ದಿಢೀರ್ ಏರಿಕೆಯತ್ತ ಹಾಲಿನ ಬೆಲೆ.! ಹಾಲು ಮಾರಾಟಗಾರರ ಮುಖದಲ್ಲಿ ಮಂದಹಾಸ, ಆಗಸ್ಟ್ 1 ರಿಂದ ಹೊಸ ಬೆಲೆ ನಿಗದಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಮತ್ತೆ ಏರಿಕೆಯನ್ನು ಕಂಡಿದೆ ನಂದಿನಿ ದರ, ಈ ಹೆಚ್ಚಳ ಯಾವಾಗಿನಿಂದ ಏರಿಕೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ನಂದಿನಿ ಹಾಲಿನ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿದೆ ಕಾಂಗ್ರೆಸ್ ಸರ್ಕಾರ ಹಾಗೂ KMF ಸಂಘಗಳು. ಮೊದಲು ನಂದಿನಿ ಘಟಕವು 5 ರೂಪಾಯಿ ಏರಿಕೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು ಆದ್ರೆ ಸರ್ಕಾರ ಅದನ್ನ 3 ರೂಪಾಯಿಗೆ ತಂದು ಇಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ನೇತೃತ್ವದಲ್ಲಿನ ಇಂದಿನ ಸಭೆಯಲ್ಲಿ 3 ರೂಪಾಯಿ ಏರಿಕೆಗೆ ಸರ್ಕಾರ ಎಸ್ ಎಂದಿದೆ ಎಂದು ಸರ್ಕಾರ ಮತ್ತು KMF ಹಾಲು ಉತ್ಪದನಾ ಘಟಕ ಸೂಚನೆ ನೀಡಿದೆ.
ಆಗಸ್ಟ್ 1 ರಿಂದ ಪರಿಷ್ಕೃತ ದರದಲ್ಲಿ ಹಾಲು ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಇದೀಗ ಎಲ್ಲಾ ವಸ್ತುಗಳ ಬೆಲೆಯು ಏರಿಕೆಯನ್ನು ಕಾಣುತ್ತಿದೆ. ಒಂದು ಕಡೆ ಹಾಲು ಉತ್ಪದಕರು ಸಂತೋಷ ಪಟ್ಟರೆ ಇನ್ನೊಂದು ಕಡೆ ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರು ಸರ್ಕಾರದ ವಿರುದ್ದ ಮುಗಿಬಿದ್ದಿದ್ದಾರೆ. ಮೊದಲೆ ಎಲ್ಲಾ ವಸ್ತುಗಲ ಬೆಲೆ ಏರಿಕೆಯಾಗಿದೆ( ಅಕ್ಕಿ, ಆಡುಗೆ ಎಣ್ಣೆ, ಚಿಕಾನ್, ಮೊಟ್ಟೆ, ತರಕಾರಿ, ಅಡುಗೆ ಅನಿಲ, ಪೇಟ್ರೋಲ್, ಡೀಸೆಲ್ ಎಲ್ಲಾ ವಸ್ತುಗಳ ಬೆಲೆ) ಗಗನಮುಖಿಯಾಗಿದೆ. ಲೀಟರ್ ಗೆ ಇನ್ನು ಮುಂದೆ 65 ರೂಪಾಯಿ ಪ್ರತಿ ಲೀಟರ್ ಗೆ ಅಗಲಿದೆ ಎಂದು ಕೆಎಮ್‌ಎಫ್ ಘಟಕ ತಿಳಿಸಿದೆ.
ಇತರೆ ವಿಷಯಗಳು:
ಕೋಟಿ ಕೋಟಿ ಹಣಕ್ಕೆ ದಾರಿಯಾಯ್ತು ʼಶಕ್ತಿʼ ಗ್ಯಾರಂಟಿ..! ರಾಜ್ಯದಲ್ಲಿ ಎಷ್ಟಾಯಿತು ಗೊತ್ತಾ ಹೆಚ್ಚುವರಿ ಹುಂಡಿ ಹಣ
Comments are closed, but trackbacks and pingbacks are open.