.
ರಾಜ್ಯಾದ್ಯಂತ ಸಂಚಾರ ನಡೆಸಲು ಕರ್ನಾಟಕ ಇತಿಹಾಸದಲ್ಲಿಯೇ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ನಮ್ಮದು ನಾವು ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಲು ಬಿಡುವುದಿಲ್ಲ ಇನ್ನು 10 ವರ್ಷಗಳು ಈ ಯೋಜನೆ ಮುಂದುವರೆಯಲಿದೆ, ನಮ್ಮ ಕಾಂಗ್ರೆಸ್ ಸರ್ಕಾರ ಎಂದು ನುಡಿದಂತೆ ನಡೆಯುವ ಸರ್ಕಾರ ಆಗಿದೆ ಈಗಾಗಲೇ ನಾವು ನೀಡಿದ ಎಲ್ಲಾ 4 ಗ್ಯಾರಂಟಿಗಳನ್ನು ಈ ಈಗಾಗಲೇ ಅನುಷ್ಠಾನ ಮಾಡಿದ್ದೇವೆ ಅದರಲ್ಲಿಯು ಮಹತ್ವದ ಯೋಜನೆಯಲ್ಲಿ ಒಂದಾದ ಶಕ್ತಿಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ರಾಜ್ಯದಲ್ಲಿ ತಿಳಿದು ಬಂದಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ರದ್ದಾಗಲಿದೆ, ಇದನ್ನು ನಿಲ್ಲಿಸಲಾಗುವುದು ಎನ್ನುವ ಪಿಸು ಮಾತುಗಳು ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ, ಆದ್ರೆ ಇದೆಲ್ಲ ಸುಳ್ಳು ಸುದ್ದಿಗಳು, ಯಾರು ಇದಕ್ಕೆ ಕಿವಿ ಕೊಡಬೇಡಿ ಎಂದು ಸಾರಿಗೆ ಸಚಿವರೆ ಜನಸಾಮಾನ್ಯರಿಗೆ ವಿವರಿಸಿದ್ದಾರೆ. ಹೌದು ಒಂದು ಪಕ್ಷದಲ್ಲಿನ ಜನರು ಆ ಪಕ್ಷದ ಕಾರ್ಯಕರ್ತರು ಈ ಎಲ್ಲಾ ಸುಳ್ಳು ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಖುದ್ದು ಸಚಿವರೆ ತಿಳಿಸಿದ್ದಾರೆ. ಯಾವ ಮಹಿಳೆಯರು ಇದಕ್ಕಾಗಿ ಪಾಸ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
Comments are closed, but trackbacks and pingbacks are open.