ಗ್ರಂಥಾಲಯ ಮಹತ್ವ ಪ್ರಬಂಧ

0

ಗ್ರಂಥಾಲಯ ಮಹತ್ವ ಪ್ರಬಂಧ, granthalaya mahatva bhagya prabandha kannada essay writing in kannada, ಗ್ರಂಥಾಲಯದ ಉಪಯೋಗಗಳು ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ:

ಈ ಲೇಖನಿ ಮೂಲಕ ಗ್ರಂಥಾಲಯದ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ.

ಪೀಠಿಕೆ:

ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ.ಸಾಹಿತ್ಯ,ಕಲೆ, ವಿಜ್ಞಾನ, ಕಾದಂಬರಿ, ಕವನ,ಕಥೆ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ, ಮೊದಲದ ಪ್ರಕಾರಗಳು ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತದೆ. ಕನ್ನಡ , ಇಂಗ್ಲೀಷ, ಉರ್ದು, ಹಿಂದಿ ಮುಂತಾದ ಭಾಷೆಯ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಕಾಣಬಹುದು.

ವಿಷಯ ವಿವರಣೆ:

ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತದೆ. ಜ್ಞಾನಾಭಿವೃದ್ದಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ ಎನಿಸುತ್ತದೆ. ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾರ್ಯವನ್ನು ಮಾಡುತ್ತಿದೆ.

ಪುಸ್ತಕ ಮನುಷ್ಯನ ಮಿತ್ರ, ಜ್ಞಾನವನ್ನು ನೀಡುವ ಕಾಮಧೇನು,ಮಾರ್ಗದರ್ಶಕ ಮಾಹಿತಿ ಪಡೆಯಲು ಪುಸ್ತಕ ಭಂಡಾರಗಳು ಬಹಳ ಮುಖ್ಯವಾಗಿದೆ. ಗ್ರಂಥಾಲಯದಲ್ಲಿ ನಾವು ಪುಸ್ತಕವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾತನಾಡದೇ ನಿಶ್ಯಬ್ಧವಾಗಿರಬೇಕು. ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ.

ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ ಹಾಗೂ ಗುರು ವಿದ್ದಂತೆ, ಮಾನವನ ಮನಸ್ಸಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕವಾಗಿದೆ. ಪ್ರತಿಯೊಂದು ವಿಷಯಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು ಗ್ರಂಥಾಲಯ ದಲ್ಲಿ ದೊರೆಯುತ್ತದೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳು, ದಿನಪತ್ರಿಕೆಗಳು ಸಿಗುತ್ತದೆ.

ಗ್ರಂಥಾಲಯಗಳಲ್ಲಿ ಬೇರೆ ಬೇರೆ ಭಾಷೆಯ ಪುಸ್ತಕಗಳು ದೊರೆಯುತ್ತದೆ. ಸಂಶೋಧಕರಿಗೆ, ಲೇಖಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹೀಗೆ ಎಲ್ಲಾ ವರ್ಗದ ಜನರಿಗೂ ಗ್ರಂಥಾಲಯಗಳು ಬೇಕು. ಗ್ರಂಥಾಲಯದಲ್ಲಿ ಬಡವ-ಶ್ರೀಮಂತ, ಚಿಕ್ಕವ-ದೊಡ್ಡವ , ಎಂಬ ಭೇದಭಾವ ಇಲ್ಲ. ಓದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಎಲ್ಲಾ ಪುಸ್ತಕವನ್ನು ಹಣಕೊಟ್ಟು ಕೊಂಡುಕೊಳ್ಳುವುದು ಅಸಾಧ್ಯ. ಅದರೆ ಗ್ರಂಥಾಲಯ ಈ ಕೊರತೆಯನ್ನು ನೀಗಿಸುತ್ತದೆ.

ಗ್ರಂಥಾಲಯ ಪುಸ್ತಕಗಳನ್ನು ಓದುವಾಗ ಹಾಳು ಮಾಡಬಾರದು, ಹಾಳೆ ಹಾರಿಯುವುದು, ಮಡಿಸುವುದು,ಕೊಳಕುಮಾಡುವುದು ಇತ್ಯಾದಿ ಮಾಡಬಾರದು. ನಿಗದಿತ ಸಮಯಕ್ಕೆ ಸರಿಯಾಗಿ ಪುಸ್ತಕವನ್ನು ಹಿಂತಿರುಗಿಸಬೇಕು. ಇದರಿಂದ ಬೇರೆಯವರಗೆ ಅಗತ್ಯವನ್ನು ಪೂರೈಸಿದಂತಾಗುತ್ತದೆ.

ಉಚಿತವಾಗಿ ಜನರಿಗೆ ಓದಲು, ಎರವಲು ಪಡೆಯುವ ಅವಕಾಶ ಮಾಡಿಕೊಟ್ಟಿದೆ. ಇವುಗಳು ಸಮರ್ಪಕವಾಗಿ ಬಳಸಿಕೊಳ್ಳವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ. ಓದುವ ಹವ್ಯಾಸವುಳ್ಳವರು ಗ್ರಂಥಾಲಯಗಳನ್ನು ದೇವಾಲಯದಂತೆ ಕಾಣುತ್ತಾರೆ. ಅಲ್ಲಿ ಜ್ಞಾನ ಎಂಬ ಆಹಾರ ಸೇವಿಸುವುದರಿಂದ ಅದರ ರುಚಿ ಅರಿವಾಗತ್ತದೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಬಹುದು.

ದೇಹಕ್ಕೆ ಅನ್ನ, ನೀರು, ಗಾಳಿ, ಎಷ್ಟು ಮುಖ್ಯವೋ ಹಾಗೆಯೇ ಮಾನವನ ವಿಕಾಸಕ್ಕೆ ಪುಸ್ತಕಗಳು ಬಹಳ ಮುಖ್ಯವಾಗಿದೆ. ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಡುತ್ತವೆ.

ಉಪಸಂಹಾರ:

ಈ ಮೂಲಕ ತಿಳಿಯುವುದೇನೇಂದರೆ ಪುಸ್ತಕದ ಮೌಲ್ಯ ಮತ್ತು ಸಾರ್ಥಕತೆಯನ್ನು ತಿಳಿಸಿಕೊಡುವಲ್ಲಿ ಹಾಗೆ ಜೀವನದ ಬಗ್ಗೆ ಭರವಸೆ ಮಾಡಿಸುವುದು ಪುಸ್ತಕದ ಪಾತ್ರ ದೊಡ್ಡದು. ಒಟ್ಟಾರೆಯಾಗಿ ಗ್ರಂಥಾಲಯಗಳು ನಮ್ಮ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ.

FAQ

ಗಂಥಾಲಯದ ಪಿತಾಮಹ ಯಾರು?

S.R ರಂಗನಾಥ್‌ ಗ್ರಂಥಾಲಯ ಪಿತಾಮಹ.

ಗ್ರಂಥಾಲಯ ದಿನಾಚರಣೆ ಯಾವಾಗ?

ಅಗಸ್ಟ್‌ 12 ಗ್ರಂಥಾಲಯ ದಿನಾಚರಣೆ

Leave A Reply