ಜಿಡಿಪಿ ಬೆಳವಣಿಗೆ ಶೇಕಡಾ 7 ಕ್ಕೆ ಕುಸಿತ | GDP Growth 7 Percentage India in Kannada

GDP Growth 7 Percentage India in Kannada

ಭಾರತದಲ್ಲಿ ಶೇಕಡಾ 7.7 ರಷ್ಟಿದ್ದ ಜಿಡಿಪಿ ದರವು ಶೇಕಡಾ 7 ಕ್ಕೆ ಕುಸಿದಿದೆ, ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ.

GDP Growth 7 Percentage India in kannada
GDP Growth 7 Percentage India in Kannada

ಜಿಡಿಪಿ ಬೆಳವಣಿಗೆ ಶೇಕಡಾ 7ಕ್ಕೆ ಕುಸಿತ

ಮೂಡೀಸ್‌ ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜಿನಲ್ಲಿ ಕಡಿತ ಮಾಡಿರುವುದು ಇದು ಎರಡನೇ ಬಾರಿ. “2022 ಮತ್ತು 2023ನೇ ಆರ್ಥಿಕ ವರ್ಷದಲ್ಲಿ ಕ್ರಮವಾಗಿ ಶೇ. 9.3 ಮತ್ತು ಶೇ. 7.9ರಷ್ಟು ಜಿಡಿಪಿ ಬೆಳವಣಿಗೆಯಾಗಲಿದೆ,” ಎಂದು ಈ ಹಿಂದೆ ಮೂಡೀಸ್‌ ಅಂದಾಜಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ. 8.8 ರಿಂದ 7.7 ಕ್ಕೆ ಕಡಿತ ಮಾಡಿತ್ತು. ಈಗ ಮತ್ತೆ ಜಿಡಿಪಿ ಬೆಳವಣಿಗೆ ಅಂದಾಜಿನಲ್ಲಿ ಕಡಿತ ಮಾಡಿದೆ.

 ಭಾರತದಲ್ಲಿ ಆರ್ಥಿಕ ಬೆಳವಣಿಗೆಯು ತ್ವರಿತವಾಗಿ ಚೇತರಿಸಿಕೊಳ್ಳಲಿದೆ ಎಂದಿದ್ದ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌, ಈಗ ದೇಶದ 2022ರ ಜಿಡಿಪಿ ಅಂದಾಜನ್ನು ಕಡಿತ ಮಾಡಿದೆ. ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 7.7 ರಿಂದ ಶೇ. 7ಕ್ಕೆ ಇಳಿಸಿದೆ. ಜಾಗತಿಕ ಮಟ್ಟಕ್ಕೂ ನಿಧಾನಗತಿಯ ಆರ್ಥಿಕತೆ, ದೇಶೀಯ ಬಡ್ಡಿ ದರದಲ್ಲಿ ಹೆಚ್ಚಳ ಮೊದಲಾದ ಅಂಶಗಳು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

ಹಣದುಬ್ಬರ ಏರಿಕೆ, ಬಡ್ಡಿ ದರ ಹೆಚ್ಚಳ ಕಾರಣ

ಭಾರತದಲ್ಲಿ 2022 ರ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 7ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಇದು ಶೇಕಡಾ 7.7ರಷ್ಟು ಇರಬಹುದು ಎಂದು ಅಂದಾಜಿಸಲಾಗಿತ್ತು. ಹೆಚ್ಚಿದ ಹಣದುಬ್ಬರ, ಅತಿಯಾದ ಬಡ್ಡಿ ದರ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆ ದರ ಕುಂಠಿತವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಿದ್ದೇವೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಾವು ಈ ಹಿಂದೆ ಅಂದಾಜಿಸಿದಷ್ಟು ಜಿಡಿಪಿ ಬೆಳವಣಿಗೆ ಹೊಂದುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ‘ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್ 2023-24’ ವರದಿಯಲ್ಲಿ ಮೂಡೀಸ್ ತಿಳಿಸಿದೆ.

ಜಾಗತಿಕ ಆರ್ಥಿಕತೆಯು ಕುಸಿತದ ಅಂಚಿನಲ್ಲಿದೆ. ಅನಿಶ್ಚಿತತೆ ಉನ್ನತ ಮಟ್ಟದಲ್ಲಿದೆ. ಹಣದುಬ್ಬರ ಏರಿಕೆ, ಹಣಕಾಸು ನೀತಿಗಳಲ್ಲಿ ಬಿಗಿ ಹಿಡಿತ, ವಿತ್ತೀಯ ಸವಾಲುಗಳು, ರಾಜಕೀಯ ಬದಲಾವಣೆಗಳು ಮತ್ತು ಹಣಕಾಸು ಮಾರುಕಟ್ಟೆಯ ಚಂಚಲತೆ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತಿದೆ ಎಂದು ವರದಿ ಹೇಳಿದೆ. 2023 ಹಾಗೂ 2024ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಲಿದೆ. ಪ್ರಮುಖ ದೇಶಗಳ ಸರಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್‌ಗಳು ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ 2024 ರಿಂದ ಆರ್ಥಿಕತೆಯು ಸ್ಥಿರವಾಗುತ್ತಾ ಸಾಗಬಹುದು ಎಂದು ಮೂಡೀಸ್‌ ಹೇಳಿದೆ.

ಇತರೆ ವಿಷಯಗಳು :

ಬೆಂಗಳೂರು ಟೆಕ್ ಶೃಂಗಸಭೆ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ

ರಾಜಸ್ಥಾನದ ನಾಥದ್ವಾರದ ಶಿವನ ಪ್ರತಿಮೆ ಲೋಕಾರ್ಪಣೆ

Comments are closed, but trackbacks and pingbacks are open.